ಮಂಗಳೂರು : ಸನಾತನ ನಾಟ್ಯಾಲಯ ಮಂಗಳೂರು ನೃತ್ಯ ಸಂಸ್ಥೆಯ ಆಶ್ರಯದಲ್ಲಿ 5 ಅವಧಿಗಳನ್ನು ಒಳಗೊಂಡ ನಟುವಾಂಗ ಕಾರ್ಯಗಾರವು ದಿನಾಂಕ 05-05-2024ರಂದು ಮಂಗಳೂರಿನ ಬಲ್ಲಾಳ್ ಬಾಗ್ ನಲ್ಲಿರುವ ಸನಾತನ ನಾಟ್ಯಾಲಯದಲ್ಲಿ ನಡೆಯಿತು.
ಕರಾವಳಿಯ ಯುವ ವಿದ್ವಾಂಸರಾದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಕಾರ್ಯಾಗಾರದಲ್ಲಿ ನೃತ್ಯ ಸಂಸ್ಥೆಯ ಸುಮಾರು 20 ನೃತ್ಯ ವಿದ್ಯಾರ್ಥಿಗಳು ಹಾಜರಿದ್ದರು ಮತ್ತು ನೃತ್ಯ ಸೌರಭ ಸಂಸ್ಥೆಯ ಗುರುಗಳಾದ ಡಾ. ಶ್ರೀವಿದ್ಯಾ ಮುರಳೀಧರ್ ಅವರ ಓರ್ವ ಶಿಷ್ಯೆ ಶಿವಾನಿ ರಾವ್ ಅವರು ಭಾಗವಹಿಸಿದ್ದರು ಸಂಸ್ಥೆಯ ನಿರ್ದೇಶಕರಾದ ಹಿರಿಯ ಗುರು ಕರ್ನಾಟಕ ಕಲಾಶ್ರೀ ವಿದುಷಿ ಶಾರದಮಣಿ ಶೇಖರ್ ಮತ್ತು ಗುರು ವಿದುಷಿ ಶ್ರೀಲತಾ ನಾಗರಾಜ್ ಉಪಸ್ಥಿತರಿದ್ದರು.