Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಪರಂಪರಾ ಅಡಿಟೋರಿಯಂನಲ್ಲಿ ‘ಸುವರ್ಣ ಪರ್ವ -11’ | ಜೂನ್ 08

    June 4, 2025

    ಗಮಕಕಲಾ ಪ್ರತಿಷ್ಠಾನದ ವಾರ್ಷಿಕ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ | ಜೂನ್ 07

    June 4, 2025

    ಶುಕೀ ರಾವ್ ಹಾಗೂ ಶಿವಾನಿ ಕೇಂದ್ರ ಸರಕಾರದ ಶಿಷ್ಯವೇತನಕ್ಕೆ ಆಯ್ಕೆ

    June 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರು ವಿವಿಯ ಯಕ್ಷಾಯಣ ಸರಣಿ -3 ಉದ್ಘಾಟನೆ
    Literature

    ಮಂಗಳೂರು ವಿವಿಯ ಯಕ್ಷಾಯಣ ಸರಣಿ -3 ಉದ್ಘಾಟನೆ

    February 29, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ನಡೆಯುತ್ತಿರುವ ಕಲಾವಿದರ ಯಕ್ಷ ಪಯಣದ ಸ್ವಗತ ಯಕ್ಷಾಯಣ ದಾಖಲೀಕರಣ ಸರಣಿಯ ಮೂರನೇ ಕಂತು ಬಿ.ಸಿ. ರೋಡಿನ ‘ಯಕ್ಷದೀಪ’ ಮನೆಯಲ್ಲಿ ದಿನಾಂಕ 28-02-2024ರಂದು ನಡೆಯಿತು.
    ಈ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಮಾತನಾಡಿ “ಕರ್ನಾಟಕ ಸರಕಾರವು ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ಯಕ್ಷಗಾನ ಕಲಾವಿದರಿಗೆ ನೀಡುತ್ತಿರುವ ಮಾಸಾಶನ ರೂ.2,000/-ವನ್ನು ಕನಿಷ್ಟ ರೂ.5000/-ಗಳಿಗೆ ಹೆಚ್ಚಿಸಿ ಉಪಕರಿಸಬೇಕು. ಈಗ ನೀಡುತ್ತಿರುವ ಮಾಸಾಶನ ಕಲಾವಿದರ ಔಷಧಿಗೂ ಸಾಕಾಗುತ್ತಿಲ್ಲ. ಆದ್ದರಿಂದ ಸರಕಾರ ಈ ಕುರಿತು ಸ್ಪಂದಿಸಬೇಕು. ಹಿಂದಿನ ಕಾಲದಲ್ಲಿ ಕಲಾವಿದರೆಲ್ಲಾ ಜೊತೆಗಿದ್ದು ಪ್ರತಿಯೊಂದು ಪಾತ್ರವನ್ನೂ ನೋಡಿಕೊಂಡು ತಮ್ಮ ಅಭಿನಯ, ಅರ್ಥವನ್ನು ಕಟ್ಟುತ್ತಿದ್ದರು. ಅದರಿಂದ‌ ಒಟ್ಟು ಪ್ರದರ್ಶನಕ್ಕೆ ಸಾವಯವ ಶಿಲ್ಪವಿರುತ್ತಿತ್ತು. ಈಗ ತನ್ನ ಪಾತ್ರಕ್ಕಾಗುವಾಗ ಬರುವುದು ಮುಗಿದ ತಕ್ಷಣ ಹೊರಡುವುದು ಎಂಬಂತಾಗಿದೆ. ಇದರಿಂದ‌ ಪ್ರದರ್ಶನದ ಒಟ್ಟಂದಕ್ಕೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಕಲಾವಿದರು ಯಾವುದೇ ಜಾತಿ, ಧರ್ಮಕ್ಕೆ ವ್ಯಂಗ್ಯ ಮಾಡುವಂತೆ ಮಾತಾಡದೇ ಆಯಾ ಸಮಾಜದ ಆಶಯಗಳನ್ನು ಎತ್ತರಿಸುವಂತೆ ಮಾತಾಡಿದರೆ ಸಾಮರಸ್ಯಕ್ಕೆ ತೊಂದರೆಯಾಗುವುದಿಲ್ಲ. ನಾನು ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶದಲ್ಲಿ ಬಪ್ಪಬ್ಯಾರಿ ವೇಷ ಹಾಕಿದ ಬಳಿಕ ಮುಸ್ಲಿಂ ಮಹಿಳೆಯರೇ ಬಂದು ಅಭಿನಂದಿಸಿದ್ದಾರೆ. ಕಲಾವಿದ ಸಾಮರಸ್ಯಕ್ಕೆ ಧಕ್ಕೆ ಬರುವಂತೆ ವರ್ತಿಸಬಾರದು” ಎಂದು ಹೇಳಿದರು.
