ಬೆಂಗಳೂರು : ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯ ಹಾಗೂ ಮೋಹನ ತರಂಗಿಣಿ ಸಂಗೀತ ಸಭಾ ಇದರ ‘76ನೇ ವಾರ್ಷಿಕ ಸಾಂಸ್ಕೃತಿಕ ಸಂಗೀತ ನೃತ್ಯ ಮಹೋತ್ಸವ’ದ ಸರಣಿ ಕಾರ್ಯಕ್ರಮವು ದಿನಾಂಕ 11-02-2024ರ ಭಾನುವಾರ ಸಂಜೆ ಘಂಟೆ 3.00 ರಿಂದ ನಡೆಯಲಿದೆ.
ಬೆಂಗಳೂರಿನ ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯದ 2ನೇ ಮಹಡಿಯಲ್ಲಿರುವ ನಾದಬ್ರಹ್ಮ ಶಾರದ ಮಂದಿರದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ, ಕರ್ನಾಟಕ ಸಂಗೀತ ಕ್ಷೇತ್ರದ ಹಾಡುಗಾರಿಕೆಯಲ್ಲಿ ಸಾಧನೆ ಮಾಡಿದ ವಿದ್ವಾನ್ ಶ್ರೀ ಆರ್. ಕೆ. ಪ್ರಸನ್ನ ಕುಮಾರ್, ಕರ್ನಾಟಕ ಸಂಗೀತ ಪಿಟೀಲು ಕ್ಷೇತ್ರದ ಸಾಧನೆಗಾಗಿ ವಿದ್ವಾನ್ ಶ್ರೀ ಎಂ. ಎಸ್. ರಾಜೀವಲೋಚನ ಹಾಗೂ ಮೃದಂಗ ಕ್ಷೇತ್ರದ ಸಾಧನೆಗಾಗಿ ವಿದುಷಿ ಶ್ರೀಮತಿ ಶಶಿಕಲಾ. ಕೆ ಇವರಿಗೆ ‘ಮಂಜುದಾಸ ರಾಜ್ಯ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಹೆಚ್.ಎಸ್. ಸುಧೀಂದ್ರ ಕುಮಾರ್ ಉಪಸ್ಥಿತರಿರುವರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ‘ಪ್ರೇಂಕಣ’ ನೃತ್ಯಾಲಯದ ವಿದುಷಿ ಶ್ರೀಮತಿ ಅಂಕಿತ ಮತ್ತು ಶಿಷ್ಯವೃಂದದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಹಾಡುಗಾರಿಕೆಯಲ್ಲಿ ವಿದುಷಿ ಶ್ರೀಮತಿ ವಿನಯಕಾರ್ತಿಕ್ ರಾವ್ ಮತ್ತು ಶಿಷ್ಯವೃಂದ, ಪಿಟೀಲಿನಲ್ಲಿ ವಿದ್ವಾನ್ ಶ್ರೀ ಎಂ. ಎಸ್. ರಾಜೀವಲೋಚನ ಹಾಗೂ ಮೃದಂಗದಲ್ಲಿ ವಿದುಷಿ ಶ್ರೀಮತಿ ಶಶಿಕಲಾ ಕೆ. ಸಹಕರಿಸಲಿದ್ದಾರೆ.
ಸಂಗೀತ ತ್ರಿಮೂರ್ತಿಗಳ ಹಾಗೂ ಕನಕ ಪುರಂದರ ಸಂಗೀತೋತ್ಸವದ ಅಂಗವಾಗಿ ದಿನಾಂಕ 04-11-2023ರ ಶನಿವಾರದಂದು ಪ್ರಾರಂಭಗೊಂಡಿದ್ದ ಈ ಸರಣಿಯು ದಿನಾಂಕ 4-05-2024ರ ಶನಿವಾರದವರೆಗೆ ನಡೆಯಲಿದ್ದು. ಒಟ್ಟು 76 ಕಾರ್ಯಕ್ರಮಗಳು ನಡೆಯಲಿವೆ.
Subscribe to Updates
Get the latest creative news from FooBar about art, design and business.
ಬೆಂಗಳೂರಿನ ನಾದಬ್ರಹ್ಮ ಶಾರದ ಮಂದಿರದಲ್ಲಿ ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯ ಹಾಗೂ ಮೋಹನ ತರಂಗಿಣಿ ಸಂಗೀತ ಸಭಾದ ಸರಣಿ ಕಾರ್ಯಕ್ರಮ | ಫೆಬ್ರವರಿ 11
No Comments1 Min Read