ಬೆಳಗಾವಿ : ರಂಗಸಂಪದ ವತಿಯಿಂದ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ದಿನಾಂಕ 25 ಮತ್ತು 26 ಏಪ್ರಿಲ್ 2026ರಂದು ಆಯೋಜಿಸಿದ್ದ ಎರಡು ದಿನಗಳ ರಂಗಾಭಿನಯ ಕಾರ್ಯಾಗಾರವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.
ಎರಡು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ಒಟ್ಟು 25 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ರಂಗಭೂಮಿಯ ವಿವಿಧ ಆಯಾಮಗಳ ಕುರಿತು ಖ್ಯಾತ ರಂಗಕರ್ಮಿಗಳಾದ ಡಾ. ಪ್ರಕಾಶ ಗರುಡ ಮತ್ತು ರಜನಿ ಗರುಡ ಇವರು ಪ್ರಾಯೋಗಿಕ ಹಾಗೂ ವಾಚಿಕವಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸಮಾರೋಪ ಸಮಾರಂಭದಲ್ಲಿ ಧಾರವಾಡ ರಂಗಾಯಣದ ನಿರ್ದೇಶಕ ಹಾಗೂ ಖ್ಯಾತ ನಟ-ನಿರ್ದೇಶಕ ರಫೀಕ್ ನದಾಫ್ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶಿಬಿರದಲ್ಲಿ ಪಾಲ್ಗೊಂಡಿದ್ದ 25 ಅಭ್ಯರ್ಥಿಗಳಿಗೆ ರಫೀಕ್ ನದಾಫ್ ಇವರು ಪ್ರಮಾಣಪತ್ರ ವಿತರಿಸಿ ಶುಭ ಹಾರೈಸಿದರು. ರಫೀಕ್ ನದಾಫ್ ಇವರನ್ನು ರಂಗಸಂಪದ ವತಿಯಿಂದ ಆತ್ಮೀಯವಾಗಿ ಸತ್ಕರಿಸಲಾಯಿತು.


ರಂಗ ಪ್ರೇಮಿಗಳಾದ ಎಲ್.ಎಸ್. ಶಾಸ್ತ್ರಿ, ರಾಮಚಂದ್ರ ಕಟ್ಟಿ, ಬಸವರಾಜ ಹುಣಶೀಕಟ್ಟಿ, ಶಿವಾನಂದ ಮಾರಿಹಾಳ, ಚಂದ್ರಶೇಖರ ನವಲಗುಂದ, ಮುದೇನೂರು, ಆನಂದ ಪುರಾಣಿಕ ಉಪಸ್ಥಿತರಿದ್ದರು. ಡಾ. ಅರವಿಂದ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಪ್ರಸಾದ ಕಾರಜೋಳ ಸ್ವಾಗತಿಸಿ, ಪದ್ಮಾ ಕುಲಕರ್ಣಿ ಪರಿಚಯಿಸಿದರು. ವೀಣಾ ಹೆಗಡೆ ನಿರೂಪಿಸಿ, ಚಿದಾನಂದ ವಾಳಕೆ ವಂದಿಸಿದರು.



