ಹೇರಿಕುದ್ರು : ಶ್ರೀ ಮಹಾಗಣಪತಿ ಯಕ್ಷೋತ್ಸವ ಸಮಿತಿ ಹೇರಿಕುದ್ರು ಇವರ ಸಂಯೋಜನೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಯಕ್ಷಹಬ್ಬ ಹೇರಿಕುದ್ರು 2025’ ಯಕ್ಷಗಾನ ಕಾರ್ಯಕ್ರಮವನ್ನು ದಿನಾಂಕ 05ರಿಂದ 08 ನವೆಂಬರ್ 2025ರಂದು ಪ್ರತಿ ದಿನ ಸಂಜೆ 7-00 ಗಂಟೆಗೆ ಹೇರಿಕುದ್ರು ಶ್ರೀ ಮಹಾಗಣಪತಿ ಮಾನಸ ಮಂದಿರದಲ್ಲಿ ಆಯೋಜಿಸಲಾಗಿದೆ.
ದಿನಾಂಕ 05 ನವೆಂಬರ್ 2025ರಂದು ಶ್ರೀಕಾಂತ್ ಕಲ್ಕೂರ್, ಸಂತೋಷ್ ಶೀರೂರ್, ಪ್ರವೀಣ್ ಬಾಳೆಕೆರೆ, ವಿಘ್ನೇಶ್ ಗಂಗೊಳ್ಳಿ, ವಿನಯ ಹಟ್ಟಿಯಂಗಡಿ ಇವರುಗಳಿಗೆ ‘ಯಕ್ಷಸಿಂಚನ ಪ್ರಶಸ್ತಿ ಪುರಸ್ಕಾರ’ ಪ್ರದಾನ ಮಾಡಲಾಗುವುದು. ಯಕ್ಷಕಲ್ಪ ಕಮಲಶಿಲೆ ಇವರಿಂದ ‘ಸಹ್ಯಾದ್ರಿ ಶಿಲೆ’, ದಿನಾಂಕ 06 ನವೆಂಬರ್ 2025ರಂದು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಲಿ ಹೇರಿಕುದ್ರು ಇವರಿಂದ ಯಕ್ಷ ತಪಸ್ವಿ ಮಹಾಬಲ ಹೇರಿಕುದ್ರು ವಿರಚಿತ ‘ನಾಗ ನಮನ’, ದಿನಾಂಕ 07 ನವೆಂಬರ್ 2025ರಂದು ಗೆಜ್ಜೆನಾದ ಯಕ್ಷಗಾನ ಕಲಾಮಂಡಳಿ ಕುಂದಾಪುರ ಇವರಿಂದ ದಿನೇಶ್ ಕೊಡವೂರು ವಿರಚಿತ ‘ಮಧುರ ಮಾಂಗಲ್ಯ’ ಮತ್ತು ದಿನಾಂಕ 08 ನವೆಂಬರ್ 2025ರಂದು ಯಕ್ಷಕಲಾ ಸಂಘ ಗುಲ್ವಾಡಿ ಇವರಿಂದ ನಾಗೇಶ್ ಗುಲ್ವಾಡಿ ವಿರಚಿತ ‘ದೈವಲೀಲೆ’ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

									 
					