ಮಂಗಳೂರು : ನಾಟ್ಯಾರಾಧನಾ ಕಲಾ ಕೇಂದ್ರ (ರಿ) ಉರ್ವ, ಮಂಗಳೂರು ಇದರ ಸುರತ್ಕಲ್ ಗೋವಿಂದದಾಸ ಕಾಲೇಜು ಶಾಖೆ, ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ನಾಟ್ಯಾರಾಧನಾ ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿ ಪ್ರಸ್ತುತಪಡಿಸುವ ‘ನಾಟ್ಯಾರಾಧನಾ ತ್ರಿಂಶೋತ್ಸವ – 1994-2024’ ಸರಣಿ ನೃತ್ಯ ಕಾರ್ಯಕ್ರಮಗಳು ದಿನಾಂಕ 10-02-2024ರ ಶನಿವಾರ ಸಂಜೆ ಘಂಟೆ 5.00ರಿಂದ ಸುರತ್ಕಲ್ ಗೋವಿಂದದಾಸ ಕಾಲೇಜಿನ ಕಲಾ ಮಂದಿರದಲ್ಲಿ ನಡೆಯಲಿದೆ.
ಲಲಿತ ಕಲಾ ಸಂಘ, ಗೋವಿಂದದಾಸ ಕಾಲೇಜು, ಸುರತ್ಕಲ್ ಇವರ ಸಹಯೋಗದೊಂದಿಗೆ ನಡೆಯಲಿರುವ ಈ ಸರಣಿ ನೃತ್ಯ ಕಾರ್ಯಕ್ರಮದಲ್ಲಿ ನೃತ್ಯಾಮೃತ-1 ‘ಭರತನಾಟ್ಯ ರಸಗ್ರಹಣ’ ಈ ಅವಧಿಯಲ್ಲಿ ಭರತನಾಟ್ಯ ಕಲೆಯ ಅರ್ಥೈಸುವಿಕೆ ಮತ್ತು ಪ್ರೇಕ್ಷಕ ದೃಷ್ಟಿಯೆಂಬ ವಿಷಯದ ಬಗ್ಗೆ ನೃತ್ಯ ಪ್ರಾತ್ಯಕ್ಷಿಕೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ಕಲಾವಿದರಾಗಿ ಪುತ್ತೂರಿನ ಶ್ರೀ ಮೂಕಾಂಬಿಕ ಕಲ್ಬರಲ್ ಅಕಾಡೆಮಿ ರಿ. ಇದರ ನಿರ್ದೇಶಕರಾದ ವಿದ್ವಾನ್ ದೀಪಕ್ ಕುಮಾರ್ ಪುತ್ತೂರು, ಮಂಗಳೂರಿನ ಗಾನ ನೃತ್ಯ ಅಕಾಡೆಮಿ ಇದರ ನಿರ್ದೇಶಕರಾದ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಹಾಗೂ ಮಂಗಳೂರಿನ ನಾಟ್ಯಾರಾಧನಾ ಕಲಾ ಕೇಂದ್ರ ರಿ. ಉರ್ವ ಇದರ ನಿರ್ದೇಶಕರಾದ ವಿದುಷಿ ಸುಮಂಗಲಾ ರತ್ನಾಕರ್ ರಾವ್ ಭಾಗವಹಿಸಲಿದ್ದಾರೆ.
ಕ.ಸಾ.ಪ. ಬೆಂಗಳೂರು ಇದರ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾಕಾರ್ಯಕ್ರಮದಲ್ಲಿ ಶ್ರೀ ಧನಲಕ್ಷ್ಮೀ ಕನ್ಸ್‌ಟ್ರಕ್ಷನ್ಸ್, ಎಂ.ಆರ್.ಪಿ.ಎಲ್ ಇದರ ಮಾಲಕರಾದ ಶ್ರೀ ರಾಜಾರಾಮ್ ಸಾಲ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸುರತ್ಕಲ್ಲಿನ ಹಿಂದೂ ವಿದ್ಯಾದಾಯಿನೀ ಸಂಘ ಇದರ ಅಧ್ಯಕ್ಷರಾದ ಶ್ರೀ ಎಚ್. ಜಯಚಂದ್ರ ಹತ್ವಾರ್, ಸುರತ್ಕಲ್ಲಿನ ವಿದ್ಯಾದಾಯಿನೀ ಪ್ರೌಢ ಶಾಲೆ ಇದರ ನಿವೃತ್ತ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಐ. ಉಮಾದೇವಿ, ಇಡ್ಯದ ಶ್ರೀ ಕ್ಷೇತ್ರ ಇಡ್ಕ ಇಲ್ಲಿನ ಕಲಾಪೋಷಕಿಯಾದ ಶ್ರೀಮತಿ ಶಕುಂತಲಾ ರಮಾನಂದ ಭಟ್, ಖಂಡಿಗೆ-ಚೇಳ್ಯಾರಿನ ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಇದರ ನಿರ್ದೇಶಕರಾದ ವಿದ್ವಾನ್ ಚಂದ್ರಶೇಖರ ನಾವಡ, ಸುರತ್ಕಲ್ಲಿನ ಗೋವಿಂದದಾಸ ಕಾಲೇಜು ಇದರ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ, ಓರಿಯಂಟಲ್ ಇನ್ಸೂರೆನ್ಸ್ ಕಂಪೆನಿ ಲಿ. ಇದರ ಹಿರಿಯ ವಲಯ ಪ್ರಬಂಧಕರಾದ ಲಯನ್ ಯಾದವ ದೇವಾಡಿಗ, ಸುರತ್ಕಲ್ಲಿನ ಕಲಾನಿಧಿ ನೃತ್ಯನಿಲಯ ಇದರ ನಿರ್ದೇಶಕಿಯಾದ ವಿ. ಶೈಲಜಾ ಶಿವಶಂಕರ್ ಹಾಗೂ ನಾಟ್ಯಾರಾಧನಾ ಕಲಾಕೇಂದ್ರದ ಹಿರಿಯ ವಿದ್ಯಾರ್ಥಿನಿಯಾದ ವಿದುಷಿ ಶ್ರೀಮತಿ ಅನು ಧೀರಜ್ ಭಾಗವಹಿಸಲಿದ್ದಾರೆ.