ನಿಡ್ಲೆ : ಸ್ಪೂರ್ತಿದಾಯಕ ಮತ್ತು ಕಲಿಕೆಗೆ ಅವಕಾಶ ಮಾಡಿಕೊಡುವ ಕರುಂಬಿತ್ತಿಲ್ ಶಿಬಿರವು ದಿನಾಂಕ 15-05-2024ರಿಂದ 19-05-2024ರವರೆಗೆ ಬೆಳ್ತಂಗಡಿ ತಾಲೂಕಿನ ನಿಡ್ಲೆಯಲ್ಲಿರುವ ಕರುಂಬಿತ್ತಿಲ್ ಮನೆಯಲ್ಲಿ ನಡೆಯಲಿದೆ.
ದಿನಾಂಕ 15-05-2024ರಂದು ಬೆಳಗ್ಗೆ 9-30ಕ್ಕೆ ಶ್ರೀ ಡಿ.ಬಿ. ಪ್ರಕಾಶ್ ದೇವಾಡಿಗ, ಶ್ರೀ ಧರ್ಮಸ್ಥಳ ಗೋಪಾಲ ದೇವಾಡಿಗ ಮತ್ತು ಶ್ರೀ ನಿತ್ಯಾನಂದ ದೇವಾಡಿಗ ಇವರಿಂದ ಮಂಗಳ ವಾದ್ಯ ಪ್ರಸ್ತುತಿಗೊಳ್ಳಲಿದೆ. 10-30 ಗಂಟೆಗೆ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀ ಪದಾಂಗಳವರು ಇವರಿಂದ ಉದ್ಘಾಟನೆ ನಡೆಯಲಿದೆ. ವಿದ್ವಾನ್ ಉದಯಕುಮಾರ್ ಸರಳತಾಯ ಇವರಿಂದ ಪ್ರವಚನ ಮತ್ತು ಅಮೇರಿಕಾದ ಮೃದಂಗ ವಾದಕರಾದ ಡಾ. ರಮೇಶ್ ಶ್ರೀನಿವಾಸನ್ ಇವರಿಂದ ವಿಶೇಷ ಸಂಗೀತ ಮೇಳ ಜರುಗಲಿದೆ. ಸಂಜೆ ಗಂಟೆ 4-00ರಿಂದ ಶ್ರೀಮತಿ ಇಂದಿರಾ ಕಡಂಬಿಯವರಿಂದ ಪ್ರಸ್ತುತಗೊಳ್ಳಲಿರುವ ಭರತನಾಟ್ಯ ಪ್ರದರ್ಶನಕ್ಕೆ ಹಾಡುಗಾರಿಕೆಯಲ್ಲಿ ಶ್ರೀ ಟಿ.ವಿ. ರಾಮ್ ಪ್ರಸಾದ್, ಶ್ರೀ ವಿಠಲ್ ರಂಗನ್ ಮತ್ತು ಶ್ರೀ ಎಂ.ಎಸ್. ವರದನ್ ಮತ್ತು ಶ್ರೀ ಪಯ್ಯನೂರ್ ಗೋವಿಂದಪ್ರಸಾದ್ ಸಹಕರಿಸಲಿದ್ದಾರೆ. 7-00 ಗಂಟೆಗೆ ಶ್ರೀ ವಿಷ್ಣು ಆರ್. ಮತ್ತು ತಂಡದವರಿಂದ ನವತಾರ್ ಕಛೇರಿ ನಡೆಯಲಿದೆ.
ದಿನಾಂಕ 16-05-2024ರಂದು ಬೆಳಗ್ಗೆ 10-00 ಗಂಟೆಗೆ ಶ್ರೀ ನಿಜಲಿಂಗೇಶ್ವರ ಮಹಾ ಸ್ವಾಮೀಜಿಯವರಿಂದ ಆಶೀರ್ವಚನ ಹಾಗೂ ಶ್ರೀ ದಿನೇಶ್ ಅಮ್ಮಣ್ಣಾಯ, ಶ್ರೀ ಚೈತನ್ಯ ಕೃಷ್ಣ ಪದ್ಯಾಣ ಮತ್ತು ಶ್ರೀ ಶ್ರೇಯಸ್ ಪಾಲಂದೆ ಇವರಿಂದ ‘ಯಕ್ಷಗಾನ-ಗಾನ-ವೈಭವ’ ನಡೆಯಲಿದೆ. ಸಂಜೆ ಗಂಟೆ 6-00ಕ್ಕೆ ಶ್ರೀಮತಿ ಚಾರುಮತಿ ರಘುರಾಮನ್ ಮತ್ತು ಶ್ರೀ ಅನಂತ ಆರ್. ಕೃಷ್ಣನ್ ಇವರುಗಳು ವಿಶೇಷ ಜೋಡಿ ಕಛೇರಿ ನೀಡಲಿದ್ದಾರೆ.
