ಧಾರವಾಡ : ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯು ಆಯೋಜಿಸಿದ ರಾಜ್ಯಮಟ್ಟದ ಕವನ ಸ್ಪರ್ಧೆಯ ವಿಜೇತರ ಪಟ್ಟಿ ಪ್ರಕಟಗೊಂಡಿದೆ.
ಪ್ರಥಮ ಬಹುಮಾನ
ಶ್ರೀಮತಿ ಸ್ನೇಹಲತಾ ದಿವಾಕರ್ ಕುಂಬ್ಳೆ (ಕಾಸರಗೋಡು)
ದ್ವಿತೀಯ ಬಹುಮಾನ
ಶ್ರೀ ಸದಾಶಿವ ಸೊರಟೂರು (ಹೊನ್ನಾಳಿ)
ತೃತೀಯ ಬಹುಮಾನ
ಶ್ರೀಮತಿ ರಂಜಿತಾ ಪಿ. ಆರ್ (ಮೈಸೂರು)
ಮೆಚ್ಚುಗೆಯ ಬಹುಮಾನ
ಶ್ರೀ ಶಿವಕುಮಾರ ಚೆನ್ನಪ್ಪನವರ (ರಾಣಿಬೆನ್ನೂರು)
ಮೆಚ್ಚುಗೆಯ ಬಹುಮಾನ
ಶ್ರೀ ಚೌಡಪ್ಪ (ಹಂಪಿ)
ಈ ಬಾರಿ ಒಟ್ಟು 127 ಕವನಗಳು ಬಂದಿದ್ದು ಡಾ. ಸುಭಾಷ್ ಪಟ್ಟಾಜೆ ಮತ್ತು ಕುಮಾರಿ ಭವ್ಯ ಭಟ್ ಅವರು ತೀರ್ಪುಗಾರರಾಗಿ ಸಹಕರಿಸಿದ್ದಾರೆ.
ಸ್ಪರ್ಧೆಯ ಬಗ್ಗೆ ಮಾತನಾಡಿದ ತೀರ್ಪುಗಾರ ಡಾ. ಸುಭಾಷ್ ಪಟ್ಟಾಜೆ “ಜನ ಸಾಮಾನ್ಯರ ಬದುಕಿನ ನೋವು ನಲಿವುಗಳಿಗೆ ಸ್ಪಂದಿಸುವ, ಸಂಸ್ಕೃತಿಯ ಸೂಕ್ಷ್ಮಗಳನ್ನು ಪ್ರತಿಪಾದಿಸಿದ ಕವಿತೆಗಳಿಗೆ ಆದ್ಯತೆಯನ್ನು ನೀಡಲಾಗಿದೆ. ವರದಿಯಾಗಿ, ಘೋಷಣೆಯಾಗಿ ಮತ್ತು ಕೇವಲ ಸ್ವಗತವಾಗಿ ಮೂಡಿಬಂದರೆ ಕವಿತೆ ಎನಿಸಿಕೊಳ್ಳುವುದಿಲ್ಲ. ಚಿಂತನೆಗೆ ಹಚ್ಚುವ, ವೈಚಾರಿಕ ನೆಲೆಗಟ್ಟಿನಲ್ಲಿ ಸಮಕಾಲೀನ ಸ್ಥಿತಿಗತಿಗಳಿಗೆ ಕನ್ನಡಿಯನ್ನು ಹಿಡಿಯುವ, ವಾಸ್ತವ ಸತ್ಯವನ್ನು ಒಳಗೊಂಡಿರುವ ಕವಿತೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ” ಎಂದು ಅಭಿಪ್ರಾಯ ಪಟ್ಟರು.
ಸಾಹಿತ್ಯ ಗಂಗಾ ಸಂಸ್ಥೆಯ ಸ್ಥಾಪಕ ಮತ್ತು ಮುಖ್ಯಸ್ಥರಾದ ಶ್ರೀ ವಿಕಾಸ ಹೊಸಮನಿ ಅವರು ವಿಜೇತರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.