ಉಡುಪಿ : ಬೆಂಗಳೂರಿನ ಸರ್ಜಾಪುರ, ಬಿಕ್ಕನಹಳ್ಳಿ ಮುಖ್ಯರಸ್ತೆ, ಬುರುಗುಂಟೆ ಹಳ್ಳಿ, ಸರ್ವೆ ನಂ.66 ಇಲ್ಲಿರುವ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ವತಿಯಿಂದ ಉಡುಪಿ ಜಿಲ್ಲೆಯ ಪದವಿ ವಿದ್ಯಾರ್ಥಿಗಳಿಗಾಗಿ ಕನ್ನಡದಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಡಾ. ಶಿವರಾಮ ಕಾರಂತರ ‘ಬಾಳ್ವೆಯೇ ಬೆಳಕು’ ಪುಸ್ತಕದ ಬಗೆಗಿನ ವಿಶ್ಲೇಷಣಾತ್ಮಕ ಬರಹ ಬರೆದು ಕಳುಹಿಸಬೇಕು.
ಸೂಚನೆಗಳು:
* ವಿದ್ಯಾರ್ಥಿಯ ಕಾಲೇಜಿನ ಐಡಿ ಕಾರ್ಡಿನ ಪ್ರತಿ ಮತ್ತು ವಿದ್ಯಾರ್ಥಿಯ ಸ್ವಂತ ಬರಹವೆಂದು ಪ್ರಮಾಣೀಕರಿಸಲಾದ ಸಂಬಂಧಿತ ಕಾಲೇಜಿನ ಪ್ರಿನ್ಸಿಪಾಲರ ಪತ್ರ ಲಗತ್ತಿಸಿರಬೇಕು.
* ಪ್ರತಿ ಕಾಲೇಜಿನಿಂದ ಗರಿಷ್ಠ ಐದು ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ.
* ಗರಿಷ್ಠ ಮಿತಿ: ಫುಲ್‌ಸ್ಟೇಪ್ 6-8 ಪುಟ ಅಥವಾ 1500ರಿಂದ 2000 ಪದಗಳು.
* ಪ್ರಬಂಧಗಳನ್ನು ದಿನಾಂಕ 25-05-2024ರೊಳಗೆ ಡಾ. ನಿಕೇತನ, ಎಚ್.ಓ.ಡಿ., ಕನ್ನಡ ವಿಭಾಗ. ಸರಕಾರಿ ಮಹಿಳಾ ಕಾಲೇಜು, ಅಜ್ಜರಕಾಡು, ಉಡುಪಿ -576 101 ಇವರಿಗೆ ತಲುಪಿಸಬೇಕು.
ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ವಿಜೇತರಿಗೆ ಪುಸ್ತಕಗಳ ಖರೀದಿಗಾಗಿ ಕೆಳಗಿನ ಮೊತ್ತದ ವೋಚರ್ ನೀಡಲಾಗುವುದು.
ಪ್ರಥಮ ಬಹುಮಾನ ರೂ.1500/-, ದ್ವಿತೀಯ ಬಹುಮಾನ ರೂ.1250/- ಮತ್ತು ತೃತೀಯ ಬಹುಮಾನ ರೂ.1000/-
ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ದಿನಾಂಕ 01-06-2024ರಂದು ಉಡುಪಿಯ ಎಂ.ಜಿ.ಎಂ. ಕಾಲೇಜು ಸಭಾಂಗಣದಲ್ಲಿ ನಡೆಯುವ ‘ಸಾಹಿತ್ಯ ಸಹವಾಸ’ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಡಾ. ನಿಕೇತನ, ಮೊಬೈಲ್: 9164165883