ಪಾವಂಜೆ : ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮೀ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇವರ ಸಹಯೋಗದೊಂದಿಗೆ ಶ್ರೀ ಸುಬ್ರಾಯ ಹೊಳ್ಳ ಕಾಸರಗೋಡು ಮತ್ತು ಶ್ರೀ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದಲ್ಲಿ ‘ಯಕ್ಷಾಂತರಂಗ’ ಯಕ್ಷಗಾನ ಪ್ರಸಂಗ ಸಾಹಿತ್ಯ ಮತ್ತು ರಂಗ ನಡೆಗಳ ಮಾಹಿತಿ ಕಾರ್ಯಾಗಾರವನ್ನು ದಿನಾಂಕ 20 ಆಗಸ್ಟ್ 2025ರಿಂದ 24 ಆಗಸ್ಟ್ 2025ರವೆರೆಗೆ ಪ್ರತಿದಿನ ಸಂಜೆ ಗಂಟೆ 5-30ರಿಂದ 8-30ರ ತನಕ ಪಾವಂಜೆ ನಾಗವೃಜ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
• ಈ ಕಾರ್ಯಾಗಾರವು ಯಕ್ಷಗಾನ ಪ್ರಸಂಗ ಸಾಹಿತ್ಯ, ರಂಗನಡೆ, ಪುರಾಣ ಕಥನ ಮಾಲಿಕೆಯ ವ್ಯಾಪ್ತಿಯನ್ನು ಒಳಗೊಂಡಿದೆ.
• ಪ್ರಸಂಗ ಸಾಹಿತ್ಯವನ್ನು ಓದುವ ಬಗೆ, ಅರ್ಥವಿಸ್ತರಣೆಗೆ ಬೇಕಾದ ತಂತ್ರ, ರಂಗ ನಡೆಯ ಪ್ರಾಯೋಗಿಕ ತರಗತಿ ಸಹಿತ ಪ್ರಸಂಗಕ್ಕೆ ಪೂರಕವಾದ ಪ್ರಸಾದನ ಮತ್ತು ವೇಷಭೂಷಣದ ಪರಿಚಯವನ್ನು ಒಳಗೊಂಡಿದೆ.
• ಈ ಕಾರ್ಯಾಗಾರವು ಉಚಿತವಾಗಿದ್ದು ಮೇಳದ ಕಲಾವಿದರು, ಹವ್ಯಾಸಿ ಕಲಾವಿದರು ಮತ್ತು ಯಕ್ಷಗಾನಾಭ್ಯಾಸ ನಿರತ ವಿದ್ಯಾರ್ಥಿಗಳು ಭಾಗವಹಿಸಬಹುದು.
• ಭಾಗವಹಿಸಿದ ಪ್ರತಿನಿಧಿಗಳಿಗೆ ಪ್ರಮಾಣಪತ್ರ ಮತ್ತು ಪ್ರಯಾಣಭತ್ಯೆಯನ್ನು ನೀಡಲಾಗುವುದು.
• ಕಾರ್ಯಾಗಾರಕ್ಕೆ ಬೇಕಾದ ಪೂರಕ ಸಾಹಿತ್ಯವನ್ನು ಒದಗಿಸಲಾಗುವುದು.
• ಮೊದಲು ಹೆಸರು ನೋಂದಾಯಿಸಿದ 30 ಮಂದಿಗೆ ಮಾತ್ರ ಅವಕಾಶ.
• ಕಾರ್ಯಾಗಾರಕ್ಕೆ ಹೆಸರು ನೋಂದಾಯಿಸಲು ಕೊನೆಯ ದಿನಾಂಕ 18 ಆಗಸ್ಟ್ 2025.
ಹೆಚ್ಚಿನ ಮಾಹಿತಿ ಮತ್ತು ನೋಂದಾವಣೆಗೆ 9164521588 ಮಾದವ ಬಂಗೇರ ಮತ್ತು 9591105931 ಕೌಶಿಕ್ ರಾವ್ ಇವರನ್ನು ಸಂಪರ್ಕಿಸಿರಿ.