ಉಡುಪಿ : ಚಲನಚಿತ್ರ ನಟ, ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಅವರ ಸಾರಥ್ಯದಲ್ಲಿ ‘ಘರ್ ಘರ್ ಕೊಂಕಣಿ’ ಕಾರ್ಯಕ್ರಮವು ಈಗಾಗಲೇ ಗಡಿನಾಡು ಕೇರಳ ಹಾಗೂ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಯಶಸ್ವಿಗೊಂಡಿದ್ದು, ದಿನಾಂಕ 12-05-2024ರಂದು ಉಡುಪಿಯ ಆಸುಪಾಸಿನಲ್ಲಿ ನಡೆಯಲಿದೆ.
ಬೆಳಗ್ಗೆ 10-00 ಗಂಟೆಗೆ 152ನೇ ಕಾರ್ಯಕ್ರಮವು ಉಡುಪಿಯ ಅಂಬಲ್ಪಾಡಿ, ಕಿದಿಯೂರ್ ರಸ್ತೆ, 4ನೇ ಅಡ್ಡ ರಸ್ತೆ, ‘ದರ್ಶನ್’ ಇಲ್ಲಿ ಶ್ರೀಮತಿ ದೀಪಾ ಮತ್ತು ಎಂ. ದಿನೇಶ್ ಭಂಡಾರಿ ಇವರ ಆತಿಥ್ಯದಲ್ಲಿ, 11-30 ಗಂಟೆಗೆ 153ನೇ ಕಾರ್ಯಕ್ರಮವು ಉಡುಪಿಯ ಬನ್ನಂಜೆ, ಬಿ.ಬಿ. ಗರಡಿ ರೋಡ್, ‘ಗಣೇಶ್ ಪ್ರಸಾದ್’ ಇಲ್ಲಿ ಶ್ರೀಮತಿ ಕಲ್ಪನಾ ಎಸ್. ಶೇಟ್ ಮತ್ತು ಶ್ರೀ ಸುಬ್ರಹ್ಮಣ್ಯ ಶೇಟ್ ಇವರ ಆತಿಥ್ಯದಲ್ಲಿ, 02-30 ಗಂಟೆಗೆ 154ನೇ ಕಾರ್ಯಕ್ರಮವು ಉಡುಪಿಯ ಸಿಟಿ ಹಾಸ್ಪಿಟಲ್ ಲಾಗ್ಗಿ, ಕಾಡಬೆಟ್ಟು, ‘ವೈಕುಂಠ ಭವನ್’ ಇಲ್ಲಿ ಶ್ರೀಮತಿ ಪ್ರಿಯಾ ಎಸ್. ಕಾಮತ್ ಇವರ ಆತಿಥ್ಯದಲ್ಲಿ ಹಾಗೂ 04-15 ಗಂಟೆಗೆ 155ನೇ ಕಾರ್ಯಕ್ರಮವು ಉಡುಪಿಯ ಮಣಿಪಾಲ, ಅನಂತ್ ನಗರ್, ಲಿಂಕ್ ರೋಡ್ ನಂ.2, 107 ಡಿ.ಎ. ಇಲ್ಲಿ ಶ್ರೀಮತಿ ಸುಮತಾ ನಾಯಕ್ ಮತ್ತು ಆಮ್ಮುಂಜೆ ರಮೇಶ್ ನಾಯಕ್ ಇವರ ಆತಿಥ್ಯದಲ್ಲಿ ಸಂಪನ್ನಗೊಳ್ಳಲಿದೆ.