ಕಾಸರಗೋಡು : ಕಾಸರಗೋಡಿನ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಇದರ ಸಂಗೀತ ಘಟಕ ‘ಸ್ವರ ಚಿನ್ನಾರಿ’, ಮಹಿಳಾ ಘಟಕ ‘ನಾರಿ ಚಿನ್ನಾರಿ’ಯು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಹಯೋಗದೊಂದಿಗೆ ಏರ್ಪಡಿಸುವ ಸಂತವಾಣಿ ಕಾರ್ಯಕ್ರಮ ‘ಕಾಯೋ ಕರುಣಾಕರಾ…’ ದಿನಾಂಕ 17-03-2024ನೇ ಆದಿತ್ಯವಾರ ಕಾಸರಗೋಡಿನ ಕರಂದಕಾಡಿನಲ್ಲಿರುವ ಪದ್ಮಗಿರಿ ಕಲಾ ಕುಟೀರದಲ್ಲಿ ನಡೆಯಲಿದೆ.
ಖ್ಯಾತ ನೇತ್ರ ತಜ್ಞರಾದ ಡಾ. ಅನಂತ ಕಾಮತ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಖ್ಯಾತ ವೈದ್ಯರಾದ ಡಾ. ಕೆ. ಕೆ. ಶ್ಯಾನ ಭೋಗ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಆಡಳಿತ ಮುಕ್ತೇಸರರಾದ ಕೆ. ಜಗದೀಶ್ ಕಾಮತ್ ಭಾಗವಹಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ಅಂತರಾಷ್ಟ್ರೀಯ ಖ್ಯಾತಿಯ ಗಾಯಕ ಹಾಗೂ ಪ್ರಸಾರ ಭಾರತೀ ಹಿಂದೂಸ್ಥಾನೀ ಸಂಗೀತ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು ‘ಯುವ ಕಲಾಮಣಿ’ ಪ್ರಶಸ್ತಿ ವಿಜೇತ ಬಾಲಚಂದ್ರ ಪ್ರಭು ಕಾರ್ಯಕ್ರಮ ನಡೆಸಿಕೊಡಲಿದ್ದು, ಇವರಿಗೆ ತಬ್ಲಾದಲ್ಲಿ ರಾಜೇಶ್ ಭಾಗವತ್ ಹಾಗೂ ಹಾರ್ಮೋನಿಯಮ್ ನಲ್ಲಿ ಹೇಮಂತ್ ಭಾಗವತ್ ಸಾಥ್ ನೀಡಲಿದ್ದಾರೆ.