ಮೈಸೂರು : ಸ್ಪಂದನ ಸಾಂಸ್ಕೃತಿಕ ಪರಿಷತ್ತು ಮೈಸೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಮತ್ತು ವಿಸ್ಮಯ ಪ್ರಕಾಶನ ಮೈಸೂರು ಇದರ ವತಿಯಿಂದ ‘ಯುಗಾದಿ ಕವಿ-ಕಾವ್ಯ ಸಂಭ್ರಮ’ ರಾಜ್ಯ ಮಟ್ಟದ ಕವಿಮೇಳವನ್ನು ದಿನಾಂಕ 06 ಏಪ್ರಿಲ್ 2025ರಂದು ಬೆಳಗ್ಗೆ 10-00 ಗಂಟೆಗೆ ಮೈಸೂರು ವಿಜಯ ನಗರ ಮೊದಲ ಹಂತ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಇದರ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭವನ್ನು ಪ್ರಸಿದ್ಧ ಸಾಹಿತಿ ಡಾ. ಸಬಿಹಾ ಭೂಮಿ ಗೌಡ ಇವರು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸಮಾಜಮುಖಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಂಡ್ಯದ ಕವಯಿತ್ರಿ ಹಾಗೂ ಅಂಕಣಕಾರರಾದ ಡಾ. ಶುಭಶ್ರೀ ಪ್ರಸಾದ್ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ 01 ಹಾಗೂ ಸಾಹಿತಿ ಮತ್ತು ಪ್ರಗತಿಪರ ಚಿಂತಕರಾದ ಶ್ರೀ ಹಡವನಹಳ್ಳಿ ವೀರಣ್ಣ ಗೌಡ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ 02 ಪ್ರಸ್ತುತಗೊಳ್ಳಲಿದೆ. ಸಂಜೆ 4-00 ಗಂಟೆಗೆ ಸಮಾರೋಪ ಹಾಗೂ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಪ್ರದಾನ ನಡೆಯಲಿದೆ.