ಮಂಗಳೂರು: ಸಂಗೀತ ಪರಿಷತ್ ಮಂಗಳೂರು ಮತ್ತು ಭಾರತೀಯ ವಿದ್ಯಾಭವನ ಸಂಸ್ಥೆಗಳ ಸಂಯುಕ್ತ ಆಶಯದಲ್ಲಿ ಮಂಗಳೂರು, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಸಂಗೀತಾಭ್ಯಾಸಿಗಳಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಸರ್ಧೆಗಳನ್ನು ಆಯೋಜಿಸಲಾಗಿದೆ.
15 ವರ್ಷಗಳಿಗಿಂತ ಕೆಳಗಿನವರು ಜೂನಿಯರ್ ಹಾಗೂ 20 ವರ್ಷಗಳಿಗಿಂತ ಕೆಳಗಿನವರು ಸೀನಿಯರ್ ವಿಭಾಗದಲ್ಲಿ ಸ್ಪರ್ಧಿಸಬಹುದು. ಸ್ಪರ್ಧೆಗಳು ದಿನಾಂಕ 15-10-2023ರಂದು ಭಾರತೀಯ ವಿದ್ಯಾಭವನದಲ್ಲಿ ನಡೆಯಲಿವೆ. ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಯು ಎರಡು ವಿಳಂಬ ಕಾಲ ಮತ್ತು ಎರಡು ಮಧ್ಯಮ ಕಾಲದ ಕೃತಿಗಳನ್ನು ಹಾಡಲು ಸಮರ್ಥರಿರಬೇಕು. ಸೀನಿಯರ್ ವಿಭಾಗದಲ್ಲಿ ಸ್ಪರ್ಧಿಯು ಒಂದು ವರ್ಣ, ಮೂರು ಬೇರೆ ಬೇರೆ ವಾಗ್ಗೇಯಕಾರರ ಒಂದೊಂದು ಕೃತಿಗಳನ್ನು ಆಲಾಪನೆ, ನೆರವಲ್, ಸ್ವರ ಪ್ರಸ್ತಾರ ಸಹಿತ ಮತ್ತು ಒಂದು ದೇವರ ನಾಮ/ತಿಲ್ಲಾನ/ ಜಾವಳಿಗಳನ್ನು ಹಾಡಲು ತಯಾರಿ ನಡೆಸಬೇಕು.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ 10-10-2023. ವಿಜೇತರಾದವರನ್ನು ಮಂಗಳೂರು ಸಂಗೀತೋತ್ಸವದ ಸಂದರ್ಭ ಗೌರವಿಸಲಾಗುವುದು. ಅರ್ಜಿಗಳನ್ನು ಸಂಗೀತ ಪರಿಷತ್ ಮಂಗಳೂರು 12-1-33, ಸಿಂಧೂರ, ನ್ಯೂಫೀಲ್ಡ್ ರಸ್ತೆ, ಮಹಾ ಮಾಯ ದೇವಸ್ಥಾನದ ಹತ್ತಿರ, ರಥಬೀದಿ, ಮಂಗಳೂರು- 575001 ಅಥವಾ ಇಮೇಲ್ [email protected]ಗೆ ಕಳಿಸಬಹುದು.