ಬೆಂಗಳೂರು : ರಂಗಮಂಡಲ ಇದರ ವತಿಯಿಂದ ‘ಯಕ್ಷಯಾತ್ರೆ’ ಮೂಡಲಪಾಯ ಯಕ್ಷಗಾನ ರೆಪರ್ಟರಿ ಪ್ರಾರಂಭಗೊಳ್ಳಲಿದೆ. ಯಾವುದೇ ರಂಗ ಶಿಕ್ಷಣ ಕೇಂದ್ರಗಳಲ್ಲಿ ರಂಗ ತರಬೇತಿ ಹೊಂದಿರದ, ಅಭಿನಯಿಸಲು ಇಚ್ಚಿಸುವ 20ರಿಂದ 30 ವರ್ಷದೊಳಗಿನ ಕುಣಿತ, ಹಾಡುಗಾರಿಕೆ ಬಲ್ಲಂತಹ ನಟಿಸಲು ಆಸಕ್ತಿ ಇರುವ ಯುವಕ, ಯುವತಿಯರು ಈ ಯಕ್ಷಯಾತ್ರೆ ರೆಪರ್ಟರಿಗೆ ಸೇರಬಹುದು.
* ಕನ್ನಡ ಭಾಷೆ ಬಲ್ಲವರಾಗಿರಬೇಕು.
* ಹಿರಿಯ ಕಲಾವಿದರಿಂದ ಶಿಫಾರಸ್ಸು ಪತ್ರ ತರಬೇಕು.
* ಆಧಾರ್ ಕಾರ್ಡ್ ಮತ್ತು ತಂದೆ ತಾಯಿಗಳ ಒಪ್ಪಿಗೆ ಪತ್ರ ಅಗತ್ಯವಿರುತ್ತದೆ
* ಗುರುಕುಲ ಮಾದರಿಯ ಮೂಡಲಪಾಯ ಯಕ್ಷಗಾನ ಶಿಬಿರ ಮತ್ತು ಪ್ರದರ್ಶನಕ್ಕೆ ಆಯ್ಕೆಯಾದವರು ಪ್ರಸಂಗದ ತಾಲೀಮೂ ಸೇರಿ 4 ತಿಂಗಳವರೆಗೆ ಯಕ್ಷಯಾತ್ರೆಯೊಡನೆ ಇರಬೇಕಾಗುತ್ತದೆ.
* ನೋಂದಾವಣೆಯ ಕೊನೆಯ ದಿನಾಂಕ 21 ಸೆಪ್ಟೆಂಬರ್ 2025.
* ಕಲಾವಿದರ ಆಯ್ಕೆಯನ್ನು ಆನ್ಲೈನ್ ಆಡಿಶನ್ ಮುಖಾಂತರ ದಿನಾಂಕ 05 ನವೆಂಬರ್ 2025 ಭಾನುವಾರ ನಡೆಸಲಾಗುವುದು.
* ನಿಮ್ಮ ಪ್ರತಿಭೆ ಹಾಗೂ ರಂಗ ಕಾಯಕವನ್ನು ಗಮನಿಸಿ ತಿಂಗಳ ಸಂಭಾವನೆ ನೀಡಲಾಗುವುದು ಆಸಕ್ತರು ಫೋನ್ ಹಾಗೂ ವಾಟ್ಸಪ್ ಮೂಲಕ ಹೆಸರನ್ನು ನೋಂದಾಯಿಸಬಹುದು.