ಮಂಗಳೂರು : ಕರಾವಳಿ ಕರ್ನಾಟಕದಲ್ಲೇ ಪ್ರಸಿದ್ಧ ತಂಡ ಎಂದೇ ಗುರುತಿಸಿಕೊಂಡಿರುವ ತುಳು ಮತ್ತು ಕನ್ನಡ ಚಿತ್ರನಟ ಸಂದೀಪ್ ಶೆಟ್ಟಿ ರಾಯಿ ಇವರ ನಾಯಕತ್ವದ ಹಾಗೂ ರಮೇಶ್ ಶೆಟ್ಟಿ ಮಿಜಾರು ಸಾರಥ್ಯದ ‘ಕಲಾಶ್ರೀ ಕುಸಾಲ್ದ ಕಲಾವಿದೆರ್ ಬೆದ್ರ’ ಇದರ 5ನೇ ವಾರ್ಷಿಕೋತ್ಸವ ಹಾಗೂ ಈ ವರ್ಷದ ಹೊಸ ನಾಟಕದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಪುರಭವನದಲ್ಲಿ ದಿನಾಂಕ 11-08-2023ರಂದು ನಡೆಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ವೇದವ್ಯಾಸ್ ಕಾಮತ್, ಡಾ.ದೇವದಾಸ್ ಕಾಮಿಕಾಡ್, ವಿಜಯ ಕುಮಾರ್ ಕೊಡಿಯಲ್ ಬೈಲ್, ಶಿವಶರಣ್ ಶೆಟ್ಟಿ, ಲೀಲಾಕ್ಷ ಕರ್ಕೇರಾ, ಬಿ.ಜೆ.ಪಿ. ವಕ್ತಾರ ಕಿರಣ್ ರೈ, ಭೋಜರಾಜ್ ವಾಮಂಜೂರು, ಸುನಿಲ್ ಕುಮಾರ್ ನೆಲ್ಲಿಗುಡ್ಡೆ ಹಾಗೂ ಬ್ರಿಜೇಶ್ ಚೌಟ ಹಾಗೂ ಗಣ್ಯಾತಿಗಣ್ಯರು ಉಪಸ್ಥಿತರಿದ್ದು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ನಾಲ್ಕು ಜನ ಸಾಧಕರಾದ ಶ್ವಾನ ಪ್ರೇಮಿ ಶ್ರೀಮತಿ ರಜನಿ ಶೆಟ್ಟಿ, ಹಿರಿಯ ನಾಟಿ ವೈದ್ಯರಾದ ಶ್ರೀ ಉಗ್ಗಪ್ಪ ಪೂಜಾರಿ, ರಂಗಭೂಮಿ ಮತ್ತು ತುಳು ಸಿನಿಮಾ ರಂಗಕ್ಕೆ ಕೊಡುಗೆ ನೀಡಿದ ಶ್ರೀ ಪ್ರಕಾಶ್ ಶೆಟ್ಟಿ ಧರ್ಮನಗರ ಹಾಗೂ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಇವರೆಲ್ಲರನ್ನು ಸನ್ಮಾನಿಸಿ ಗೌರವಿಸಲಾಯಿತು. ಆನಂತರ ವೇದಿಕೆಯಲ್ಲಿ ಈ ವರ್ಷದ ಹೊಸನಾಟಕದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸಂದೀಪ್ ಶೆಟ್ಟಿ ರಾಯಿ ನಿರ್ದೇಶನದ ‘ತಿಗಲೆಗ್ ದಿವೊಂಡೆರ್’ ಎನ್ನುವ ಹೊಸ ನಾಟಕ ಈ ವರ್ಷ ಮೂಡಿಬರಲಿದೆ.
ಆ ಬಳಿಕ ಮಾತನಾಡಿದ ಡಾ.ದೇವದಾಸ್ ಕಾಪಿಕಾಡ್ ತಂಡ ಕಟ್ಟುವುದು ಅಷ್ಟು ಸುಲಭದ ಕೆಲಸವಲ್ಲ, ಈ ತಂಡ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಎಲ್ಲಾ ನಾಟಕ ತಂಡದ ಜೊತೆ ನಾವು ಇದ್ದೇವೆ ಎಂದು ಶುಭಹಾರೈಸಿದರು. ಈ ಸಂದರ್ಭ ಕಲಾಶ್ರೀ ತಂಡದ ಎಲ್ಲಾ ಕಲಾವಿದರನ್ನು ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ರಶ್ಮಿತ್ ಶೆಟ್ಟಿ, ಅನುಪ್ ಸಾಗರ್, ಸ್ವರಾಜ್ ಶೆಟ್ಟಿ, ಶೇಖರ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು. ಖ್ಯಾತ ನಿರೂಪಕ ಹೇಮಚಂದ್ರ ಕೈರಂಗಳ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ರಮೇಶ್ ಮಿಜಾರ್ ಸಾರಥ್ಯದ ಸಂದೀಪ್ ಶೆಟ್ಟಿ ರಾಯಿ ರಚಿಸಿ, ನಟಿಸಿ, ನಿರ್ದೇಶಿಸಿದ ‘ನಾಲಾಯಿ ಮಗುರುಜಿ’ ನಾಟಕ ಪ್ರದರ್ಶನಗೊಂಡಿತು.