ಧಾರವಾಡ : ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ವತಿಯಿಂದ ರಾಜ್ಯಮಟ್ಟದ ವಿದ್ಯಾರ್ಥಿ ಕಥಾ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಸ್ಪರ್ಧೆಯಲ್ಲಿ ಆಯ್ಕೆಯಾದ ಮೂರು ಅತ್ಯುತ್ತಮ ಕಥೆಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಮತ್ತು ವಿಜೇತರಿಗೆ ಪ್ರಶಸ್ತಿ ಪತ್ರ (ಹಾರ್ಡ್ ಕಾಪಿ) ಜೊತೆಗೆ ಪುಸ್ತಕಗಳನ್ನು ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಡಿಜಿಟಲ್ ಪ್ರಮಾಣ ಪತ್ರ ನೀಡಲಾಗುವುದು.
ಸ್ಪರ್ಧೆಯ ನಿಯಮಗಳು
* ಹೈಸ್ಕೂಲ್, ಪಿ.ಯು.ಸಿ., ಪದವಿ, ಸ್ನಾತಕೋತ್ತರ ಪದವಿ ಓದುತ್ತಿರುವ ಅಥವಾ ಓದು ಮುಗಿಸಿರುವ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
* ಪಿ. ಎಚ್. ಡಿ. ಮಾಡುತ್ತಿರುವ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದೆ.
* ಸ್ಪರ್ಧಿಗಳ ವಯಸ್ಸು 28 ಮೀರುವಂತಿಲ್ಲ.
* ಒಬ್ಬ ಸ್ಪರ್ಧಿ ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು.
* ಸ್ವತಂತ್ರ ಕಥೆಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುತಿದ್ದು ಅನುವಾದ, ಅನುಸೃಷ್ಟಿ ಮತ್ತು ರೂಪಾಂತರ ಮಾಡಿದ ಕಥೆಗಳಿಗೆ ಅವಕಾಶವಿಲ್ಲ.
* ಕಥೆಯು 3000 ಪದಗಳ ಮಿತಿಯನ್ನು ಮೀರುವಂತಿಲ್ಲ.
* ಕಥೆಯನ್ನು ಡಾಕ್ಸ್ ಅಥವಾ ಪಿ. ಡಿ. ಎಫ್ ರೂಪದಲ್ಲಿ ಮಾತ್ರ ಕಳುಹಿಸಬೇಕು.
* ಸ್ಪರ್ಧಿಗಳು ಪರಿಚಯ, ಪೂರ್ಣ ವಿಳಾಸ, ಆಧಾರ್ ಕಾರ್ಡಿನ ಪ್ರತಿ ಮತ್ತು ಒಂದು ಭಾವಚಿತ್ರವನ್ನು ಪ್ರತ್ಯೇಕವಾಗಿ ಕಳುಹಿಸಬೇಕು.
* ಕಥೆಗಳನ್ನು ಕಳುಹಿಸಲು 31-05-2024 ಕೊನೆಯ ದಿನ.
*05-06-2024ರಂದು ಫಲಿತಾಂಶವನ್ನು ಪ್ರಕಟಿಸಲಾಗುವುದು.