ಮಲ್ಲತಹಳ್ಳಿ : ಯುಗಾದಿ ಹಬ್ಬದ ಪ್ರಯುಕ್ತ ‘ಪದ’ ಸಂಸ್ಥೆ ಹಾಗೂ ಚಿರಂತ ಟ್ರಸ್ಟ್ ವತಿಯಿಂದ ಆಯೋಜಿಸಿದ ‘ಬೇವುಬೆಲ್ಲ ಬಲ್ಲವರೆಲ್ಲ’ ಎಂಬ ಶೀರ್ಷಿಕೆಯಲ್ಲಿ ಸಂಸ್ಕೃತಿಕ ಕಾರ್ಯಕ್ರಮವು ದಿನಾಂಕ 30 ಮಾರ್ಚ್ 2025ರಂದು ಬೆಂಗಳೂರಿನ ಮಲ್ಲತಹಳ್ಳಿಯಲ್ಲಿ ನಡೆಯಿತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರ ಅಧ್ಯಕ್ಷತೆಯಲ್ಲಿ ನಡೆಡಾ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪ್ರೊಫೆಸರ್ ಎಲ್ಲೆನ್ ಮುಕುಂದರಾಜ್, ಡಾಕ್ಟರ್ ಶ್ರೀನಿವಾಸ್ ಮೂರ್ತಿ ಮತ್ತು ರಂಗಿಕರ್ಮಿ ಮೈಕೋ ಶಿವಶಂಕರ ಭಾಗವಹಿಸಿದರು.
ಪದಾದೇವರಾಜ್ ಪ್ರಾಸ್ತಾವಿಕ ಮಾತನಾಡಿ, ಶಂಕರ್ ಭಾರತಿಪುರ ಸ್ವಾಗತಿಸಿ, ರವೀಂದ್ರನಾಥ್ ಸಿರಿವರ ಕಾರ್ಯಕ್ರಮವನ್ನು ನಿರ್ವಹಿಸಿ, ಸುಮಾರು ಹತ್ತು ಜನ ಕವಿಗಳು ಕವನ ವಾಚನ ಮಾಡಿದರು. ಪದ್ಮ ಟಿ., ಚಿನ್ಮಯಿ, ವಿಜಯಲಕ್ಷ್ಮೀ ನುಗ್ಗೆ ಹಳ್ಳಿ, ಡಾ. ಸುಬ್ರಮಣ್ಯ ಸ್ವಾಮಿ, ಡಾ. ಲಕ್ಷ್ಮಿ ನಾರಾಯಣ, ಟಿ. ರಂಗಸ್ವಾಮಿ, ಎಂ. ಎಂ. ಆನಂದ್, ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ, ಮುಂತಾದವರು ಕವನವಾಚನ ಮಾಡಿದರು.
ಪ್ರೊಫೆಸರ್ ಮುಕುಂದರಾಜು ಮಾತನಾಡಿ “ಸರಕಾರವನ್ನು ನಂಬಿ ಕುಳಿತುಕೊಳ್ಳಬಾರದು. ಇಂತಹ ಸಂಸ್ಥೆಗಳು ನಿರಂತರವಾಗಿ ಸಾಂಸ್ಕೃತಿಕವಾಗಿ ತೊಡಗಿಕೊಂಡಿರುವುದು ಹರ್ಷದಾಯಕ ಎಲ್ಲರಿಗು ಅಭಿನಂದನೆಗಳು.” ಎಂದರು.
ಡಾ. ಕಾಂ. ಶ್ರೀನಿವಾಸ್ ಮೂರ್ತಿ ಮಾತನಾಡಿ “ಕನ್ನಡ ಭಾಷೆ ಅಳಿವಿನ ಅಂಚಿನಲ್ಲಿದೆ. ಇಂಗ್ಲಿಷ್ ನಲ್ಲಿ ಕನ್ನಡವನ್ನು ಬರೆದುಕೊಂಡು ಓದುವ, ಮಾತನಾಡುವ ಮಕ್ಕಳು ಇಂದು ಕಾಣುತಿದ್ದು, ಇದನ್ನು ನೋಡುತ್ತಿದ್ದರೆ ಆತಂಕವಾಗುತ್ತದೆ. ಕನ್ನಡವನ್ನು, ಕನ್ನಡತನವನ್ನು ಉಳಿಸಿ ಬೆಳೆಸಬೇಕಾದರೆ ಮಕ್ಕಳಿಗೆ ಕನ್ನಡದಲ್ಲೇ ಓದಲು ಹಾಗೂ ಬರೆಯಲು ಅಭ್ಯಾಸ ಮಾಡಬೇಕು” ಎಂದರು. ರಂಗಕರ್ಮಿ ಶಿವಶಂಕರ್ ಇವರು ಕುವೆಂಪು ವಿರಚಿತ ನಾಟಕವನ್ನು ವಾಚಿಸಿದರು.
ಜಲಗಾರನಾಗಿ ತಮ್ಮನ್ನು ತಾವೇ ಆಸ್ವಾದಿಸಿಕೊಂಡರು ಕಾರ್ಯಕ್ರಮದ ಉದ್ಘಾಟನೆ ಮತ್ತು ಅಧ್ಯಕ್ಷತೆ ವಹಿಸಿದ ಡಾ. ಪುರುಷೋತ್ತಮ ಬಳಿಮಲೆ ಮಾತನಾಡಿ “ಕನ್ನಡದ ಬಗ್ಗೆ ನನಗೂ ಆತಂಕ ಇದೆ. ಕನ್ನಡವನ್ನು ಉಳಿಸುವ ಬೆಳೆಸುವ ಅಗತ್ಯತೆ ಸರ್ಕಾರ ಮತ್ತು ಜನಸಾಮಾನ್ಯರ ಜವಾಬ್ದಾರಿಯು ಆಗಿದೆ” ಎಂದರು. ಕಾರ್ಯಕ್ರಮದಲ್ಲಿ ಪದಾ ದೇವರಾಜ್, ಶಂಕರ್ ಭಾರತಿಪುರ, ಸಬ್ಬನಹಳ್ಳಿ ರಾಜು, ಗೀತಾ ಬತ್ತದ್, ದಿವ್ಯ ಬಸವರಾಜ್, ಭವ್ಯ ಮತ್ತು ಸಂವಿಧಾನ ಮಂಜು ಹಾಡುಗಳ ಮೂಲಕ ಜನರನ್ನು ರಂಗಿಸಿದರು. ಕಾರ್ಯಕ್ರಮಕ್ಕೆ ಆಗವಿಸಿದ್ದ ರವೀಂದ್ರನಾಥ್ ಸೊರಗಾವಿ ಅವರನ್ನು ಅತಿಥಿ ಗಾಯಕರಾಗಿ ಹಾಡುವಂತೆ ಕೋರಿದಾಗ ಪ್ರೀತಿಯಿಂದ ಬಂದು ದನಿಗೂಡಿಸಿದರು. ಒಟ್ಟಾರೆ ಯುಗಾದಿಯ ಸಂಭ್ರಮ ಕಲಾ ಗ್ರಾಮದಲ್ಲಿ ಸಾಂಸ್ಕೃತಿಕ ವೈಭವದಿಂದ ಕೂಡಿತ್ತು