11 ಏಪ್ರಿಲ್ 2023, ಮಂಗಳೂರು: ವಿಶ್ವಮಾನ್ಯ ಕಲೆಯಾಗಿರುವ ಯಕ್ಷಗಾನದ ಕುರಿತು ಯುವಸಮುದಾಯ ಆಕರ್ಷಿತರಾಗುತ್ತಿರುವುದು ಶ್ಲಾಘನೀಯ. ಶ್ರೀಮಂತ ಕಲೆಯಾದ ಯಕ್ಷಗಾನಕ್ಕೆ ಶೈಕ್ಷಣಿಕ ಸಂಸ್ಥೆಗಳ ಪ್ರೋತ್ಸಾಹ ಅಗತ್ಯ ಎಂದು ಮುಂಬಾಯಿಯ ವಿ.ಕೆ. ಸಮೂಹ ಸಂಸ್ಥೆಯ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು ಅಭಿಪ್ರಾಯಪಟ್ಟರು. ಅವರು ಸುರತ್ಕಲ್ ಗೋವಿಂದದಾಸ ಕಾಲೇಜಿನ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ನಾಲ್ಕುದಿವಸಗಳ ಅಂತರ್ ಕಾಲೇಜು ತೆಂಕುತಿಟ್ಟು ಮತ್ತು ಬಡಗುತಿಟ್ಟು ಯಕ್ಷಗಾನ ಸ್ಪರ್ಧೆ ಯಕ್ಷಯಾನ – 2023ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಜಮಾ ಉಗ್ರಾಣ ವಿಭಾಗದ ಭುಜಬಲಿ ಧರ್ಮಸ್ಥಳ ಮಾತನಾಡಿ ಯಕ್ಷಗಾನ ಕಲೆಯ ಬೆಳವಣಿಗೆಯಲ್ಲಿ ಕಲಾಪೋಷಕರ ಕೊಡುಗೆ ಅಪಾರವಾಗಿದ್ದು ಯುವಕಲಾವಿದರು ಸತತ ಅಭ್ಯಾಸದಿಂದ ಪ್ರಬುದ್ಧತೆಯನ್ನು ಗಳಿಸಬೇಕೆಂದರು.
ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿಪಿ. ಪಣಂಬೂರು ವೆಂಕಟ್ರಾಯ ಐತಾಳ ಯಕ್ಷಗಾನ ಅಧ್ಯಯನ ಕೇಂದ್ರ ಪಣಂಬೂರು ಮಕ್ಕಳ ಮೇಳದ ಗುರು ಶಂಕರ ನಾರಾಯಣ ಮೈರ್ಪಾಡಿ, ಪಟ್ಲಫೌಂಡೇಶನ್ ಸುರತ್ಕಲ್ ಘಟಕದ ಕಾರ್ಯದರ್ಶಿ ಗಂಗಾಧರ ಪೂಜಾರಿ ಶುಭಹಾರೈಸಿದರು.
ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಹಾಗೂ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ತೀರ್ಪುಗಾರರ ಪರವಾಗಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿಂದು ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಶ್ರೀರಂಗ ಹೊಸಬೆಟ್ಟು ವಿದ್ಯಾರ್ಥಿಗಳು ಯಕ್ಷಗಾನ ಕಲೆಯ ಕುರಿತು ಆಸಕ್ತಿ ತಾಳಬೇಕೆಂದರು.
ಕಾಲೇಜಿನ ಹಳೆವಿದ್ಯಾರ್ಥಿ ಯಕ್ಷಗಾನ ಕಲಾವಿದ ಹಾಗೂ ಪೋಷಕ ಮಾಧವಎಸ್ ಶೆಟ್ಟಿ ಬಾಳ ಅವರಿಗೆ ʼಯಕ್ಷಯಾನಪ್ರಶಸ್ತಿ- 2023ʼ ನೀಡಿ ಪುರಸ್ಕರಿಸಲಾಯಿತು. ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಕುಳಾಯಿ, ಯಕ್ಷಗಾನ ನಿರ್ದೇಶಕಿ ಪೂರ್ಣಿಮಾ ಯತೀಶ್ ರೈಉಪಸ್ಥಿತರಿದ್ದರು.
ಯಕ್ಷಯಾನದ ಸಂಚಾಲಕ ಪ್ರೊ. ರಮೇಶ್ ಭಟ್ ಎಸ್.ಜಿ. ಅವರನ್ನು ಸನ್ಮಾನಿಸಲಾಯಿತು.
ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ಹರೀಶ ಆಚಾರ್ಯ ಪಿ. ಸ್ವಾಗತಿಸಿದರು. ಉಪಪ್ರಾಂಶುಪಾಲ ಪ್ರೊ. ರಮೇಶ್ ಭಟ್ ಎಸ್.ಜಿ. ವಂದಿಸಿದರು. ಕ್ಯಾಪ್ಟನ್ ಸುಧಾ ಯು. ಕಾರ್ಯಕ್ರಮ ನಿರೂಪಿಸಿದರು.
ಬಡಗುತಿಟ್ಟಿನ ಐದು ಕಾಲೇಜು ತಂಡಗಳು ಹಾಗೂ ತೆಂಕುತಿಟ್ಟಿನ ಹನ್ನೆರಡು ಕಾಲೇಜುತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಗೋವಿಂದದಾಸ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳ ತಂಡ ಯಕ್ಷಗಾನ ಪ್ರದರ್ಶನ ನೀಡಿದವು.
ಬಡಗುತಿಟ್ಟು ಯಕ್ಷಗಾನ ವಿಭಾಗದಲ್ಲಿ ಸಮಗ್ರ ತಂಡ ಪ್ರಶಸ್ತಿಯನ್ನು ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಹಾಗೂ
ತೆಂಕುತಿಟ್ಟು ಯಕ್ಷಗಾನವಿ ಭಾಗದಲ್ಲಿ ಸಮಗ್ರ ತಂಡ ಪ್ರಶಸ್ತಿಯನ್ನುಆಳ್ವಾಸ್ ಕಾಲೇಜು, ಮೂಡಬಿದಿರೆ ಪಡೆದವು.
ದ್ವಿತೀಯ ಸಮಗ್ರ ತಂಡ ಪ್ರಶಸ್ತಿಯನ್ನು ಬಡಗುತಿಟ್ಟು ಯಕ್ಷಗಾನ ವಿಭಾಗದಲ್ಲಿ ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ,
ತೆಂಕುತಿಟ್ಟು ಯಕ್ಷಗಾನ ವಿಭಾಗದಲ್ಲಿ ಎಸ್.ಡಿ.ಎಂ. ಕಾನೂನು ಕಾಲೇಜು, ಮಂಗಳೂರು ಪಡೆದುಕೊಂಡವು.
ತೃತೀಯ ಸಮಗ್ರ ತಂಡ ಪ್ರಶಸ್ತಿಯನ್ನು ಬಡಗುತಿಟ್ಟು ಯಕ್ಷಗಾನ ಸ್ಪರ್ಧೆಯಲ್ಲಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿ ಮತ್ತು
ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯಲ್ಲಿ ಎಸ್.ಡಿ.ಎಂ. ಕಾಲೇಜು, ಉಜಿರೆ ಗಳಿಸಿದರು.
ಸಮಗ್ರ ವೈಯಕ್ತಿಕ ಪ್ರಶಸ್ತಿ: ಬಡಗುತಿಟ್ಟು
ಪ್ರಥಮ : ವೈಷ್ಣವಿ, ಎಸ್.ಎಂ.ಎಸ್ ಕಾಲೇಜು ಬ್ರಹ್ಮಾವರ,
ದ್ವಿತೀಯ : ವಿದಿತಾ, ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ,
ತೃತೀಯ : ಪೂಜಾ ಆಚಾರ್, ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ
ಸಮಗ್ರ ವೈಯಕ್ತಿಕ ಪ್ರಶಸ್ತಿ – ತೆಂಕುತಿಟ್ಟು
ಪ್ರಥಮ: ನಿರೀಕ್ಷಾ ಎಂ.ಡಿ.ಎಸ್. ಕಾಲೇಜು, ಕುಳಾಯಿ
ದ್ವಿತೀಯ: ಸಾತ್ವಿಕಾಡಾ. ಪಿ. ದಯಾನಂದ ಪೈ ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಂಗಳೂರು
ತೃತೀಯ :ಕೃತಿಕ್ ಶೆಟ್ಟಿ,ಆಳ್ವಾಸ್ ಕಾಲೇಜು, ಮೂಡಬಿದಿರೆ
ವಿಭಾಗ ವೈಯಕ್ತಿ ಕಪ್ರಶಸ್ತಿ -ಬಡಗುತಿಟ್ಟು
ಪಗಡಿವೇಷ:
ಪ್ರಥಮ: ಕಾವ್ಯ ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ
ದ್ವಿತೀಯ: ದರ್ಶನ್ ಡಿ. ಕೋಟ್ಯಾನ್ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿ
ಸ್ತ್ರೀವೇಷ:
ಪ್ರಥಮ: ಸಂಜನಜೆ. ಸುವರ್ಣಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿ
ದ್ವಿತೀಯ: ಯಜುಷಾ ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ
ರಾಜವೇಷ:
ಪ್ರಥಮ: ಶ್ರೀನಿಧಿ ಖಾರ್ವಿ ಡಾ. ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು,ಕುಂದಾಪುರ
ದ್ವಿತೀಯ: ಧನ್ರಾಜ್ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿ
ಬಣ್ಣದವೇಷ:
ಪ್ರಥಮ: ರಂಜಿತ್ ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ
ದ್ವಿತೀಯ :ಅನೀಶ ಸರಳಾಯ, ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೆಜು, ಉಡುಪಿ
ಹಾಸ್ಯ :
ಪ್ರಥಮ: ಲಕ್ಷ್ಮೀಕಾಂತ್, ಡಾ .ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ
ದ್ವಿತೀಯ: ನವನೀತ್ ಎಸ್.ಎಂ.ಎಸ್. ಕಾಲೇಜು, ಬ್ರಹ್ಮಾವರ
ಪ್ರೋತ್ಸಾಹಕ ಪ್ರಶಸ್ತಿ: ಸ್ಕಂದ, ಎಂ.ಜಿ.ಎಂ. ಕಾಲೇಜು, ಉಡುಪಿ
ವಿಭಾಗ ವೈಯಕ್ತಿಕ ಪ್ರಶಸ್ತಿ -ತೆಂಕುತಿಟ್ಟು
ಪುಂಡುವೇಷ :
ಪ್ರಥಮ: ಪ್ರಶಾಂತ್ ಐತಾಳ್, ಎಸ್.ಡಿ.ಎಂ. ಕಾನೂನು ಕಾಲೇಜು, ಮಂಗಳೂರು
ದ್ವಿತೀಯ: ಸನತ್ ಕುಮಾರ್, ಡಾ. ಪಿ. ದಯಾನಂದ ಪೈ ಪಿ. ಸತೀಶ್ ಪೈ ಸರಕಾರಿ ಕಾಲೇಜು, ಮಂಗಳೂರು
ಸ್ತ್ರೀವೇಷ:
ಪ್ರಥಮ: ಈಶ್ವರಿ ಆರ್ ಶೆಟ್ಟಿ, ಆಳ್ವಾಸ್ ಕಾಲೇಜು, ಮೂಡಬಿದಿರೆ
ದ್ವಿತೀಯ: ದಿಶಾ, ಎಸ್.ಡಿ.ಎಂ. ಕಾನೂನು ಕಾಲೇಜು, ಮಂಗಳೂರು
ರಾಜವೇಷ:
ಪ್ರಥಮ: ಪ್ರಜ್ವಲ್ ಶೆಟ್ಟಿ, ಆಳ್ವಾಸ್ ಕಾಲೇಜು, ಮೂಡಬಿದಿರೆ
ದ್ವಿತೀಯ: ಧನುಷ್ಜೋಗಿ, ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜು, ಕಟೀಲು
ಬಣ್ಣದವೇಷ:
ಪ್ರಥಮ: ವೆಂಕಟ ಯಶಸ್ವಿ ಕೆ., ಎಸ್.ಡಿ.ಎಂ. ಕಾನೂನು ಕಾಲೇಜು, ಮಂಗಳೂರು
ದ್ವಿತೀಯ: ಜೀವನ್, ಆಳ್ವಾಸ್ ಕಾಲೇಜು, ಮೂಡಬಿದಿರೆ
ಹಾಸ್ಯ:
ಪ್ರಥಮ: ಪ್ರಣವ್ ಮೂಡಿತ್ತಾಯ, ಎನ್.ಎಂ.ಎ.ಎಂ. ತಾಂತ್ರಿಕ ಮಹಾವಿದ್ಯಾಲಯ, ನಿಟ್ಟೆ
ದ್ವಿತೀಯ: ಶಶಾಂಕ್, ಶ್ರೀ ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜು, ಕಟೀಲು
ಪ್ರೋತ್ಸಾಹಕ ಪ್ರಶಸ್ತಿ:
ಸನ್ನಿಧಿ, ಪೊಂಪೈಕಾಲೇಜು, ಐಕಳ
ವಂದನ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು
ಸ್ವರ್ಣಶ್ರೀ, ಕೆನರಾ ಕಾಲೇಜು, ಮಂಗಳೂರು
ಭುವನ್ ಶೆಟ್ಟಿ, ಸ್ವಸ್ತಿಕ್ ನ್ಯಾಶನಲ್ ಸ್ಕೂಲ್, ಮಂಗಳೂರು
ಶ್ರೇಯಾ ಎ. ವಿವೇಕಾನಂದ ಕಾಲೇಜು, ಪುತ್ತೂರು