ತೆಕ್ಕಟ್ಟೆ: : ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ-29’ನೇ ಕಾರ್ಯಕ್ರಮ ದಿನಾಂಕ 29-06-2024ರಂದು ತೆಕ್ಕಟ್ಟೆ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕಲ್ಯಾಣ ಮಂದಿರದ ಮ್ಯಾನೇಜರ್ ದೀಪಕ್ ಇವರನ್ನು ಅಭಿನಂದಿಸಿದ ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಗಣಪತಿ ಟಿ. ಶ್ರೀಯಾನ್ ಮಾತನಾಡಿ “ಸಾಂಸ್ಕೃತಿಕ ಚಿಂತನೆಯಿಂದ ಸಮಾಜದ ನ್ಯೂನತೆಗಳ ಸಮತೋಲನ ಸಾಧ್ಯ. ಕಲೆಯನ್ನು, ಕಲಾವಿದರನ್ನು, ಕಲಾ ಸಂಸ್ಥೆಗಳನ್ನು ಗೌರವಿಸುವುದು ಸಮಾಜದ ಎಲ್ಲಾ ಗೌರವಾನ್ವಿತರ ಕರ್ತವ್ಯ. ಈ ನಿಟ್ಟಿನಲ್ಲಿ ಯಶಸ್ವೀ ಕಲಾವೃಂದದ 25 ನೇ ಸಂಭ್ರಮಾಚರಣೆಯಲ್ಲಿ ಸಂಸ್ಥೆಗೆ ಹೊಸ ತಲೆಮಾರಿನ ಅರ್ಥದಾರಿಗಳ ಪರಿಶೋಧ, ಅರ್ಥಾಂಕುರಕ್ಕೆ ಅವಕಾಶ ನೀಡಿ, ತೆಕ್ಕಟ್ಟೆ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದ ಮಾಲಕ ನಿತ್ಯಾನಂದ ಗಾಣಿಗ ಸಾಂಸ್ಕೃತಿಕ ಕಳಕಳಿಯಿಂದ ಸಂಸ್ಥೆಯನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಿರುವುದು ನಿಜಕ್ಕೂ ಶ್ಲಾಘನೀಯ.” ಎಂದು ಅಭಿಪ್ರಾಯಪಟ್ಟರು.
ಉದ್ಯಮಿ ಗೋಪಾಲ ಪೂಜಾರಿ ಬಾಳೆಹಿತ್ಲು, ಕಲಾವಿದ ಹರೀಶ್ ಕಾವಡಿ, ಪ್ರಶಾಂತ್ ಆಚಾರ್ ಕೆಳಕಳಿ, ರಾಘವೇಂದ್ರ ಮಣೂರು ಉಪಸ್ಥಿತರಿದ್ದ ಈ ಕಾರ್ಯಕ್ರಮದ ನಿರ್ವಾಹಣೆಯನ್ನು ಹೆರಿಯ ಮಾಸ್ಟರ್ ಮಾಡಿದರು. ಬಳಿಕ ಅರ್ಥಾಂಕುರ-9 ಯಕ್ಷಗಾನ ತಾಳಮದ್ದಳೆ ‘ಸುಭದ್ರ ಕಲ್ಯಾಣ’ ರಂಗದಲ್ಲಿ ಪ್ರಸ್ತುತಿಗೊಂಡಿತು.