ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು, ಪುತ್ತೂರು ಇವರ ವತಿಯಿಂದ 2023-24ನೇ ಸಾಲಿನ ಪಾಕ್ಷಿಕ ತಾಳಮದ್ದಳೆಯ ಕೂಟವು ಪಾರ್ತಿಸುಬ್ಬ ವಿರಚಿತ ‘ಯಜ್ಞ ಸಂರಕ್ಷಣೆ’ ಎಂಬ ಆಖ್ಯಾನದೊಂದಿಗೆ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ದಿನಾಂಕ 28-11-2023ರಂದು ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ, ಆನಂದ ಸವಣೂರು ಹಾಗೂ ಚೆಂಡೆ ಮದ್ದಳೆಗಳಲ್ಲಿ ಮುರಳೀಧರ ಕಲ್ಲೂರಾಯ, ತಾರಾನಾಥ ಸವಣೂರು ಮತ್ತು ಮಾ.ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ (ದಶರಥ), ದುಗ್ಗಪ್ಪ ನಡುಗಲ್ಲು (ವಸಿಷ್ಠ ), ಗುಡ್ಡಪ್ಪ ಬಲ್ಯ (ವಿಶ್ವಾಮಿತ್ರ), ಕಿಶೋರಿ ದುಗ್ಗಪ್ಪ ನಡುಗಲ್ಲು ಮತ್ತು ಅಚ್ಯುತ ಪಾಂಗಣ್ಣಾಯ (ಶ್ರೀ ರಾಮ), ಚಂದ್ರಶೇಖರ ಭಟ್ ಬಡೆಕ್ಕಿಲ (ತಾಟಕಿ), ಹರಿಣಾಕ್ಷಿ ಜೆ. ಶೆಟ್ಟಿ (ಮಾರೀಚ) ಮಾತು ಶಾರದಾ ಅರಸ್ (ಸುಬಾಹು) ಸಹಕರಿಸಿದರು.
ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ “ಶ್ರೀ ಆಂಜನೇಯ-೫೫”ರ ಆಮಂತ್ರಣ ಪತ್ರಿಕೆಯನ್ನು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಮತ್ತು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ಸಮರ್ಪಿಸಿ ಬಿಡುಗಡೆಗೊಳಿಸಲಾಯಿತು. ಇಂದಿನ ತಾಳಮದ್ದಳೆಯ ಪ್ರೇಕ್ಷಕರಾಗಿ ಆಗಮಿಸಿದ್ದ ಹಿರಿಯ ಭಾಗವತ ಪದ್ಮನಾಭ ಭಟ್ ಬಡೆಕ್ಕಿಲ ಹಾಗೂ ಹಿರಿಯ ಅರ್ಥದಾರಿಗಳಾದ ಜಬ್ಬಾರ್ ಸಮೋ ಮತ್ತು ಶ್ರೀಧರ್ ರಾವ್ ಕುಂಬ್ಳೆ ಇವರಿಗೆ “ಶ್ರೀ ಆಂಜನೇಯ- ೫೫ರ ಆಮಂತ್ರಣ ಪತ್ರಿಕೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವ ಕಾರ್ಯದರ್ಶಿಗಳಾದ ರಂಗನಾಥ ರಾವ್ ಹಾಗೂ ಮಹಿಳಾ ಸಂಪದ ಅಧ್ಯಕ್ಷರಾದ ಪ್ರೇಮಲತಾ ರಾವ್ ಉಪಸ್ಥಿತರಿದ್ದರು.