    “ಆರು ದಶಕಗಳಿಗೂ ಹೆಚ್ಚು ಕಾಲ ವೇಷಧಾರಿಯಾಗಿ ಎಲ್ಲಾ ಮಾದರಿಯ ವೇಷಗಳನ್ನೂ ನಿರ್ವಹಿಸಿ ಪ್ರಸಿದ್ಧಿಗೆ ಬಂದ ಶಿವರಾಮ ಜೋಗಿಯವರು ಪರಿಪೂರ್ಣ ಕಲಾವಿದ. ಪ್ರೌಢ ಅರ್ಥಗಾರಿಗೆ, ಉತ್ತಮ ಕಂಠ ಮತ್ತು ಅಂಗಸೌಷ್ಠವ ಹಾಗೂ ಪರಂಪರೆಯ ನಾಟ್ಯವೈಭವದಿಂದ ತೆಂಕುತಿಟ್ಟು ಯಕ್ಷಗಾನಕ್ಕೆ ಗೌರವ ತಂದುಕೊಟ್ಟ ಕಲಾವಿದರು. ಎಳವೆಯಲ್ಲಿಯೇ ಯಕ್ಷರಂಗವನ್ನು ಪ್ರವೇಶಿಸಿದ ಜೋಗಿಯವರು ಸುರತ್ಕಲ್ ಮೇಳದಲ್ಲಿ ಸುದೀರ್ಘ ಅವಧಿ ವೇಷಧಾರಿಯಾಗಿ ಕನ್ನಡ ತುಳು ಎರಡೂ ಪ್ರಸಂಗಗಳನ್ನೂ ನಿರ್ವಹಿಸಿದವರು. ಶೇಣಿ, ಸಾಮಗ, ಕೋಳ್ಯೂರು, ಕೊಕ್ಕಡ ಮೊದಲಾದ ಹೆಸರಾಂತ ಕಲಾವಿದರೊಂದಿಗೆ ರಂಗ ಹಂಚಿಕೊಂಡ ಜೋಗಿಯವರ ವಾಲಿ, ಇಂದ್ರಜಿತು, ಕಾರ್ತ್ಯವೀರ್ಯ, ಭೀಷ್ಮ, ಕರ್ಣ, ಋತುಪರ್ಣ ಮೊದಲಾದ ವೇಷಗಳು ಜನಮನ್ನಣೆಗೆ ಪಾತ್ರವಾಗಿವೆ. ಇಂದು ಯಕ್ಷಗಾನದಲ್ಲಿ ಪ್ರದರ್ಶನಗಳಿಗೆ ಪ್ರಧಾನ್ಯ ಸಿಗುತ್ತಿದೆ. ಆದರೆ ಯಕ್ಷಗಾನ ಕುರಿತ ವಿಮರ್ಶೆ ಅಧ್ಯಯನ ಕಡಿಮೆ. ಕೇಂದ್ರವು ಹಿರಿಯ ಕಲಾವಿದರ ಯಕ್ಷಯಾನದ ದಾಖಲೀಕರಣದ ಮೂಲಕ ಅಧ್ಯಯನಕ್ಕೆ ಬೇಕಾದ ಪೂರಕ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದೆ. ಆಧುನಿಕ ಸಾಮಾಜಿಕ ಜಾಲತಾಣಗಳಲ್ಲೂ ಯಕ್ಷಗಾನ ಅಧ್ಯಯನ ವಿಮರ್ಶೆಯ ಚಟುವಟಿಕೆಗಳು ನಡೆಯಬೇಕು” ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಧನಂಜಯ ಕುಂಬ್ಳೆ ಹೇಳಿದರು.
    ಸಮಾರಂಭದಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರದ ಸಂಶೋಧನಾಧಿಕಾರಿ ಡಾ.ಸತೀಶ್ ಕೊಣಾಜೆ, ಸಿಬ್ಬಂದಿ ಸ್ವಾತಿ ರಾವ್, ರತ್ನಾಕರವರ್ಣಿ ಪೀಠದ ಸಂಶೋಧನಾ ಸಹಾಯಕ ಪ್ರಸಾದ್, ದಾಖಲೀಕರಣದ ಹರಿಪ್ರಸಾದ್, ಲತಾ ಶಿವರಾಮ ಜೋಗಿ ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಉಚ್ಚಿಲ ಸೋಮೇಶ್ವರದಲ್ಲಿ ‘ಭಾವೈಕ್ಯ ಸಂಗೀತ ಸ್ನೇಹ ಸಮ್ಮಿಲನ’ ಕಾರ್ಯಕ್ರಮ
    Next Article ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯಿಂದ ‘ಬ್ಯಾರಿ ಸಾಹಿತ್ಯ ಕಮ್ಮಟ’
    roovari

    Add Comment Cancel Reply


    Related Posts

    ಬೆಂಗಳೂರಿನ ಪರಂಪರಾ ಅಡಿಟೋರಿಯಂನಲ್ಲಿ ‘ಸುವರ್ಣ ಪರ್ವ -11’ | ಜೂನ್ 08

    June 4, 2025

    ಗಮಕಕಲಾ ಪ್ರತಿಷ್ಠಾನದ ವಾರ್ಷಿಕ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ | ಜೂನ್ 07

    June 4, 2025

    ಕೊಂಡೆವೂರಿನಲ್ಲಿ ತುಲುವೆರೆ ಕಲ ಸಂಘಟನೆಯ ಎರಡನೇ ‘ವರ್ಸೋಚ್ಚಯ’

    June 3, 2025

    ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ದೀಪಾಭಾಸ್ತಿಯವರಿಗೆ ಗೃಹ ಸನ್ಮಾನ

    June 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.