ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆ ಕಾರ್ಯಕ್ರಮದಲ್ಲಿ ಪಾರ್ತಿಸುಬ್ಬ ವಿರಚಿತ ಸೀತಾಪಹಾರದ ಪೂರ್ವ ಭಾಗದ ರಾವಣ-ಮಂಡೋದರಿ, ರಾವಣ-ಮಾರೀಚ ಹಾಗೂ ಶ್ರೀರಾಮ ಸೀತಾ ಲಕ್ಷ್ಮಣ ದಿನಾಂಕ 07-01-2024ರಂದು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ನಡೆಯಿತು.
ಹಿಮ್ಮೇಳದಲ್ಲಿ ಸತೀಶ್ ಇರ್ದೆ, ಆನಂದ ಸವಣೂರು, ಪ್ರೊ. ದಂಬೆ ಈಶ್ವರ ಶಾಸ್ತ್ರೀ, ಮುರಳೀಧರ ಕಲ್ಲೂರಾಯ, ಶ್ರೀಪತಿ ಭಟ್ ಉಪ್ಪಿನಂಗಡಿ, ಪರೀಕ್ಷಿತ್ ಪುತ್ತೂರು ಸಹಕರಿಸಿದರು. ಮುಮ್ಮೇಳದಲ್ಲಿ ಪೂಕಳ ಲಕ್ಷ್ಮೀನಾರಾಯಣ ಭಟ್ ಮತ್ತು ಗುಡ್ಡಪ್ಪ ಬಲ್ಯ (ರಾವಣ), ಭಾಸ್ಕರ್ ಬಾರ್ಯ (ಮಂಡೋದರಿ), ಹರೀಶ್ ಆಚಾರ್ಯ ಬಾರ್ಯ (ಮಾರೀಚ), ಶ್ರೀರಾಮ (ಅಚ್ಯುತ ಪಾಂಗಣ್ಣಾಯ ಕೋಡಿಬೈಲು), ಸೀತೆ (ತಾರಾನಾಥ ಸವಣೂರು), ಗುಡ್ಡಪ್ಪ ಬಲ್ಯ (ಲಕ್ಷ್ಮಣ) ಸಹಕರಿಸಿದರು. ಕಾರ್ಯದರ್ಶಿ ಹಾಗೂ ಸಹ ಕಾರ್ಯದರ್ಶಿಗಳಾದ ಆನಂದ ಸವಣೂರು, ಅಚ್ಯುತ ಪಾಂಗಣ್ಣಾಯ ಪ್ರಾಯೋಜಿಸಿದ್ದರು. ಗೌರವ ಕಾರ್ಯದರ್ಶಿ ಟಿ. ರಂಗನಾಥ ರಾವ್ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದ ಮೊದಲು ಯಕ್ಷಗಾನ ಪ್ರಸಂಗಕರ್ತ ಸಾಹಿತಿ ವಿದ್ವಾಂಸರಾದ ಪ್ರೊ. ಅಮೃತ ಸೋಮೇಶ್ವರರವರಿಗೆ ನುಡಿನಮನ ಸಲ್ಲಿಸಲಾಯಿತು.