ಮಂಗಳೂರು : ನಾಟ್ಯಾರಾಧನಾ ಕಲಾ ಕೇಂದ್ರ (ರಿ.), ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ನಾಟ್ಯಾರಾಧನಾ ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿ ಅರ್ಪಿಸುವ ನಾಟ್ಯಾರಾಧನಾ ತ್ರಿಂಶೋತ್ಸವದ ನೃತ್ಯಾಮೃತ -3ರಲ್ಲಿ ‘ಶ್ರೀ ರಾಮಾಭಿವಂದನಂ’ ಸರಣಿ ನೃತ್ಯ ಕಾರ್ಯಕ್ರಮವು ದಿನಾಂಕ 09-04-2024ರಂದು ಸಂಜೆ ಗಂಟೆ 5-15ರಿಂದ ಮಂಗಳೂರಿನ ಕುದ್ಮುಲ್ ರಂಗ ರಾವ್ ಸಭಾಭವನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಮಂಗಳೂರಿನ ಶ್ರೀ ನಾರಾಯಣಗುರು ಸೇವಾ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಇವರ ಅಧ್ಯಕ್ಷತೆಯಲ್ಲಿ ಅಗರಿ ಎಂಟರ್ ಪ್ರೈಸಸ್ ಇದರ ಮಾಲಕರಾದ ಶ್ರೀ ಅಗರಿ ರಾಘವೇಂದ್ರ ರಾವ್ ಇವರು ಉದ್ಘಾಟಿಸಲಿರುವರು. ಗಂಟೆ 5.45ರಿಂದ ‘ಶ್ರೀ ರಾಮಾಭಿವಂದನಂ’ ಮತ್ತು ಮಾಯಾ ವಿಲಾಸ ನೃತ್ಯ ರೂಪಕ, ತಿಲ್ಲಾನ ಮತ್ತು ಮಂಗಲಂ ನೃತ್ಯ ಪ್ರಸ್ತುತಿ ನಡೆಯಲಿದೆ.