ಬೆಂಗಳೂರು : ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಜಿಕ್ ಅಕಾಡೆಮಿ ಟ್ರಸ್ಟ್ (ರಿ.) ಪ್ರಸ್ತುತ ಪಡಿಸುವ ‘ಕಾಂಚನೋತ್ಸವ 2023’ ಕಾರ್ಯಕ್ರಮವು ದಿನಾಂಕ 25-11-2023 ಮತ್ತು 26-11-2023ರಂದು ಬೆಂಗಳೂರಿನ ಗಿರಿನಗರದ ಅಕ್ಷರಂ ಇಲ್ಲಿ ನಡೆಯಲಿದೆ.
ದಿನಾಂಕ 25-11-2023ರಂದು ನಡೆಯಲಿರುವ ಸಂಗೀತ ಕಛೇರಿಯಲ್ಲಿ ವಿದ್ವಾನ್ ಎನ್.ಆರ್. ಪ್ರಶಾಂತ್ ಹಾಡುಗಾರಿಕೆಗೆ ವಯೊಲಿನ್ ನಲ್ಲಿ ವಿದ್ವಾನ್ ಅಚ್ಯುತ ರಾವ್, ಮೃದಂಗದಲ್ಲಿ ವಿದ್ವಾನ್ ಆರ್. ರಮೇಶ್ ಮತ್ತು ಖಂಜೀರದಲ್ಲಿ ವಿದ್ವಾನ್ ಉಡುಪಿ ಶ್ರೀಕಾಂತ್ ಸಾಥ್ ನೀಡಲಿದ್ದಾರೆ.
ದಿನಾಂಕ 26-11-2023ರಂದು ಜುಗಲ್ ಬಂಧಿ ನಡೆಯಲಿದ್ದು, ವಿದ್ವಾನ್ ರವಿಚಂದ್ರ ಕೂಳೂರು ಕೊಳಲು, ಪಂಡಿತ್ ಸಂಜೀವ ಕೋರ್ತಿ ಸಿತಾರ, ವಿದ್ವಾನ್ ಅದಮ್ಯ ರಾಮಾನಂದ್ ಮೃದಂಗ, ಪಂಡಿತ್ ರಾಹುಲ್ ಪೊಫಾಲಿ ತಬ್ಲಾ ಮತ್ತು ವಿದ್ವಾನ್ ಪಿ. ನಂದಕುಮಾರ್ ಇಡಕ್ಕ ನುಡಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಮೃದಂಗ ವಿದ್ವಾನ್ ಶ್ರೀ ಎ.ವಿ.ಆನಂದ್ ಇವರಿಗೆ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ‘ಕಾಂಚನಶ್ರೀ’ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನಂತರ ನಡೆಯುವ ದಾಸವಾಣಿ ಕಛೇರಿಯಲ್ಲಿ ಪಂಡಿತ್ ಕೃಷ್ಣೇಂದ್ರ ವಾದಿಕರ್ ಹಾಡುಗಾರಿಕೆಗೆ ಹಾರ್ಮೋನಿಯಂನಲ್ಲಿ ಶ್ರೀ ಅಶ್ವಿನ್ ವಳವಲ್ಕರ್ ಹಾಗೂ ತಬಲಾದಲ್ಲಿ ಶ್ರೀ ಆದರ್ಶ ಶೆಣೈ, ಶ್ರೀ ರೂಪಕ್ ಕಲ್ಲೂರ್ಕರ್ ಮತ್ತು ಶ್ರೀ ವೆಂಕಟೇಶ್ ಪುರೋಹಿತ್ ಸಾಥ್ ನೀಡಲಿದ್ದಾರೆ.