ಉಡುಪಿ : ರಂಗಭೂಮಿ (ರಿ.) ಉಡುಪಿ ಆಯೋಜಿಸುತ್ತಿರುವ 2 ದಿನಗಳ ವಿವಿಧ ರಂಗ ತರಬೇತಿಯ ಸರಣಿ ಕಾರ್ಯಾಗಾರದ 13ನೇ ಶಿಬಿರವು
ದಿನಾಂಕ 14-10-2023ನೇ ಶನಿವಾರ ಹಾಗೂ 15-10-2023ನೇ ಭಾನುವಾರ ಬೆಳಿಗ್ಗೆ 9.00 ರಿಂದ ಸಂಜೆ 7.00ರ ವರೆಗೆ ಉಡುಪಿಯ ಎಂ.ಜಿ.ಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆಯಲಿದೆ.
ರಂಗಭೂಮಿ (ರಿ.) ಉಡುಪಿ ಉಡುಪಿಯಲ್ಲಿ 2021ರ ಅಕ್ಟೋಬರ್‌ನಿಂದ ಪ್ರತೀ ತಿಂಗಳ 2ನೇ ಯಾ 3ನೇ ವಾರಾಂತ್ಯದಲ್ಲಿ
ರಾಜ್ಯದ ಹಲವಾರು ಹೆಸರಾಂತ ರಂಗಕರ್ಮಿಗಳ ಸಹಕಾರದೊಂದಿಗೆ 2 ದಿನಗಳ ವಿವಿಧ ರಂಗ ತರಬೇತಿಯ ಸರಣಿ ಕಾರ್ಯಾಗಾರವನ್ನು
ಆಯೋಜಿಸುತ್ತಿದೆ. ಈ ಬಾರಿ ಹೆಸರಾಂತ ನಿರ್ದೇಶಕ ಮತ್ತು ತಂತ್ರಜ್ಞ ನೀನಾಸಂ ಪದವೀಧರರಾದ ಶ್ರೀ ರಿಯಾಜ್ ಸಿಹಿಮೊಗೆ ಹಾಗೂ ಹೆಸರಾಂತ ನಿರ್ದೇಶಕಿ, ತಂತ್ರಜ್ಞೆ ಮತ್ತು ಎನ್.ಎಸ್.ಡಿ. ಪದವೀಧರೆಯಾದ ಡಾ. ಸಹನ ಪಿಂಜಾರ್ ಈ ಶಿಬಿರವನ್ನು ನಡೆಸಿಕೊಡಲಿದ್ದಾರೆ.
ಶ್ರೀ ರಿಯಾಜ್ ಸಿಹಿಮೊಗೆ:
ನೀನಾಸಂ ರಂಗ ಶಿಕ್ಷಣ ಕೇಂದ್ರ ಪದವೀಧರರಾದ ಇವರು ನಾಟಕ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡಿದ್ದಿದ್ದಾರೆ. ಕಳೆದ 15ವರ್ಷಗಳಿಂದ ರಂಗ ಭೂಮಿಯಲ್ಲಿ ನಟ, ನಿರ್ದೇಶಕ ಹಾಗೂ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ. ಸಹನ ಪಿಂಜಾರ್
ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರಾದ ಇವರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರದರ್ಶನ ಕಲೆ ನಾಟಕ ವಿಭಾಗದಲ್ಲಿ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಶಿಬಿರದ ಊಟೋಪಚಾರಕ್ಕಾಗಿ ರೂಪಾಯಿ 300 ಶುಲ್ಕ ನಿಗದಿಪಡಿಸಿದ್ದು, 16 ವರ್ಷ ಮೇಲ್ಪಟ್ಟ, ನೈಜ ಆಸಕ್ತಿ ಇರುವ ಮೊದಲು ನೋಂದಾಯಿಸಿದ ನಿಗದಿತ ಸಂಖ್ಯೆಯ ಶಿಬಿರಾರ್ಥಿಗಳಿಗೆ ಅವಕಾಶಹೆಚ್ಚಿನ ಮಾಹಿತಿಗಾಗಿ ಪ್ರದೀಪ್‌ಚಂದ್ರ ಕುತ್ಪಾಡಿ-9448952847, ಶ್ರೀಪಾದ ಹೆಗಡೆ 9845111449, ಪೂರ್ಣಿಮಾ ಸುರೇಶ್ – 9731812468, ವಿವೇಕಾನಂದ -9449367595, ಆನಂದ ಮೇಲಂಟ-9886181209 ಇವರನ್ನು ಸಂಪರ್ಕಿಸಬಹುದು.