ಮೂಡಬಿದಿರೆಯ : ಮೂಡಬಿದಿರೆಯ ಪ್ರಥಮ ತಾಲೂಕು ‘ಕನ್ನಡ ಸಾಹಿತ್ಯ ಸಮ್ಮೇಳನ’ವು ದಿನಾಂಕ 20-02-2024ರಂದು ಮೂಡಬಿದಿರೆಯ ಸ್ವರಾಜ್ಯ ಮೈದಾನದ ಬಳಿ ಇರುವ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ನಡೆಯಲಿದೆ.
ಖ್ಯಾತ ರಂಗಕರ್ಮಿ ಹಾಗೂ ಕಿರುತೆರೆ ಮತ್ತು ಚಲನಚಿತ್ರ ನಟರಾದ ಶ್ರೀ ಶ್ರೀಪತಿ ಮಂಜನಬೈಲು ಇವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮ್ಮೇಳನದ ಉದ್ಘಾಟನೆಯನ್ನು ಮೂಲ್ಕಿ- ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಉಮಾನಾಥ ಎ. ಕೋಟ್ಯಾನ್ ನಿರ್ವಹಿಸಲಿದ್ದಾರೆ. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಆಶಯ ನುಡಿಗಳನ್ನಾಡಲಿದ್ದು, ಮೂಡುಬಿದಿರೆಯ ಜೈನಮಠದ ಪರಮಪೂಜ್ಯ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಶುಭಾಶಂಸನೆಯ ನುಡಿಗಳನ್ನಾಡಲಿದ್ದಾರೆ.
ಉದ್ಘಾಟನಾ ಸಾಮಾರಂಭದ ಬಳಿಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಾಂಸ್ಕೃತಿಕ ತಂಡದಿಂದ ನಾಡು – ನುಡಿ ಆರಾಧನೆ , ಡಾ. ಪುಂಡಿಕಾಯಿ ಗಣಪಯ್ಯ ಭಟ್ ಇವರಿಂದ ‘ಮೂಡಬಿದಿರೆ ಗತಕಾಲದ ಹೆಜ್ಜೆ ಗುರುತುಗಳು’ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ, ಸರ್ವಮಂಗಳ ಜೈನ ಮಹಿಳಾ ಸಂಘದ ಸದಸ್ಯರಿಂದ ‘ಭರತೇಶ ವೈಭವ’ದ ಆಯ್ದ ಚರಣಗಳ ಗಾಯನ, ಡಾ. ಪ್ರಭಾತ್ ಬಲ್ನಾಡ್ ಇವರಿಂದ ‘ಮೂದಬಿದಿರೆಯ ಸಾಂಸ್ಕೃತಿಕ ಪರಂಪರೆ’ಯ ಕುರಿತು ವಿಚಾರ ಮಂಡನೆ, ಅಳಿಯೂರು ಪ್ರೌಢ ಶಾಲಾ ವಿದ್ಯಾರ್ಥಿಗಳ ತಂಡದಿಂದ ಭಾವಗಾನ, ಸರ್ವೋದಯ ಪ್ರೌಢ ಶಾಲಾ ವಿದ್ಯಾರ್ಥಿಗಳ ತಂಡದಿಂದ ಜನಪದ ಹಾಡುಗಳು, ಡಾ. ಅಜಿತ್ ಪ್ರಸಾದ್ ಇವರಿಂದ ‘ಮೂಡಬಿದಿರೆಯ ಸಾಹಿತ್ಯ ಪರಂಪರೆ’ಯೆಂಬ ವಿಷಯದಲ್ಲಿ ವಿಚಾರ ಮಂಡನೆ, ಶ್ರೀ ಧವಲಾ ಕಾಲೇಜು ವಿದ್ಯಾರ್ಥಿಗಳ ತಂಡದಿಂದ ಕನ್ನಡ ಹಾಡು, ಶ್ರೀ ಮತಿ ವಿಜಯಶ್ರೀ ಹಾಲಾಡಿ ಇವರಿಂದ ‘ಮಕ್ಕಳ ಸಾಹಿತ್ಯ – ಇಂದಿನ ಸವಾಲುಗಳು’ ಎಂಬ ವಿಷಯದಲ್ಲಿ ವಿಚಾರ ಮಂಡನೆ, ವಾಯ್ಸ್ ಆಫ್ ಆರಾಧನಾ ಸಾಂಸ್ಕೃತಿಕ ತಂಡದಿಂದ ‘ನಾಡು – ನುಡಿ ಆರಾಧನೆ’ ಹಾಗೂ ಶ್ರೀ ಅರವಿಂದ ಚೊಕ್ಕಾಡಿ ಇವರಿಂದ ‘ಮೂಡಬಿದಿರೆ – ಶೈಕ್ಷಣಿಕ ಪರಂಪರೆ’ ಎಂಬ ವಿಷಯದಲ್ಲಿ ವಿಚಾರ ಮಂಡನೆ ನಡೆಯಲಿದೆ.
ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀ ಶ್ರೀಪತಿ ಮಂಜನಬೈಲು ಇವರ ಘನ ಉಪಸ್ಥಿತಿಯಲ್ಲಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ದ. ಕ ಇದರ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಸಾಧಕರನ್ನು ಸನ್ಮಾನಿಸಲಿದ್ದಾರೆ. ಕ.ಸಾ.ಪ. ಸದಸ್ಯರಾದ ಡಾ. ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಲಿದ್ದಾರೆ.