ಉಡುಪಿ : ದಿನಾಂಕ 23-09-2023 ಮತ್ತು 24-09-2023ರಂದು ಅಮೇರಿಕಾದ ಕ್ಯಾಲಿಫೋರ್ನಿಯಾದ ಹೇವಾರ್ಡ್ನ ಶಾಬೂ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಕೂಟದ ಆಯೋಜನೆಯಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನಕ್ಕೆ ‘ಯಕ್ಷಗಾನ ತರಬೇತಿ’ ನೀಡಲು ಯಕ್ಷಗುರು ಕೆ.ಜಿ. ಗಣೇಶ್ ಅಮೆರಿಕಾಕ್ಕೆ ತೆರಳಿದ್ದಾರೆ. ಕೆ.ಜೆ. ಗಣೇಶ್ ಇವರು ಈ ಹಿಂದೆ ಏಳು ಬಾರಿ ಅಮೇರಿಕಾಕ್ಕೆ ತೆರಳಿ, ಅಲ್ಲಿ ವಾಸವಿರುವ ನಮ್ಮ ಊರಿನವರಿಗೆ ಯಕ್ಷಗಾನ ತರಬೇತಿ ನೀಡಿರುತ್ತಾರೆ. ಈ ಬಾರಿ ‘ಚಕ್ರವ್ಯೂಹ’ ಎಂಬ ಪ್ರಸಂಗವನ್ನು ನಿರ್ದೇಶಿಸಿ, ಭಾಗವತರಾಗಿ ಭಾಗವಹಿಸಲಿದ್ದಾರೆ.
ದಿನಾಂಕ 01-10-2023ರಂದು ಸಾನ್ವಾನ್ಯ ಸನಾತನ ಧರ್ಮಕೇಂದ್ರದಲ್ಲಿ ಗಣೇಶೋತ್ಸವ ಪ್ರಯುಕ್ತ ‘ಮೀನಾಕ್ಷಿ ಕಲ್ಯಾಣ’ ಹಾಗೂ ದಿನಾಂಕ 07-10-2023ರಂದು ‘ವೀರಮಣಿ ಕಾಳಗ’ ಎಂಬ ಪ್ರಸಂಗಗಳನ್ನು ನಿರ್ದೇಶಿಸಲಿದ್ದಾರೆ.