ಮಂಗಳೂರು : ಕರ್ನಾಟಕ ಕರಾವಳಿ ನೃತ್ಯ ಕಲಾಪರಿಷತ್, ಮಂಗಳೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಡನೆ ಆಯೋಜಿಸುವ ಈ ಆರ್ಥಿಕ ವರುಷದ 8ನೇ ಕಾರ್ಯಕ್ರಮ “ಯುವ ನೃತ್ಯ ಪ್ರತಿಭೋತ್ಸವ 2023” ದಿನಾಂಕ 19-11-2023ರ ಆದಿತ್ಯವಾರದಂದು ಸಾಯಂಕಾಲ ಘಂಟೆ 4.00ಕ್ಕೆ ಮಂಗಳೂರಿನ ಮಲ್ಲಿಕಟ್ಟೆಯ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾ ಶ್ರೀ ಬಿರುದಾಂಕಿತ, ನಾಟ್ಯಾಚಾರ್ಯ ಕಮಲಾಕ್ಷ ಆಚಾರ್ ಉದ್ಘಾಟಿಸಿ, ನೃತ್ಯ ಪ್ರದರ್ಶನ ನೀಡಲಿರುವ ಯುವ ಕಲಾವಿದೆಯರಿಗೆ ಶುಭ ಹಾರೈಸಿದರು. ಕರ್ನಾಟಕ ಕಲಾ ನೃತ್ಯ ಪರಿಷತ್ತಿನ ಅಧ್ಯಕ್ಷರಾದ ವಿದ್ವಾನ್ ಯು.ಕೆ. ಪ್ರವೀಣ್, ನೃತ್ಯ ಗುರುಗಳಾದ ವಿದ್ವಾನ್ ಸುದರ್ಶನ್, ವಿದುಷಿ ಭಾರತಿ ಸುರೇಶ್, ವಿದುಷಿ ಡಾ. ವಿದ್ಯಾಶ್ರೀ ಮುರಳಿಧರ್, ವಿದುಷಿ ಸೌಮ್ಯ ಸುಧೀಂದ್ರ, ಅಲ್ಲದೆ ಅನೇಕ ನೃತ್ಯ ಗುರುಗಳು ಉಪಸ್ಥಿತರಿದ್ದರು. ಮಂಗಳೂರಿನ ನೃತ್ಯ ಗುರುಗಳ ಹತ್ತು ಮಂದಿ ಯುವ ನೃತ್ಯ ಕಲಾವಿದೆಯರು ನೃತ್ಯ ಪ್ರದರ್ಶನ ನೀಡಿದರು. ಕಾರ್ಯಕ್ರಮವನ್ನು ವಿದುಷಿ ಶ್ರೀಲತಾ ನಾಗರಾಜ್ ಇವರು ನಿರೂಪಿಸಿದರು.