ಕಟಪಾಡಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ, ಇನ್ವೆಂಜರ್ ಫೌಂಡೇಶನ್ ಮಂಗಳೂರು, ಸೃಷ್ಟಿ ಫೌಂಡೇಶನ್ (ರಿ.) ಕಟಪಾಡಿ ಹಾಗೂ ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್ ಕಟಪಾಡಿ ಇದರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ರಾಜ್ಯಮಟ್ಟದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಬಾಲಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 31-12-2023ರ ಭಾನುವಾರ ಸಂಜೆ ಗಂಟೆ 4.00ರಿಂದ ಕಟಪಾಡಿಯ ಎಸ್.ವಿ.ಎಸ್. ಬಯಲು ರಂಗಮಂದಿರದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾಪು ವಿಧಾನ ಸಭಾಕ್ಷೇತ್ರದ ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ಮಂಗಳೂರಿನ ಇನ್ವೆಂಜರ್ ಫೌಂಡೇಶನ್ ಇದರ ಅಧ್ಯಕ್ಷರಾದ ಶ್ರೀ ಕೆ. ಸತ್ಯೇಂದ್ರ ಪೈ, ಉಡುಪಿ ತುಳುಕೂಟ (ರಿ.) ಇದರ ಅಧ್ಯಕ್ಷರಾದ ಶ್ರೀ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ಉಡುಪಿಯ ಉದ್ಯಮಿ ಶ್ರೀ ಮಹಮ್ಮದ್ ಮೌಲಾ ಮಾಲಕರು ನೈನಾ ಫ್ಯಾನ್ಸಿ, ಸಮಾಜ ಸೇವಕರರಾದ ಶ್ರೀ ಶೇಖರ್ ಅಮೀನ್ ಕೋಟೆ, ಉಡುಪಿಯ ಸಮಾಜ ಸೇವಕರರಾದ ಶ್ರೀ ವಿಶ್ವನಾಥ ಶೆಣೈ, ಪಾಂಗಾಳದ ಶ್ರೀ ದೇವಿ ಕ್ರೇನ್ಸ್ ಇದರ ಮಾಲಕರಾದ ಶ್ರೀ ಸುಧೀಂದ್ರ ಶೆಟ್ಟಿ ಪಾಂಗಾಳ, ಎಸ್.ವಿ.ಎಸ್ ಹಳೆ ವಿದ್ಯಾರ್ಥಿ ಸಂಘ ಕಟಪಾಡಿ ಇದರ ಅಧ್ಯಕ್ಷರಾದ ಶ್ರೀ ಪ್ರೇಮ್ ಕುಮಾರ್, ಉಡುಪಿ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ, ದೆಂದೂರಿನ ಸಾಹಿತಿಗಳು ಮತ್ತು ಹಿರಿಯ ಚಿಂತಕರಾದ ಶ್ರೀ ದಯಾನಂದ ಕೆ. ಶೆಟ್ಟಿ ಹಾಗೂ ಕಟಪಾಡಿ ಗ್ರಾಮ ಪಂಚಾಯತ್ ಇದರ ಅಧ್ಯಕ್ಷರಾದ ಶ್ರೀಮತಿ ಪ್ರಭಾ ಬಿ. ಶೆಟ್ಟಿ ಕಟಪಾಡಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಾಲ ಪ್ರತಿಭೆಗಳಿಗೆ ರಾಜ್ಯಮಟ್ಟದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಬಾಲಪ್ರಶಸಿ-2023 ನೀಡಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದಲ್ಲಿ ಪತ್ರಕರ್ತ ಡಾ. ಶೇಖರ್ ಅಜೆಕಾರ್ ಹಾಗೂ ಸಮಾಜರತ್ನ ಲೀಲಾಧರ ಶೆಟ್ಟಿ ಇವರಿಗೆ ನುಡಿನಮನ ಕಾರ್ಯಕ್ರಮ ನಡೆಯಲಿರುವುದು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತ್ರಿಶಾ ವಿದ್ಯಾ ಪಿ.ಯು. ಕಾಲೇಜು ಕಟಪಾಡಿ ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಹಾಗೂ ಮಾ. ಯಶಸ್ ಪಿ. ಸುವರ್ಣ ಕಟಪಾಡಿ ಇವರಿಂದ ಕೊಳಲು ವಾದನ ಹಾಗೂ ಮಾ. ಪ್ರಧಮ್ ಕಾಮತ್ ಕಟಪಾಡಿ ಇವರಿಂದ ಜಾದೂ ಪ್ರದರ್ಶನ ನಡೆಯಲಿರುವುದು.
