ಕುಂದಾಪುರ : ಕರ್ನಾಟಕ ಗಮಕ ಕಲಾ ಪರಿಷತ್ತು (ರಿ.), ಉಡುಪಿ ಜಿಲ್ಲೆ ಮತ್ತು ಕರ್ನಾಟಕ ಗಮಕ ಕಲಾ ಪರಿಷತ್ತು, ಕುಂದಾಪುರ ಘಟಕ ಇವರ ಸಹಯೋಗದಲ್ಲಿ ಕನಕ ಜಯಂತಿಯ ಪ್ರಯುಕ್ತ ‘ಕನಕದಾಸ ಕೀರ್ತನೆಗಳ ಗಾಯನ ಮತ್ತು ಗಮಕ ವಾಚನ ವ್ಯಾಖ್ಯಾನ’ ಕಾರ್ಯಕ್ರಮನ್ನು ದಿನಾಂಕ 30-11-2023ರಂದು ಸಂಜೆ 4.30ಕ್ಕೆ ಕುಂದಾಪುರ, ಎ.ಎಸ್.ಎನ್. ಹೆಬ್ಬಾರ್ ಇವರ ಸ್ವಗೃಹ ‘ನುಡಿ’ ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವು ಉಡುಪಿ ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಕೆಮ್ಮಣ್ಣು ಇವರ ಗೌರವ ಉಪಸ್ಥಿತಿ ಹಾಗೂ ಕುಂದಾಪುರದ ಹಿರಿಯ ನ್ಯಾಯವಾದಿ ಮತ್ತು ಕಲಾ-ಸಾಹಿತ್ಯ ಪೋಷಕರಾದ ಶ್ರೀ ಎ.ಎಸ್.ಎನ್. ಹೆಬ್ಬಾರ್ ಇವರ ಆತಿಥ್ಯದಲ್ಲಿ ನಡೆಯಲಿದೆ. ಕನಕದಾಸ ಕೀರ್ತನೆಗಳ ಗಾಯನ ಮತ್ತು ಗಮಕ ವಾಚನ ವ್ಯಾಖ್ಯಾನದಲ್ಲಿ ದ.ರಾ. ಬೇಂದ್ರೆಯವರ ಮೇಘದೂತ (ಪೂರ್ವ ಮೇಘ)ದ ವಾಚನವನ್ನು ಪ್ರಸಿದ್ಧ ಗಮಕಿ ಶ್ರೀಮತಿ ಮಂಜುಳಾ ಸುಬ್ರಹ್ಮಣ್ಯ ಮಂಚಿ ಮತ್ತು ವ್ಯಾಖ್ಯಾನವನ್ನು ಸಂಸ್ಕೃತ ವಿದ್ವಾಂಸರು ಮತ್ತು ಕವಿಗಳಾದ ಡಾ. ರಾಘವೇಂದ್ರ ರಾವ್, ಪಡುಬಿದ್ರೆ ಇವರು ನಡೆಸಿಕೊಡಲಿದ್ದಾರೆ.
ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಕುಂದಾಪುರ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ತಮಗೆಲ್ಲರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.