ಪುತ್ತೂರು: ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಇದರ 55ನೇ ವರ್ಷದ ಪ್ರಯುಕ್ತ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಕಲ್ಲಮೆ – ಸರ್ವೆ ಸಹಯೋಗದಲ್ಲಿ ದಿನಾಂಕ 26-08-2023ರಿಂದ 01-09-2023ರವರೆಗೆ ‘ಶ್ರೀ ರಾಮಾಯಣ ದರ್ಶನಂ ತಾಳಮದ್ದಳೆ ಸಪ್ತಾಹ’ವು ಮಠದಲ್ಲಿ ಜರಗಲಿದೆ.
ದಿನಾಂಕ 26-08-2023ನೇ ಶನಿವಾರದಂದು ಕಲ್ಲಮೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕರಾದ ಡಾ. ಸೀತಾರಾಮ ಭಟ್ ದೀಪ ಪ್ರಜ್ವಲಿಸಿ ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ. ಬಳಿಕ ‘ಶ್ರೀರಾಮ ವನ ಗಮನ’ ತಾಳಮದ್ದಳೆ ಜರಗಲಿದೆ.
ದಿನಾಂಕ 27-08-2023ರಂದು ‘ಭರತಾಗಮನ’, 28-08-2023ರಂದು ‘ಪಂಚವಟಿ’, 29-08-2023ರಂದು ‘ವಾಲಿ ಮೋಕ್ಷ’, 30-08-2023ರಂದು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಕಲಾವಿದರಿಂದ ‘ಚೂಡಾಮಣಿ’, ದಿನಾಂಕ 31-08-2023ರಂದು ‘ಅತಿಕಾಯ ಮೋಕ್ಷ’ ಹಾಗೂ ಸಪ್ತಾಹದ ಕೊನೆಯ ದಿನ 01-09-2023ರಂದು ಸಂಜೆ 5.30ರಿಂದ ‘ಶ್ರೀ ರಾಮ ನಿರ್ಯಾಣ’ ತಾಳಮದ್ದಳೆ ನಡೆಯಲಿದೆ.
ಈ ಸಪ್ತಾಹದಲ್ಲಿ ಪ್ರಸಿದ್ಧ ಕಲಾವಿದರೊಂದಿಗೆ ಹವ್ಯಾಸಿ ಕಲಾವಿದರು ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದ್ದು, ಸಪ್ತಾಹದ ಯಶಸ್ಸಿಗೆ ಕಲಾಭಿಮಾನಿಗಳು ಸರ್ವ ರೀತಿಯಲ್ಲಿ ಸಹಕರಿಸಬೇಕೆಂದು ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘದ ಅಧ್ಯಕ್ಷ ಭಾಸ್ಕರ ಬಾರ್ಯರು ತಿಳಿಸಿರುತ್ತಾರೆ.