ರಾಜ್ಯಮಟ್ಟದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಬಾಲಪ್ರಶಸಿ-2023 ವಿಜೇತರು
ಸಂಗೀತ ಪ್ರತಿಭೆ ವಿಭಾಗ :
ಭೂಮಿಕಾ ಶ್ರೀಧರ್ ಹೆಗಡೆ ಕುಳಾಯಿ ಮಂಗಳೂರು (ದ್ವಿತೀಯ ಪಿಯುಸಿ), ವೈಷ್ಣವಿ ಭಟ್ ಉಡುಪಿ (ದ್ವಿತೀಯ ಪಿಯುಸಿ), ಶ್ರೀಜಾ ಸಿ. ಕೋಟ್ಯಾನ್ ಉದ್ಯಾವರ (ಪ್ರಥಮ ಪಿಯುಸಿ),
ಬಾಲ ಪ್ರತಿಭೆ ವಿಭಾಗ :
ತನ್ಮಯ್ ಆರ್. ಶೆಟ್ಟಿ ಮಂಗಳೂರು (8ನೇ ತರಗತಿ)
ಭರತನಾಟ್ಯ ವಿಭಾಗ :
ಸಾಕ್ಷಿ ಪ್ರಕಾಶ್ ಪುತ್ರನ್ ಮುಂಬಯಿ (9ನೇ ತರಗತಿ), ಮಹಾಲಸ ‘ಶಾನುಭಾಗ್ ಚೇಂಪಿ ಕುಂದಾಪುರ (8ನೇ ತರಗತಿ), ಶರ್ವರಿ ಭಟ್ ಉದ್ಯಾವರ (5ನೇ ತರಗತಿ),
ಯೋಗ ಪ್ರತಿಭೆ ವಿಭಾಗ :
ಮಹಿಮಾ ಮೊಗವೀರ ಕುಂದಾಪುರ (10ನೇ ತರಗತಿ), ಮೋನಿಶ್ ವಿ. ಬೆಳ್ಳಾರೆ (7ನೇ – ತರಗತಿ), ಧನ್ವಿ ಮರವಂತೆ (10ನೇ ತರಗತಿ),
ಕ್ರೀಡಾ ವಿಭಾಗ :
ಅವ್ನಿ ಗಣೇಶ್ ಕಲ್ಮಾಡಿ (7ನೇ ತರಗತಿ),
ಕರಾಟೆ ವಿಭಾಗ :
ಜೆನಿಷಾ ಲೋಬೊ ಶಂಕರಪುರ (ಪ್ರಥಮ ಪಿಯುಸಿ),
ವಿಜ್ಞಾನ ವಿಭಾಗ :
ಲಿಖಿತ್ ಆರ್. ಕಲ್ಯಾಣಪುರ (ದ್ವಿತೀಯ ಪಿಯುಸಿ),
ರಿಯಾಲಿಟಿ ಶೋ ವಿಭಾಗ :
ಸಾನಿಧ್ಯ ಆಚಾರ್ಯ ಪೆರ್ಡೂರು (6ನೇತರಗತಿ),
ವಿಶೇಷ ಪ್ರತಿಭಾ ವಿಭಾಗ :
ಅನ್ವಿತಾ ಎನ್. ಹರಿಹರ ದಾವಣಗೆರೆ (ಅಂಗನವಾಡಿ),
ಚಿತ್ರಕಲೆ ವಿಭಾಗ :
ಸಂದೀಪ್ ಆರ್. ಪೈ ಕಟಪಾಡಿ (ದ್ವಿತೀಯ ಪಿಯುಸಿ), ಧೃತಿ ಎಸ್. ಉಡುಪಿ (8ನೇ ತರಗತಿ), ಅಖಿಲ್ ಶರ್ಮ ಎಂ.ಜೆ. ಮಂಗಳೂರು (10ನೇ ತರಗತಿ),
ಬಹುಮುಖ ಪ್ರತಿಭೆ ವಿಭಾಗ :
ಸಾನ್ವಿ ಎಸ್. ಅಂಚನ್ ಕಟಪಾಡಿ (8ನೇ ತರಗತಿ), ಚೈತನ್ಯ ಬಿ. ಎಸ್ ಉಪ್ಪಿನಂಗಡಿ (8ನೇ ತರಗತಿ), ದೀಕ್ಷಾ ಎನ್. ಕಲ್ಮಾಡಿ (ಪ್ರಥಮ ಪಿಯುಸಿ), ಯೋಗ್ನ ಬಿ. ಅಮೀನ್ ಸುರತ್ಕಲ್ (8ನೇ ತರಗತಿ), ಶರಣ್ಯ ಭಟ್ ಸಾಲಿಗ್ರಾಮ (ದ್ವಿತೀಯ ಪಿಯುಸಿ), ಆಶ್ನಾ ಲೈನಾ ಪಿರೇರ ಮೂಡುಬಿದಿರೆ (8ನೇ ತರಗತಿ), ಅದ್ವಿ ಎಚ್. ಅಂಚನ್ ಕಾರ್ಕಳ (8ನೇ ತರಗತಿ), ಅರ್ಚಿತ್ ಬಿ. ಕಶ್ಯಪ್ ಮೂಡುಬಿದಿರೆ (3ನೇ ತರಗತಿ), ಸಾಮಿಯ ಎಸ್. ಹೆಗ್ಡೆ ಹಿರಿಯಡ್ಕ(ದ್ವಿತೀಯ ಪಿಯುಸಿ), ಪ್ರಾಪ್ತಿ ಡಿ. ಶೆಟ್ಟಿ ಕೊಂಚಾಡಿ (8ನೇ ತರಗತಿ), ಧೃತಿ ವಿನಯ್ ಮೊಯ್ಲಿ ಮೂಡುಬಿದಿರೆ (8ನೇ ತರಗತಿ), ಸಿಂಚನ ಮೆಂಡನ್ ಹಿರಿಯಡ್ಕ (8ನೇ ತರಗತಿ) ಆಯ್ಕೆಯಾಗಿದ್ದಾರೆ.