ಉಳ್ಳಾಲ – ಕೋಟೆಕಾರ್ ಸುತ್ತಮುತ್ತಲಿನ ಜನರಿಗೆ ಇದೊಂದು ಸುವರ್ಣಾವಕಾಶ
ಎಳೆಯರು ಮತ್ತು ಯುವಸಮುದಾಯದಲ್ಲಿ ಸಂಸ್ಕೃತಿ ಸಂಸ್ಕಾರ ಪ್ರಜ್ಞೆ ಮೂಡಿಸುವ ಸಲುವಾಗಿ ಕಳೆದ ಮೂರು ವರ್ಷಗಳಿಂದ ಸೋಮೇಶ್ವರ ಗ್ರಾಮದ ಕೊಲ್ಯದಲ್ಲಿ 120 ವಿದ್ಯಾರ್ಥಿಗಳೊಂದಿಗೆ ಉಚಿತವಾಗಿ ನಡೆಯುತ್ತಿರುವ ಬ್ರಹ್ಮಶ್ರೀ ನಾರಾಯಣ ಗುರು ಧರ್ಮಶಿಕ್ಷಣ ಕೇಂದ್ರದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ‘ಮೂಲಸಂಸ್ಕೃತಿ’ ಯೋಜನೆಯಡಿಯಲ್ಲಿ ಯುವಜನಾಂಗದಿಂದ ಕಣ್ಮರೆಯಾಗುತ್ತಿರುವ ಅಪೂರ್ವ ತುಳು ಪಾಡ್ದನಗಳ ಕಲಿಕಾ ಕಮ್ಮಟ.
ಇಪ್ಪತ್ತು ದಿನಗಳ ತರಬೇತಿಯನ್ನು ನುರಿತ ಕಲಾವಿದರಿಂದ ಸಂಪೂರ್ಣ ಉಚಿತವಾಗಿ ಆಯೋಜಿಸಲಾಗಿದೆ. ಇಂದು 30-1-2023 ನೇ ಸೋಮವಾರ ಸಂಜೆ ಗಂಟೆ 7 ಗಂಟೆಗೆ ಕ್ಲಪ್ತ ಸಮಯದಲ್ಲಿ ತರಗತಿ ಉದ್ಘಾಟನೆಗೊಂಡು ಪ್ರತಿದಿನ ಇದೇ ಸಮಯಕ್ಕೆ ರಾತ್ರಿ 7 ರಿಂದ 8 ರ ವರೆಗೆ ನಡೆಯಲಿದೆ. 9 ನೇ ತರಗತಿ ಮೇಲ್ಪಟ್ಟು 70 ವರ್ಷದ ವರೆಗಿನವರು ಯಾವುದೇ ಸಮುದಾಯದ ಆಸಕ್ತರು ಒಂದು ನೋಟು ಪುಸ್ತಕ ಮತ್ತು ಪೆನ್‌ನೊಂದಿಗೆ ತರಗತಿಗೆ ಹಾಜರಾಗಬಹುದು.
ಸ್ಥಳ – ಬ್ರಹ್ಮಶ್ರೀ ನಾರಾಯಣ ಗುರು ಧರ್ಮಶಿಕ್ಷಣ ಕೇಂದ್ರ,
ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರ, ಕೊಲ್ಯ ಸೋಮೇಶ್ವರ, ಕೋಟೆಕಾರ್
ಹೆಚ್ಚಿನ ಮಾಹಿತಿಗಾಗಿ – 9449633652