15 ಫೆಬ್ರವರಿ 2023, ಉಡುಪಿ: ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ ಫೆಬ್ರವರಿ 12ರಂದು ಜರುಗಿದ ಸರಣಿ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಅರುಣ ಜ್ಯುವೆಲರ್ಸ್ ಮಾಲಕ ಅರುಣ್ ಜಿ. ಶೇಟ್ ಮೇಲಿನಂತೆ ನುಡಿದರು.ಯಕ್ಷಗಾನವನ್ನು ಹಿಂದಿನವರು ಅತ್ಯಂತ ಶೃದ್ಧೆಯಿಂದ ಪ್ರದರ್ಶಿಸುತ್ತಲಿದ್ದರು.ಕೇಳುಗರು ಇಲ್ಲದಿದ್ದರೂ ದೇವರ ಆರಾಧನೆ ಎಂಬ ನೆಲೆಯಲ್ಲಿ ಕಲಾ ಸೇವೆ ಮಾಡುತ್ತಿದ್ದುದೇ ಯಕ್ಷಗಾನದ ಉಳಿವಿಗೆ ಕಾರಣ ಎಂದರು.ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ,ಶ್ರೀ ಮಹಾಮಾಯೀ ದೇವಸ್ಥಾನದ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ಹಾರ್ಮೋನಿಯಂ ವಾದಕನಾಗಿ ಸಂಘದಲ್ಲಿ ಸೇವೆ ಮಾಡುತ್ತಿದ್ದ ಭವಾನಿಶಂಕರ ಆಚಾರ್ಯರನ್ನು ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ಅಭಿನಂದಿಸಿದರು. ಸಂಘದ ಬಯಲಾಟದಂದೂ ಯಾವುದೇ ಫಲಾಪೇಕ್ಷೆ ಇಲ್ಲದೇ ದುಡಿಯುತ್ತಿದ್ದ ಭವಾನಿ ಶಂಕರರ ಸೇವೆ ಅನನ್ಯ ಎಂದು ಶ್ಲಾಘಸಿದರು. ಸಂಘಟನಾ ಕಾರ್ಯದರ್ಶಿ ಅಶೋಕ್ ಬೋಳೂರು ಸಂಮಾನ ಪತ್ರದ ವಾಚನ ಗೈದರು.
ಕೀರ್ತಿಶೇಷ ಪೆರ್ಲ ಕೃಷ್ಣ ಭಟ್ಟರು ವಾಗೀಶ್ವರೀ ಯಕ್ಷಗಾನ ಸಂಘದಲ್ಲಿ ಅರ್ಥಧಾರಿಯಾಗಿ ಭಾಗವಹಿಸಿ ಸಲ್ಲಿಸಿದ್ದ ಸೇವೆಗಾಗಿ ನುಡಿ ನಮನ ಸಲ್ಲಿಸಲಾಯಿತು.ಉಡುಪಿಯಲ್ಲಿ ಜರಗಿದ ಪ್ರಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಸಂಘಕ್ಕೆ ನೀಡಿದ ಸಂಮಾನದ ವಿವರಗಳನ್ನು ಸಂಜಯ ಕುಮಾರ್ ಸಭೆಗೆ ತಿಳಿಸಿದರು. ಪ್ರಾಯೋಜಕರಾಗಿ ಸಹಕರಿಸಿದ ಉದ್ಯಮಿ ಸತೀಶ್ ಕೋಟ್ಯಾನ್ ಶುಭವನ್ನು ಹಾರೈಸಿದರು. ಕೋಶಾಧಿಕಾರಿ ಶಿವಪ್ರಸಾದ್ ಪ್ರಭು ಸ್ವಾಗತಿಸಿದರು. ಅಧ್ಯಕ್ಷ ಶ್ರೀನಾಥ್ ಪ್ರಭು, ಉಪಾಧ್ಯಕ್ಷೆ ಪ್ರಫುಲ್ಲಾ ನಾಯಕ್, ಶ್ರೀಮತಿ ಪೂರ್ಣಿಮಾ ಭಾವನಿ ಶಂಕರ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಕುಶ ಲವರ ಕಾಳಗ ಎಂಬ ಯಕ್ಷಗಾನ ತಾಳಮದ್ದಳೆ ಸಂಘದ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಜರಗಿತು.
Subscribe to Updates
Get the latest creative news from FooBar about art, design and business.