Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 52ನೇ ವಿವೇಕ ವಾಣಿ ಸರಣಿ ಉಪನ್ಯಾಸ

    February 14, 2026

    ಪ್ರೊ. ಬಿ.ಎ. ವಿವೇಕ ರೈಯವರ ‘ಪಡುವಣ ತೀರದ ಕನ್ನಡ ನಾಡಿನ’ ಕೃತಿ ಲೋಕಾರ್ಪಣೆ

    February 14, 2026

    ಮುಂಬೈಯಲ್ಲಿ ಪಯಣ ಪ್ರಸ್ತುತ ಪಡಿಸುವ ‘ತಲ್ಕಿ’ ನಾಟಕ | ಫೆಬ್ರವರಿ 16

    February 14, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ದ. ಕ. ಜಿಲ್ಲಾ ಕ. ಸಾ. ಪ. ವತಿಯಿಂದ ಸಾಹಿತಿ ಕೆ.ಟಿ. ಗಟ್ಟಿಯವರಿಗೆ ನುಡಿನಮನ
    Literature

    ದ. ಕ. ಜಿಲ್ಲಾ ಕ. ಸಾ. ಪ. ವತಿಯಿಂದ ಸಾಹಿತಿ ಕೆ.ಟಿ. ಗಟ್ಟಿಯವರಿಗೆ ನುಡಿನಮನ

    February 27, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ದಿನಾಂಕ 19-02-2024 ರಂದು ನಿಧನರಾದ ಹಿರಿಯ ಸಾಹಿತಿ ಕೆ.ಟಿ. ಗಟ್ಟಿ ಅವರಿಗೆ ನುಡಿ ನಮನ ಕಾರ್ಯಕ್ರಮವು ದಿನಾಂಕ 24-02-2024ರ ಶನಿವಾರದಂದು ಮಂಗಳೂರಿನ ಎಸ್‌. ಡಿ. ಎಂ. ಕಾಲೇಜಿನಲ್ಲಿ ನಡೆಯಿತು.

    ಕಾರ್ಯಕ್ರಮದಲ್ಲಿ ಮಾತನಾಡಿದ ವಿದ್ವಾಂಸ ಡಾ. ಪ್ರಭಾಕರ ಜೋಷಿ “ಸಾಮಾನ್ಯರ ಜೀವನದ ಜೀವಂತ ಪಾತ್ರಗಳು ಕೆ. ಟಿ. ಗಟ್ಟಿ ಅವರ ಸಾಹಿತ್ಯದಲ್ಲಿ ಎದ್ದು ಕಾಣುವ ರೀತಿಯಲ್ಲಿ ಇರುತ್ತಿದ್ದವು. ಅವರ ಎಲ್ಲಾ ಸಾಹಿತ್ಯದ ಸಮಗ್ರ ಅಧ್ಯಯನ ವಿದ್ಯಾರ್ಥಿಗಳಿಗೆ ಕಲಿಕೆಯ ಪಾಠವಾಗಬೇಕು.” ಎಂದು ನುಡಿದರು.

    ಪ್ರಾಧ್ಯಾಪಕ ಡಾ. ಶ್ರುತಕೀರ್ತಿರಾಜ್ ಮಾತನಾಡಿ “ಸಾಹಿತಿ ಕೆ. ಟಿ. ಗಟ್ಟಿ ಅವರು ದಿನದ ನಿತ್ಯ ಕರ್ಮ ಬಿಟ್ಟರೆ ಇಪ್ಪತ್ನಾಲು ಗಂಟೆಗಳ ಸಮಯ ಬರವಣಿಗೆಗೆ ಮೀಸಲಿಟ್ಟಿದ್ದರು. ಸಮಯ ಮಿಕ್ಕಿದರೆ ಕೃಷಿಯಲ್ಲಿ ತೊಡಗುತ್ತಿದ್ದರು. ಆದುದರಿಂದ ಅವರ ಬರಹಗಳು ನೈಜತೆಯ ಆಗರವಾಗಿದ್ದುವು.” ಎಂದು ತಿಳಿಸಿದರು.

    ಕನ್ನಡ ಸಾಹಿತ್ಯ ಪರಿಷತ್ತು ಜಿಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಮಾತನಾಡಿ “ಸಾಹಿತ್ಯದ ಬೆಳವಣಿಗೆಗೆ ಮತ್ತು ಅಧ್ಯಯನಕ್ಕೆ ಸಾಹಿತಿ ಒಬ್ಬರು ಹೇಗೆ ಕೊಡುಗೆ ಯಾಗಬಲ್ಲರು ಎಂಬುದಕ್ಕೆ ಕೆ.ಟಿ. ಗಟ್ಟಿ ಉದಾಹರಣೆ.” ಎಂದು ಹೇಳಿದರು. ಗೌರವ ಕಾರ್ಯದರ್ಶಿ ರಾಜೇಶ್ವರಿ ನುಡಿನಮನ ಸಲ್ಲಿಸಿದರು.

    ಜಿಲ್ಲಾ ಗೌರವ ಕಾರ್ಯದರ್ಶಿ ವಿನಯ್ ಆಚಾರ್ಯ, ತೋನ್ಸೆ ಪುಷ್ಕಳ ಕುಮಾರ್, ಚಂದ್ರಶೇಖರ ನಾವಡ, ಸುಬ್ರಾಯ ಭಟ್, ಗಣೇಶ್ ಜಿ., ರಘು ಇಡ್ಕಿದು, ದಯಾನಂದ ರಾವ್ ಕಾವೂರು, ರೇಮಂಡ್ ಡಿಕುನ್ಹ ತಾಕೊಡೆ, ಮೂಲ್ಕಿ ತಾಲೂಕು ಅಧ್ಯಕ್ಷ ಮಿಥುನ ಉಡುಪ, ಸುರತಲ್ ಹೋಬಳಿ ಅಧ್ಯಕ್ಷೆ ಗುಣವತಿ ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಸುಮನಸಾ ಕೊಡವೂರು ಸಂಘಟನೆಯ ರಂಗಹಬ್ಬದ 2ನೇ ದಿನದ ಕಾರ್ಯಕ್ರಮದಲ್ಲಿ ‘ದೇವಸೂರ’ ನಾಟಕ ಪ್ರದರ್ಶನ
    Next Article ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಮಾಸಿಕ ಕಾರ್ಯಕ್ರಮ ಹಾಗೂ ಕಥಾಗೋಷ್ಠಿ
    roovari

    Add Comment Cancel Reply


    Related Posts

    ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 52ನೇ ವಿವೇಕ ವಾಣಿ ಸರಣಿ ಉಪನ್ಯಾಸ

    February 14, 2026

    ಪ್ರೊ. ಬಿ.ಎ. ವಿವೇಕ ರೈಯವರ ‘ಪಡುವಣ ತೀರದ ಕನ್ನಡ ನಾಡಿನ’ ಕೃತಿ ಲೋಕಾರ್ಪಣೆ

    February 14, 2026

    ಮೂಡುಬಿದಿರೆ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಪಕ್ಕಲಡ್ಕ

    February 14, 2026

    ಸೈಂಟ್ ಮೇರಿಸ್ ಶಾಲೆಯಲ್ಲಿ ‘ಕನ್ನಡದ ನಡಿಗೆ ಶಾಲೆಯ ಕಡೆಗೆ’ ಸಾಹಿತ್ಯ ಅಭಿಯಾನ

    February 14, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.