ಬಂಟ್ವಾಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಉಚಿತ ಯಕ್ಷಗಾನ ತರಬೇತಿ ಅಭಿಯಾನದಡಿ ನಡೆಯುತ್ತಿರುವ ಯಕ್ಷ ಶಿಕ್ಷಣದ ಉದ್ಘಾಟನಾ ಸಮಾರಂಭವು ದಿನಾಂಕ 25-06-2024ರಂದು ಕೊಯಿಲ ಸರಕಾರಿ ಪ್ರೌಢ ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ದುರ್ಗಾ ದಾಸ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಸರಪಾಡಿ ಘಟಕದ ಸಂಚಾಲಕರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದರಾದ ಸರಪಾಡಿ ಅಶೋಕ ಶೆಟ್ಟಿ ಪ್ರಸ್ತಾಪನೆ ಮೂಲಕ ಯಕ್ಷಧ್ರುವ ಯಕ್ಷ ಶಿಕ್ಷಣ ಇದರ ಮಹತ್ವವನ್ನು ತಿಳಿಸಿದರು. ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಸೌಮ್ಯ ಸ್ವಾಗತಿಸಿದರು. ಸರಪಾಡಿ ಘಟಕದ ಅಧ್ಯಕ್ಷರಾದ ಶಶಿಕಾಂತ್ ಜೆ. ಶೆಟ್ಟಿ, ರಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೆಟ್ಟು, ವಸಂತ ಕುಮಾರ್ ಅಣ್ಣಳಿಕೆ, ಪರಮೇಶ್ವರ ರಾಯಿ, ಯಕ್ಷಗಾನ ಗುರುಗಳಾದ ಪ್ರೇಮರಾಜ್ ಕೊಯಿಲ ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕರಾದ ಜನಾರ್ದನ್ ಇವರು ಧನ್ಯವಾದ ಸಮರ್ಪಣೆಗೈದರು. ತರಬೇತುದಾರರಾದ ಪ್ರೇಮ್ ರಾಜ್ ಕೊಯಿಲ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹೆಜ್ಜೆ ಕಲಿಸಿ ತರಬೇತಿಗೆ ಚಾಲನೆ ನೀಡಿದರು.