Subscribe to Updates

    Get the latest creative news from FooBar about art, design and business.

    What's Hot

    ‘ಕೊ. ಅ. ಉಡುಪ ಪ್ರಶಸ್ತಿ’ಗೆ ಸಾಹಿತಿ, ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆ

    July 11, 2026

    ಕ.ಸಾ.ಪ.ದ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಲೇಖಕರ ಆಯ್ಕೆ

    July 11, 2026

    ಮಂಗಳೂರಿನ ಪುರಭವನದಲ್ಲಿ ‘ರಿಮ್ಜಿಮ್’ ಸಂಗೀತ ಕಾರ್ಯಕ್ರಮ | ಜುಲೈ 12

    July 11, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಸಂತ ಅಲೋಶಿಯಸ್ ಕಾಲೇಜಿನಲ್ಲಿ ಶಶಿರಾಜ್ ರಾವ್ ಕಾವೂರು ಬರೆದ ನಾಟಕ ಕೃತಿಗಳ ಲೋಕಾರ್ಪಣೆ
    Book Release

    ಸಂತ ಅಲೋಶಿಯಸ್ ಕಾಲೇಜಿನಲ್ಲಿ ಶಶಿರಾಜ್ ರಾವ್ ಕಾವೂರು ಬರೆದ ನಾಟಕ ಕೃತಿಗಳ ಲೋಕಾರ್ಪಣೆ

    February 17, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕೊಡಿಯಾಲಬೈಲ್ : ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಸಂತ ಅಲೋಶಿಯಸ್ ರಂಗ ಅಧ್ಯಯನ ಕೇಂದ್ರ ಕನ್ನಡ ವಿಭಾಗ ಸಹಯೋಗದಲ್ಲಿ ಶಶಿರಾಜ್ ರಾವ್ ಕಾವೂರು ಬರೆದ ‘ಪರಶುರಾಮ’ ಮತ್ತು ‘ಛತ್ರಪತಿ ಶಿವಾಜಿ’ ನಾಟಕ ಕೃತಿಗಳು ಸಂತ ಅಲೋಶಿಯಸ್ ಕಾಲೇಜಿನ ಎಲ್.ಎಫ್. ರಸ್ಕಿನ್ಹಾ ಸಭಾಂಗಣದಲ್ಲಿ ದಿನಾಂಕ 14-02-2024ರಂದು ಲೋಕಾರ್ಪಣೆಗೊಂಡವು.

    ಕೃತಿಗಳನ್ನು ಲೋಕಾರ್ಪಣೆಗೊಳಿಸಿದ ನಿಡಸೋಸಿಯ ಶ್ರೀ ಜಗದ್ಗುರು ದುರದುಂಡೇಶ್ವರ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ “ಪುಸ್ತಕಗಳಿಗಿಂತಲೂ ನಾಟಕ ಸಮಾಜದ ಮೇಲೆ ವಿಶೇಷ ಪ್ರಭಾವ ಬೀರುತ್ತದೆ ಮತ್ತು ಆತಂಕ ದೂರ ಮಾಡಿ ಸಮಾಜ ಜಾಗೃತಗೊಳಿಸುತ್ತದೆ. ಪರಶುರಾಮ ಹಾಗೂ ಶಿವಾಜಿ ವೀರ ಪುರುಷರಾಗಿದ್ದು, ಅಂತಹವರ ಜೀವನದ ಕುರಿತ ನಾಟಕಗಳು ಇಂದಿಗೆ ಪ್ರಸ್ತುತ” ಎಂದು ಹೇಳಿದರು.

    ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ಮಾತನಾಡಿ, “ಕರಾವಳಿ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದೆ. ಅನೇಕ ಕೃತಿಗಳನ್ನು ಕರಾವಳಿಯಲ್ಲಿ ಪ್ರಕಟಗೊಳಿಸಲಾಗಿದೆ. ಇಂದಿನ ದಿನದಲ್ಲಿ ಪುಸ್ತಕ ಪ್ರಕಟಿಸುವುದು ಕ್ಲಿಷ್ಟಕರವಾಗಿದ್ದು, ಓದುಗರು, ಕೃತಿಕಾರರು ಹಾಗೂ ಪ್ರಕಟಕರು ಜತೆಯಾಗಿ ಕಾರ್ಯ ನಿರ್ವಹಿಸಿದ್ದಲ್ಲಿ ಇದನ್ನು ನಿವಾರಿಸಬಹುದು. ಕರಾವಳಿಯಲ್ಲಿ ಇದು ಸಾಧ್ಯ” ಎಂದರು.

    ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, “ಕರಾವಳಿಗೆ ನಾಟಕದ ಕೊಡುಗೆ ಅಪಾರ. ಇಲ್ಲಿನ ನಾಟಕಕಾರರು ಸಂಶೋಧನ ಪ್ರವೃತ್ತಿ ಹೊಂದಿದ್ದಾರೆ. ನಾಟಕಗಳ ಬಗ್ಗೆ ಅಪಾರ ಆಸಕ್ತಿಯೊಂದಿಗೆ ಪಾತ್ರಗಳಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಮಾಡುತ್ತಿದ್ದು, ಶಿವಾಜಿ, ಪರಶುರಾಮ ನಾಟಕಗಳು ಇದರಿಂದ ಹೊರತಾಗಿಲ್ಲ” ಎಂದರು.

    ಯಕ್ಷ ರಂಗಾಯಣದ ನಿಕಟಪೂರ್ವ ನಿರ್ದೇಶಕ ಡಾ. ಜೀವನ್ ರಾಮ್ ಸುಳ್ಯ ‘ಪರಶುರಾಮ’ ಕೃತಿ ಹಾಗೂ ಡಾ. ನಾ. ದಾಮೋದರ ಶೆಟ್ಟಿ ‘ಛತ್ರಪತಿ ಶಿವಾಜಿ’ ಕೃತಿಯನ್ನು ಪರಿಚಯಿಸಿದರು. ಶಶಿರಾಜ್ ರಾವ್ ಕಾವೂರು ಸ್ವಾಗತಿಸಿ, ಸಂತ ಅಲೋಶಿಯಸ್ ಕಾಲೇಜಿನ ಮಾನವ ಸಂಪನ್ಮೂಲ ಅಧಿಕಾರಿ ದಿನೇಶ್ ವಂದಿಸಿ, ಕುದ್ರೋಳಿ ಗಣೇಶ್ ನಿರೂಪಿಸಿದರು. ಸಂತ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಅಲ್ವಿನ್ ಡೇಸಾ, ಕೆನರಾ ಕಾಲೇಜಿನ ಡೀನ್ ಗೋಪಾಲ ಕೃಷ್ಣ ಶೆಟ್ಟಿ ಮತ್ತಿತರರಿದ್ದರು.

    ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೆಗಾಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಇವರಿಂದ ಮೈಂಡ್ ಮ್ಯಾಜಿಕ್ ಮತ್ತು ಮೂಡಬಿದಿರೆ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಅಭಿನಯದ ಡಾ. ಜೀವನ್‌ರಾಮ್ ಸುಳ್ಯ ನಿರ್ದೇಶನದಲ್ಲಿ ‘ಏಕಾದಶಾನನ’ ಎಂಬ ಕಿರು ನಾಟಕ ಪ್ರದರ್ಶನಗೊಂಡವು. ಇದೇ ಸಂದರ್ಭದಲ್ಲಿ ಪ್ರೌಢ ಶಾಲಾ ಮಕ್ಕಳಿಗಾಗಿ ನಡೆದ ‘ಪುಸ್ತಕ ಪ್ರೀತಿ’ ವಿಷಯಾಧಾರಿತ ಚಿತ್ರಕಲಾ ಸ್ಪರ್ಧೆಯಲ್ಲಿ ಸಂತ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲೆಯ 9ನೇ ತರಗತಿಯ ಪ್ರದ್ಯುಮ್ನ – ಪ್ರಥಮ ಬಹುಮಾನ, 9ನೇ ತರಗತಿ ಸಮೀಕ್ಷಾ – ದ್ವಿತೀಯ ಬಹುಮಾನ ಹಾಗೂ 8ನೇ ತರಗತಿ ಚಿನ್ಮಯಿ ತೃತೀಯ ಬಹುಮಾನವನ್ನು ಪಡೆದಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಒಡಿಯೂರು ಕ್ಷೇತ್ರದಲ್ಲಿ 24ನೇ ‘ತುಳು ಸಾಹಿತ್ಯ ಸಮ್ಮೇಳನ’ | ಫೆಬ್ರವರಿ 18 ಮತ್ತು 19
    Next Article ಮೂಡಬಿದಿರೆಯ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ | ಫೆಬ್ರವರಿ 20
    roovari

    Add Comment Cancel Reply


    Related Posts

    ‘ಕೊ. ಅ. ಉಡುಪ ಪ್ರಶಸ್ತಿ’ಗೆ ಸಾಹಿತಿ, ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆ

    July 11, 2026

    ಕ.ಸಾ.ಪ.ದ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಲೇಖಕರ ಆಯ್ಕೆ

    July 11, 2026

    ‘ಜನಪ್ರಿಯ ವಿಜ್ಞಾನ ಪುಸ್ತಕ ಪ್ರಶಸ್ತಿ’ಗೆ ಕನ್ನಡ ಪುಸ್ತಕಗಳ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 2026

    July 11, 2026

    ಕನಕ ಕಾವ್ಯ ಗಮಕ ಸ್ಪರ್ಧೆಗೆ ಅರ್ಜಿ ಆಹ್ವಾನ

    July 10, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.