ಬೆಂಗಳೂರು : ಪ್ರವರ ಥಿಯೇಟರ್ ಬೆಂಗಳೂರು ಇದರ ದಶಕದ ಸಂಭ್ರಮದಲ್ಲಿ ನಾಟಕ, ರಂಗಗೀತೆ, ಸಂವಾದ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 25-08-2023, 26-08-2023 ಮತ್ತು 27-08-2023ರಂದು ಬೆಂಗಳೂರಿನ ಹನುಮಂತನಗರ, ಕೆ.ಹೆಚ್. ಕಲಾಸೌಧದಲ್ಲಿ ನಡೆಯಲಿದೆ.
ದಿನಾಂಕ 25-08-2023ರಂದು ಸಂಜೆ 5:30ಕ್ಕೆ ದಶಕದ ಸಂಭ್ರಮದ ಉದ್ಘಾಟನೆ ಕಾರ್ಯಕ್ರಮ. ಅತಿಥಿಗಳಾಗಿ ಹಿರಿಯ ರಂಗಕರ್ಮಿಗಳಾದ ಶ್ರೀ ಗುಂಡಣ್ಣ ಸಿ.ಕೆ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ವಿಶ್ವನಾಥ್ ಹಿರೇಮಠ, ಕನ್ನಡ ಪ್ರಭದ ಜೋಗಿ ಬರಹಗಾರರು ಮತ್ತು ಪುರವಣಿ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರಾದ ಡಾ. ಅಜಯ್ ಪ್ರಕಾಶ್ ಬಿ.ವಿ. ಭಾಗವಹಿಸಲಿದ್ದಾರೆ. ಘಂಟೆ 6ರಿಂದ ಬೆಂಗಳೂರಿನ ರಂಗ ತಂಡಗಳಿಂದ ರಂಗ ಗೀತೆಗಳು ಹಾಗೂ 7.15ಕ್ಕೆ ಶ್ರೀರಂಗಪಟ್ಟಣದ ನಿರ್ದಿಗಂತ ಪ್ರಸ್ತುತ ಪಡಿಸುವ ನಾಟಕ ‘ಗಾಯಗಳು’. ಕಥೆ, ಕವನ, ಕಾದಂಬರಿ, ನಾಟಕ ಆಧಾರಿತ ರಂಗರೂಪಕ ಇದಾಗಿದೆ. ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನ ಡಾ. ಶ್ರೀಪಾದ ಭಟ್ ಇವರದ್ದು.
ದಿನಾಂಕ 26-08-2023ರಂದು ಸಂಜೆ 5:30ಕ್ಕೆ ಸಂವಾದ ಕಾರ್ಯಕ್ರಮ ‘ಸಮಕಾಲೀನ ರಂಗಭೂಮಿಯ ಸವಾಲುಗಳು ಮತ್ತು ನಮ್ಮ ಪ್ರತಿಸ್ಪಂದನೆ’. ಚರ್ಚೆ ನಡೆಸಿಕೊಡುವವರು ರಂಗಕರ್ಮಿಯಾದ ಹನುರಾಮ ಸಂಜೀವ, ಸಂವಾದದಲ್ಲಿ ಪಾಲ್ಗೊಳ್ಳುವವರು ಪ್ರಜಾವಾಣಿ ಪುರವಣಿ ಮುಖ್ಯಸ್ಥರಾದ ವಿಶಾಖ ಎನ್., ನಾಟಕಕಾರರಾದ ಡಾ. ಬೇಲೂರು ರಘುನಂದನ್, ರಂಗಕರ್ಮಿಗಳಾದ ಶ್ರೀಮತಿ ಛಾಯಾ ಭಾರ್ಗವಿ, ಪಿ.ಡಿ. ಸತೀಶ್ಚಂದ್ರ ಮತ್ತು ಅಭಿಮನ್ಯು ಭೂಪತಿ. 6:30ಕ್ಕೆ ‘ಪ್ರವರ ಪ್ರಶಸ್ತಿ’ ಪ್ರದಾನ ಸಮಾರಂಭ ಪ್ರಶಸ್ತಿ ಪುರಸ್ಕೃತರು ಯುವ ರಂಗಕರ್ಮಿ ಗೌತಮ ಉಪಾಧ್ಯ ಎ. ಇವರು. ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬನಶಂಕರಿ ವಿ. ಅಂಗಡಿಯವರು ಭಾಗವಹಿಸಲಿದ್ದಾರೆ. ಸಂಜೆ 7:15ಕ್ಕೆ ಮೈಸೂರಿನ ನಿರಂತರ ಫೌಂಡೇಶನ್ ಪ್ರಸ್ತುತ ಪಡಿಸುವ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕೃತಿಗಳ ಆಧಾರಿತ ನಾಟಕ ‘ಗೊರೂರು’ ಪ್ರದರ್ಶನಗೊಳ್ಳಲಿದೆ. ರಂಗಪಠ್ಯ, ರಂಗವಿನ್ಯಾಸ ಮತ್ತು ನಿರ್ದೇಶನ ಮಂಜುನಾಥ್ ಎಲ್. ಬಡಿಗೇರ ಇವರದ್ದು.
ದಿನಾಂಕ 27-08-2023ರಂದು ಸಂಜೆ 6:15ಕ್ಕೆ ಪ್ರವರ ಥಿಯೇಟರ್ ದರ್ಶಕದ ಒಳನೋಟ ಸಮಾರೋಪ ಸಮಾರಂಭ ನಡೆಯಲಿದ್ದು, ಅತಿಥಿಗಳಾಗಿ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್, ಖ್ಯಾತ ನಗೆ ಬರಹಗಾರರಾದ ಎಂ.ಎಸ್. ನರಸಿಂಹಮೂರ್ತಿ, ಹಿರಿಯ ರಂಗಕರ್ಮಿಯಾದ ಮಾಲತೇಶ್ ಬಡಿಗೇರ ಮತ್ತು ದಿಸ್ಕಿಲಾ ಫ್ಯಾಕ್ಟರಿಯ ಮುಖ್ಯಸ್ಥರಾದ ಜೇಕಬ್ ಸ್ವಾಮಿನಾಥನ್ ಭಾಗವಹಿಸಲಿದ್ದಾರೆ. 7:15ಕ್ಕೆ ಪ್ರವರ ಥಿಯೇಟರ್ ಪ್ರಸ್ತುತ ಪಡಿಸುವ ಜಯಂತ ಕಾಯ್ಕಿಣಿ ರಚನೆಯ ಹಾಗೂ ಹನು ರಾಮ ಸಂಜೀವ ವಿನ್ಯಾಸ ಮತ್ತು ನಿರ್ದೇಶನದ ನಾಟಕ ‘ಜತೆಗಿರುವನು ಚಂದಿರ’ ಪ್ರದರ್ಶನಗೊಳ್ಳಲಿದೆ.
ಸರ್ವರಿಗೂ ಸ್ವಾಗತ | ಪ್ರವೇಶ ದರ : ನಿಮಗೆ ಇಷ್ಟವಾದಷ್ಟು. ಹೆಚ್ಚಿನ ವಿವರಗಳಿಗಾಗಿ : +91 9686869676