ಕಾರ್ಕಳ : ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಮಾಸಿಕ ಕಾರ್ಯಕ್ರಮ ಹಾಗೂ ಕಥಾಗೋಷ್ಠಿ ದಿನಾಂಕ 25-02-2024 ರಂದು ಕಾರ್ಕಳದ ಸರಕಾರಿ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ ನಡೆಯಿತು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಗಂಗಾಧರ ಪಣಿಯೂರು ಕಥಾರಚನೆ ಮತ್ತು ಕಥಾ ಪ್ರಕಾರಗಳ ಕುರಿತು ಮಾಹಿತಿ ನೀಡಿದರು ಮತ್ತು ಕಥೆಗಳನ್ನು ವಿಮರ್ಶಿಸಿ ಕಥಾ ಕೌಶಲದ ಬಗ್ಗೆ ಅರಿವು ಮೂಡಿಸಿದರು.
ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಸದಸ್ಯರಾದ ಶ್ಯಾಮಲಾ ಗೋಪಿನಾಥ್, ಸಾವಿತ್ರಿ ಮನೋಹರ್, ಅನುಪಮಾ ಚಿಪ್ಲುಂಕರ್, ಶೈಲಜಾ ಹೆಗ್ಡೆ, ಡಾ. ಸುಮತಿ ಪಿ., ವಸುಧಾ ಶೆಣೈ, ಮಾಲತಿ ಜಿ. ಪೈ, ಶ್ರೀ ಮುದ್ರಾಡಿ, ಪ್ರಜ್ಞಾವಾಣಿ ಗೋರೆ ಹಾಗೂ ರೇಖಾ ವಸಂತ್ ಕಥಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಗೀತಾ ಆರ್ ಮರಾಠ ಪ್ರಾರ್ಥಿಸಿ, ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಅಧ್ಯಕ್ಷ ಮಿತ್ರಪ್ರಭಾ ಹೆಗ್ಡೆ ಸ್ವಾಗತಿಸಿ, ಬಿ. ವಿ. ಸುಲೋಚನಾ ಕಾರ್ಯಕ್ರಮ ನಿರೂಪಿಸಿ, ಶಕುಂತಲಾ ಜಿ. ಅಡಿಗ ವಂದಿಸಿದರು.