ಮಂಗಳೂರು : ನಾಟ್ಯಾರಾಧನಾ ಕಲಾ ಕೇಂದ್ರದ ತ್ರಿಂಶೋತ್ಸವ ಪ್ರಯುಕ್ತ ದಿನಾಂಕ 10-02-2024ರಂದು ಸುರತ್ಕಲ್ ಗೋವಿಂದದಾಸ ಕಾಲೇಜಿನ ಕಲಾ ಮಂದಿರದಲ್ಲಿ ಹಮ್ಮಿಕೊಂಡ ಸರಣಿ ನೃತ್ಯ ಕಾರ್ಯಕ್ರಮವನ್ನು ಶ್ರೀ ರಾಜಾರಾಮ್ ಸಾಲ್ಯಾನ್ ಇವರು ಉದ್ಘಾಟಿಸಿದರು.
“ಭರತನಾಟ್ಯ ಕಲೆಯ ತಲಸ್ಪರ್ಶಿ ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ‘ಭರತನಾಟ್ಯ ರಸಗ್ರಹಣ’ದಂತಹ ಪ್ರಾತ್ಯಕ್ಷಿಕೆಗಳು ಹೆಚ್ಚು ಹೆಚ್ಚು ನಡೆಯಬೇಕು. ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಸಾಮಾನ್ಯ ಪ್ರೇಕ್ಷಕರಿಗೂ ಉತ್ತಮ ಕಲಾಪ್ರೇಕ್ಷಕರಗಲು ಸಹಾಯಕ”. ಇಂತಹ ಜ್ಞಾನೋದಯ ಕಾರ್ಯಕ್ರಮವನ್ನು ಸುರತ್ಕಲ್ ಲಲಿತ ಕಲಾ ಸಂಘ ಮತ್ತು ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ವಿದ್ಯಾರ್ಥಿ ಸಮಿತಿಯ ಸಹಯೋಗದೊಂದಿಗೆ ಹಮ್ಮಿಕೊಂಡ ನಾಟ್ಯಾರಾಧನಾ ಕಲಾ ಕೇಂದ್ರವನ್ನು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಶ್ಲಾಘಿಸಿದರು.
ವಿದ್ವಾನ್ ಚಂದ್ರಶೇಖರ ನಾವಡ, ವಿದುಷಿ ಶೈಲಜ ಶಿವಶಂಕರ್, ಲಯನ್ ಯಾದವ ದೇವಾಡಿಗ, ಶ್ರೀಮತಿ ಐ ಉಮಾದೇವಿ, ಪ್ರೊ. ಕೃಷ್ಣಮೂರ್ತಿ, ಎಚ್. ಜಯಚಂದ್ರ ಹತ್ವಾರ್, ಶ್ರೀಮತಿ ಶಕುಂತಲಾ ಭಟ್, ವಿದುಷಿ ಅನುಧೀರಜ್, ಸಮಿತಿಯ ಅಧ್ಯಕ್ಷ ಡಾ. ಗಣೇಶ್ ಅಮೀನ್ ಸಂಕಮಾರ್ ಸ್ವಾಗತಿಸಿ, ಟ್ರಸ್ಟಿ ರತ್ನಾಕರ ರಾವ್ ವಂದಿಸಿ, ಸಮಿತಿಯ ಸಂಘಟನಾ ಕಾರ್ಯದರ್ಶಿ ಶ್ರೀ ಶಶಿರಾಜ್ ರಾವ್ ಕಾವೂರು ನಿರೂಪಿಸಿದರು.
ವಿದ್ವಾನ್ ದೀಪಕ್ ಕುಮಾರ್ ಪುತ್ತೂರು, ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಮಂಗಳೂರು ಹಾಗೂ ನಾಟ್ಯಾರಾಧನಾದ ನಿರ್ದೇಶಕಿ ವಿದುಷಿ ಸುಮಂಗಲಾ ರತ್ನಾಕರ್ ರಾವ್ ಸಂಪನ್ಮೂಲ ಕಲಾವಿದರಾಗಿ ಪ್ರಾತ್ಯಕ್ಷಿಕೆಯನ್ನು ಯಶಸ್ವಿಯಾಗಿ ನಡೆಸಿದರು. ವಿದುಷಿ ಪ್ರೀತಿಕಲಾ ದೀಪಕ್ ಮತ್ತು ಮನೋಹರ ರಾವ್ ಮಂಗಳೂರು ಹಿನ್ನೆಲೆ ಸಹಕಾರ ನೀಡಿದ್ದರು.