ಮುಂಬಯಿ : ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಆಯೋಜಿಸಿರುವ ಕನ್ನಡ ವಿಭಾಗದ ನಲ್ವತ್ತಾರರ ಸಂಭ್ರಮ, ನಿರಂಜನ ಶತಮಾನೋತ್ಸವ, ಉಪನ್ಯಾಸ ಹಾಗೂ ಆರು ಕೃತಿಗಳ ಬಿಡುಗಡೆ ಕಾರ್ಯಕ್ರಮವು ದಿನಾಂಕ 13-04-2024ರಂದು ಮಧ್ಯಾಹ್ನ ಗಂಟೆ 2ಕ್ಕೆ ಮುಂಬಯಿ ಜೆ.ಪಿ. ನಾಯಕ್ ಸಭಾಭವನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ ಭೋಜ ಶೆಟ್ಟಿ ಇವರು ಉದ್ಘಾಟನೆ ಮಾಡಲಿದ್ದು, ಕರ್ನಾಟಕ ‘ಮಲ್ಲ’ ಪತ್ರಿಕೆಯ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿ ಇವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಜಿ.ಎನ್. ಉಪಾಧ್ಯ ಇವರ ‘ಸಾಹಿತ್ಯ ಸಿದ್ಧಿ ಸಿರಿಸೇವೆಯ ಸಾಕಾರ – ಡಾ. ಸುಧಾಮೂರ್ತಿ’ ಮತ್ತು ‘ರಸಋಷಿ ರಾಷ್ಟ್ರಕವಿ ಕುವೆಂಪು’, ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಎಂ.ಎ. ವಿದ್ಯಾರ್ಥಿ ವಿದ್ಯಾ ರಾಮಕೃಷ್ಣ ಇವರು ಅನುವಾದಿಸಿದ ‘From words to Noble Deeds-The Inspiring Tale of Dr. Sudha Murthy’, ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಇವರ ‘ನನ್ನ ಇತ್ತೀಚಿನ ಓದು’, ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಂಶೋಧನ ವಿದ್ಯಾರ್ಥಿ ಕಲಾ ಭಾಗ್ವತ್ ಇವರ ‘ಜಾಲಂದರ’ ಮತ್ತು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಎಂ.ಎ. ವಿದ್ಯಾರ್ಥಿಯಾದ ಸವಿತಾ ಅರುಣ್ ಶೆಟ್ಟಿಯವರ ‘ಬೆಳಕಿಂಡಿ’ ಒಟ್ಟು ಆರು ಕೃತಿಗಳು ಬಿಡುಗಡೆಗೊಳ್ಳಲಿವೆ. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಂಶೋಧನ ವಿದ್ಯಾರ್ಥಿಯಾದ ಸುರೇಖಾ ಹರಿಪ್ರಾಸಾದ ಶೆಟ್ಟಿ ಇವರಿಗೆ ಡಾ. ಲೀಲಾ ಬಿ. ಕೊಡಮಾಡುವ ‘ಶೋಧಸಿರಿ ಪುರಸ್ಕಾರ’ ನೀಡಿ ಗೌರವಿಸಲಾಗುವುದು.