ಬೆಂಗಳೂರು : ಶ್ರೀ ಮಾರಿಕಾಂಬಾ ನೃತ್ಯ ಕಲಾಕೇಂದ್ರ (ರಿ.) ಇದರ 9ನೇ ವಾರ್ಷಿಕೋತ್ಸವ ಪ್ರಯುಕ್ತ ಯುಗಾದಿ ನೃತ್ಯೋತ್ಸವ ಕಾರ್ಯಕ್ರಮವು ದಿನಾಂಕ 04 ಏಪ್ರಿಲ್ 2025ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಚಿವರಾದ ಸನ್ಮಾನ್ಯ ಶ್ರೀ ರಾಮಲಿಂಗ ರೆಡ್ಡಿ ಉದ್ಘಾಟಿಸಿದರು. ಅಧ್ಯಕ್ಷರಾದ ಶ್ರೀ ಎನ್. ಸಂತೋಷ್ ಹೆಗಡೆ, ಮುಖ್ಯ ಅತಿಥಿಗಳಾಗಿ ಶ್ರೀ ವಿಶ್ವನಾಥ ಪ್ರಸಾದ್, ಮಂಜುನಾಥ ಪುತ್ತೂರು, ಮಂಜುಶ್ರೀ ಇವರು ಪಾಲ್ಗೊಂಡರು.
ನೃತ್ಯ ಶಾಲೆಯ ಸಂಸ್ಥಾಪಕಿಯಾದ ವಿದುಷಿ ಸ್ಮಿತಾ ಪ್ರಕಾಶ್ ಇವರ ನಿರ್ದೇಶನದಲ್ಲಿ ಶಾಲೆಯ 80ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ಹಾಗೂ ‘ವೀರ ಸನ್ಯಾಸ’ ಎಂಬ ವಿಶೇಷ ನೃತ್ಯ ರೂಪಕ ಪ್ರದರ್ಶನಗೊಂಡಿತು.
ನೃತ್ಯ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ವಿದ್ವಾನ್ ಶ್ರೀ ರೋಹಿತ್ ಭಟ್ ಉಪ್ಪೂರು ಇವರ ತಂಡದ ಅಧ್ಭುತ ಹಿಮ್ಮೇಳದಲ್ಲಿ ನೃತ್ಯ ಪ್ರದರ್ಶನ ಮೂಡಿಬಂದವು.