ಕಿನ್ನಿಗೋಳಿ : ಖಿಲ್ರಿಯಾ ಜುಮ್ಮಾ ಮಸೀದಿಯ ಸುವರ್ಣ ಮಹೋತ್ಸವದ ಅಂಗವಾಗಿ ಖಿಲ್ರಿಯಾ ಜುಮ್ಮಾ ಮಸೀದಿ ಮತ್ತು ಕಿನ್ನಿಗೋಳಿ ತಾಳಿಪ್ಪಾಡಿಯ ಶಾಂತಿನಗರದ ಕೆ.ಜೆ.ಎಂ. ಸುವರ್ಣ ಮಹೋತ್ಸವ ಸಮಿತಿ ಇದರ ವತಿಯಿಂದ ಮಸೀದಿ ಆವರಣದಲ್ಲಿ ಹಮ್ಮಿಕೊಂಡಿದ್ದ ಬ್ಯಾರಿ ಮತ್ತು ಕನ್ನಡ ಭಾಷಾ ‘ಕವಿಗೋಷ್ಠಿ’ ಮತ್ತು ಮದ್ರಸ ವಿದ್ಯಾರ್ಥಿಗಳ ಪ್ರತಿಭಾ ಸ್ಪರ್ಧೆಯು ದಿನಾಂಕ 26-11-2023ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಮುಸ್ಲಿಂ ಲೇಖಕರ ಸಂಘ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಬಿ.ಎ. ಮಹಮ್ಮದಾಲಿ ಉದ್ಘಾಟಿಸಿ ಮಾತನಾಡಿ “ಸಮುದಾಯದಲ್ಲಿ ಹಲವು ಬರಹಗಾರರು, ಕವಿಗಳು ಇದ್ದು ಅವರಿಗೆ ಪ್ರೋತ್ಸಾಹದ ಅಗತ್ಯವಿದೆ. ಮಸೀದಿಗಳು ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕು” ಎಂದು ಹೇಳಿದರು.
ಬಹುಭಾಷಾ ಸಾಹಿತಿ ಮುಹಮ್ಮದ್ ಬಡ್ಡೂರು ಅಧ್ಯಕ್ಷತೆ ವಹಿಸಿದ್ದರು. ಹುಸೈನ್ ಕಾಟಿಪಳ್ಳ, ಶರೀಫ್ ನಿರ್ಮುಂಜೆ, ಮೊಹಮ್ಮದ್ ಮನ್ಸೂರ್ ಮೂಲ್ಕಿ, ಮುಆದ್ ಜಿ.ಎಂ. ಇವರುಗಳು ಬ್ಯಾರಿ ಹಾಗೂ ಕನ್ನಡ ಭಾಷೆಯಲ್ಲಿ ಕವಿತೆ ವಾಚಿಸಿದರು.
ಕೆ.ಜೆ.ಎಂ. ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಟಿ.ಎಚ್. ಮಯ್ಯದ್ದಿ, ಕೆ.ಜೆ.ಎಂ. ಅಧ್ಯಕ್ಷ ಜೆ.ಎಚ್. ಅಬ್ದುಲ್ ಜಲೀಲ್, ಅಸ್ಗರ್ ಅಲಿ, ಮೊಯ್ದಿನ್ ಚೋಟರಿಕೆ, ಟಿ.ಎ. ಹನೀಫ್, ನೂರುಲ್ ಹುದಾ ಅಧ್ಯಕ್ಷ ಎಂ. ಖಾದರ್, ಟಿ.ಕೆ. ಅಬ್ದುಲ್ ಖಾದರ್, ಸುಹೈಲ್ ಸಖಾಫಿ ಸದರ್ ಮುಅಲ್ಲಿಂ, ನೌಫಲ್ ಸಖಾಫಿ ಮತ್ತಿತರರು ಉಪಸ್ಥಿತರಿದ್ದರು. ಸಮದ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.