ಉಪ್ಪಿನಂಗಡಿ : ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅಧ್ಯಕ್ಷ ಡಾ. ಶ್ರೀಪತಿ ಕಲ್ಲುರಾಯ ಇವರ ಪ್ರಾಯೋಜಕತ್ವದಲ್ಲಿ ದಿನಾಂಕ 07 ಫೆಬ್ರವರಿ 2026ರಂದು ನಡೆದ ತಾಳಮದ್ದಳೆ ಕೂಟದಲ್ಲಿ ‘ಜಾಂಬವತಿ ಕಲ್ಯಾಣ’ ತಾಳಮದ್ದಳೆ ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಶಬರಾಯ ಉಡುಪಿ, ಚೆಂಡೆ ಮದ್ದಳೆಯಲ್ಲಿ ಪದ್ಯಾಣ ಜಯರಾಮ್ ಭಟ್ ಮತ್ತು ಮುರಳೀಧರ ಕಲ್ಲೂರಾಯ, ಹಾಗೂ ಮುಮ್ಮೇಳದಲ್ಲಿ ಬಲರಾಮನಾಗಿ ಡಾ. ಶ್ರೀಪತಿ ಕಲ್ಲೂರಾಯ, ಶ್ರೀ ಕೃಷ್ಣನಾಗಿ ದಿವಾಕರ ಆಚಾರ್ಯ ಗೇರುಕಟ್ಟೆ, ಜಾಂಬವಂತನಾಗಿ ಗಣರಾಜ ಕುಂಬಳೆ, ಜಾಂಬವತಿಯಾಗಿ ರಾಜಶ್ರೀ ಶಬರಾಯ ಉಡುಪಿ ಭಾಗವಹಿಸಿದ್ದರು.
ದೇವಳದ ಆಡಳಿತ ಸೇವಾ ಟ್ರಸ್ಟಿನ ಅಧ್ಯಕ್ಷ ಭಾಸ್ಕರ ಬಾರ್ಯ, ಕಾರ್ಯದರ್ಶಿ ಪ್ರಶಾಂತ ಪೈ, ಸ್ವರ್ಣಲತಾ, ಮನೋಹರ ಶೆಟ್ಟಿ ಮತ್ತು ಸೇವಾ ಟ್ರಸ್ಟಿನ ಪದಾಧಿಕಾರಿಗಳು ಕಲಾವಿದರನ್ನು ಗೌರವಿಸಿದರು. ಭಾಸ್ಕರ ಬಾರ್ಯ ಸ್ವಾಗತಿಸಿ, ದಿವಾಕರ ಆಚಾರ್ಯ ಗೇರುಕಟ್ಟೆ ವಂದಿಸಿದರು.
