ಬೆಂಗಳೂರು : ಕಾಜಾಣ (ರಿ.) ಬೆಂಗಳೂರು ಇವರ ವತಿಯಿಂದ ‘ಕಾಜಾಣ ನಾಟಕೋತ್ಸವ’ 2026ವನ್ನು ದಿನಾಂಕ 30 ಏಪ್ರಿಲ್ 2026ರಂದು ಬೆಂಗಳೂರಿನ ಮಲ್ಲತ್ತಹಳ್ಳಿ ನಾಗರಭಾವಿ, 2ನೇ ಸ್ಟೇಜ್, ಎನ್.ಜಿ.ಇ.ಎಫ್. ಲೇಔಟ್ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ನಾಟಕೋತ್ಸವಕ್ಕೆ ಹಿರಿಯ ರಂಗಭೂಮಿ ಜೆ.ಕೆ. ಶ್ರೀನಿವಾಸಮೂರ್ತಿ ಚಾಲನೆ ನೀಡಲಿದ್ದು, ರಂಗಕರ್ಮಿಗಳಾದ ರಾಜಗುರು ಹೊಸಕೋಟೆ, ನಯನ ಸೂಡ, ಹನು ರಾಮಸಂಜೀವ ಮತ್ತು ರಂಗ ಕಲಾವಿದೆ ಚಾಂದಿನಿ ಇವರಿಗೆ ಕಾಜಾಣ ರಂಗಗೌರವ ನೀಡಿ ಸನ್ಮಾನಿಸಲಾಗುವುದು. ಸಂಜೆ 4-00 ಗಂಟೆಗೆ ಲಿಂಗೇಗೌಡ ಇವರ ಜೀವನಾಧಾರಿತ ಎನ್. ಲಿಂಗಯ್ಯ ಇವರ ನಾಗಸಂಪಿಗೆ ಕೃತಿ ಆಧಾರಿತ ಅರುಣ್ ಕುಮಾರ್ ಏಕವ್ಯಕ್ತಿ ಅಭಿನಯದ ‘ನಾಗಸಂಪಿಗೆ’ ನಾಟಕ ಮತ್ತು 7-30 ಗಂಟೆಗೆ ಗೋಕುಲ ಸಹೃದಯ ಅಭಿನಯದ ಏಕವ್ಯಕ್ತಿ ಪೌರಾಣಿಕ ನಾಟಕ ‘ಪಂಚಗವ್ಯ’ ಪ್ರದರ್ಶನ ನಡೆಯಲಿದೆ. ಇದೇ ಸಂದರ್ಭದಲ್ಲಿ ನಾಗಸಂಪಿಗೆ ನಾಟಕದ ಧ್ವನಿ ಮುದ್ರಿತ ರಂಗಗೀತೆಗಳ ಲೋಕಾರ್ಪಣೆ ನಡೆಯಲಿದೆ.



