ಸುರತ್ಕಲ್ : ಮಣಿಕೃಷ್ಣ ಸ್ವಾಮಿ ಅಕಾಡೆಮಿ(ರಿ) ಮತ್ತು ನಾಗರಿಕ ಸಲಹಾ ಸಮಿತಿ(ರಿ) ಸುರತ್ಕಲ್ ಸಹಭಾಗಿತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಇದರ ಸಹಕಾರದೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ದಿನಾಂಕ 06-04-2024ರ ಸಂಜೆ ಸುರತ್ಕಲ್ಲಿನ ಅನುಪಲ್ಲವಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಸಂಗೀತ ಗುರುಗಳಾದ ವಿದುಷಿ ಸುಮಾ ಸತೀಶ್ ರಾವ್ ಮಾತನಾಡಿ “ಮಕ್ಕಳು ನಿರ್ದಿಷ್ಟ ಆಸಕ್ತಿಯ ಕಲಾಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಸಾಧನೆ ನಡೆಸಬೇಕು.” ಎಂದರು.
ಸಭಾ ಕಾರ್ಯಕ್ರಮದ ಬಳಿಕ ಚಿನ್ಮಯಿ ಮನೀಶ್ ಚಾಲಕುಡಿಯವರಿಂದ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು.ಇವರಿಗೆ ವಯಲಿನ್ ನಲ್ಲಿ ಸುನಾದ ಪಿ ಎಸ್ ಮಾವೆ, ಮೃದಂಗದಲ್ಲಿ ನಿಕ್ಷಿತ್ ಪುತ್ತೂರು ಹಾಗೂ ಖಂಜೀರದಲ್ಲಿ ಕಾರ್ತಿಕ್ ಭಟ್ ಇನ್ನಂಜೆ ಸಾಥ್ ನೀಡಿದರು.
ಕಾರ್ಯಕ್ರಮದಲ್ಲಿ ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಶುಭ ಹಾರೈಸಿದರು. ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ.ನಿತ್ಯಾನಂದ ರಾವ್ ಕಾರ್ಯಕ್ರಮ ನಿರೂಪಿಸಿದರು.