ದಿನಾಂಕ 17-05-2024ರಂದು ಬೆಳಗ್ಗೆ 10-00 ಗಂಟೆಗೆ ಶ್ರೀಮತಿ ವೈ.ಜಿ. ಶ್ರೀಲತಾ ಮತ್ತು ಶ್ರೀ ನಿಕ್ಷಿತ್ ಪುತ್ತೂರು ಇವರಿಂದ ವೀಣಾ ವಾದನ ಕಛೇರಿ ಮತ್ತು ಸಂಜೆ 6-00 ಗಂಟೆಯಿಂದ ವಿಶೇಷ ಗೋಷ್ಠಿ ನಡೆಯಲಿದೆ.
ದಿನಾಂಕ 18-05-2024ರಂದು ಬೆಳಗ್ಗೆ 10-00 ಗಂಟೆಗೆ ವಯೋಲಿನ್ ವಿದ್ವಾನ್ ಎಚ್.ಕೆ. ನರಸಿಂಹ ಮೂರ್ತಿ ಇವರಿಂದ ಗೌರವ ಸನ್ಮಾನ ನಡೆಯಲಿದ್ದು, ಬಳಿಕ ವಿದ್ವಾನ್ ಎಚ್.ಕೆ. ನರಸಿಂಹ ಮೂರ್ತಿ ಮತ್ತು ಶ್ರೀ ಎಚ್.ಎನ್. ಭಾಸ್ಕರ್ ಇವರಿಂದ ವಯೋಲಿನ್ ಯುಗಳ ಗೋಷ್ಠಿ ನಡೆಯಲಿದ್ದು, ಶ್ರೀ ಹನುಮಂತಪುರಂ ಭುವರಹಂ ಮತ್ತು ಶ್ರೀ ಸುಂದರ ಕುಮಾರ್ ಸಹಕರಿಸಲಿದ್ದಾರೆ.
ದಿನಾಂಕ 19-05-2024ರಂದು ನಡೆಯಲಿರುವು ಶಿಬಿರದ ಸಮಾರೋಪದಲ್ಲಿ ಶಿಬಿರಾರ್ಥಿಗಳು ಕಾರ್ಯಕ್ರಮ ನೀಡಲಿದ್ದಾರೆ. ಶ್ರೀ ರಮಣ ಬಾಲಚಂದ್ರನ್, ಶ್ರೀ ವಿ.ವಿ. ರಮಣ ಮೂರ್ತಿ ಮತ್ತು ಶ್ರೀ ಸುಂದರ ಕುಮಾರ್ ಇವರಿಂದ ವಿಶೇಷ ವೀಣಾ ವಾದನ ಮತ್ತು ಗಾಯನ ಕಛೇರಿ ನಡೆಯಲಿದೆ.
ಸಂಗೀತ ಕಛೇರಿಗಳು, ಸಂಗೀತ ಆಟಗಳು, ಲಯದೊಂದಿಗೆ ವಿನೋದ, ಅಭಿನಯ, ಲೆಕ್ ಡೆಮ್‌ಗಳು ಮತ್ತು ಆಶ್ಚರ್ಯಕರ ಸಂಗೀತ ಕಚೇರಿಗಳು ಸೇರಿದಂತೆ ಅನೇಕ ವಿಶೇಷ ಸಂಗೀತ ಚಟುವಟಿಕೆಗಳನ್ನು ಶಿಬಿರವು ಒಳಗೊಂಡಿರುತ್ತದೆ. ಶಿಬಿರಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿರುವ ಅನೇಕ ಕಲಿಕೆಗಳೇ ಈ ಶಿಬಿರದ ವೈಶಿಷ್ಟ್ಯಗಳು. ಸಂಗೀತಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ಮತ್ತು ಸಂಗೀತಾಸಕ್ತ ವಿದ್ಯಾರ್ಥಿಗಳು ಪೂರ್ಣವಾಗಿ 5 ದಿನಗಳೂ ಶಿಬಿರದಲ್ಲಿ ಭಾಗವಹಿಸಿ ಅನುಭವ ಪಡೆದುಕೊಳ್ಳುವುದಕ್ಕಾಗಿ ನಿಮ್ಮನ್ನು ಈ ಶಿಬಿರ ಸ್ವಾಗತಿಸುತ್ತಿದೆ.
ಉಚಿತ ಪ್ರವೇಶ ಗೂಗಲ್ ಫಾರ್ಮ್ ಮುಖಾಂತರ ನೋಂದಣಿ ಮಾಡಿಕೊಳ್ಳಬಹುದು. ವಿದ್ವಾನ್ ವಿಠಲ್ ರಾಮಮೂರ್ತಿ ಮತ್ತು ಕರುಂಬಿತ್ತಿಲ್ ಕುಟುಂಬ ತಮ್ಮನ್ನು ಈ ಶಿಬಿರಕ್ಕೆ ಆದರದಿಂದ ಸ್ವಾಗತಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ 9444021850 ಮತ್ತು 9611308860