Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಶಾಸ್ತ್ರೀಯ ಶೈಲಿಯ ವಿಶೇಷ ಕಲಾವಿದ ರಥ ಶಿಲ್ಪಿ ಪರಮೇಶ್ವರಾಚಾರ್ಯ

    June 24, 2025

    ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ಮತ್ತು ಸಂಗೀತ ದಿನಾಚರಣೆ

    June 23, 2025

    ಮಂಗಳೂರಿನ ಅಮೃತ ಕಾಲೇಜಿನಲ್ಲಿ ತುಳು ನಾಟಕ ಕಾರ್ಯಾಗಾರ | ಜೂನ್ 24

    June 23, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ 2023 – ಸಮ್ಮೇಳನಾಧ್ಯಕ್ಷರ ಅನಿಸಿಕೆ
    Yakshagana

    ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ 2023 – ಸಮ್ಮೇಳನಾಧ್ಯಕ್ಷರ ಅನಿಸಿಕೆ

    February 15, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    15 ಫೆಬ್ರವರಿ 2023, ಮಂಗಳೂರು: ಫೆಬ್ರವರಿ 11 ಮತ್ತು 12ರಂದು ಸಂಪನ್ನಗೊಂಡ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದ ಕುರಿತು ಸಮ್ಮೇಳನಾಧ್ಯಕ್ಷರಾದ ಡಾ. ಎಂ. ಪ್ರಭಾಕರ ಜೋಷಿ ಇವರ ಅನಿಸಿಕೆ

    “ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಮಾನ್ಯ ಸುನಿಲ್ ಕುಮಾರ್ ಕಾರ್ಕಳ, ಶಾಸಕ ರಘುಪತಿ ಭಟ್ ಹಾಗೂ ಸಂಘಟನಾ ಸಮಿತಿಯ ಎಲ್ಲರೂ, ಜಿ.ಎಲ್.ಹೆಗ್ಡೆ ಮತ್ತು ಅವರ ಬಳಗ, ಉಡುಪಿ ಕಲಾರಂಗ ಬಳಗ ತುಂಬಾ ದುಡಿದು ಒಂದು ಅದ್ಭುತವಾದ ಕೆಲಸ ಮಾಡಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರ ಮುತುವರ್ಜಿ ಸಹಕಾರವೂ ಸ್ಮರಣೀಯ. ಅಕಾಡೆಮಿ ರಿಜಿಸ್ಟ್ರಾರ್ ಮತ್ತವರ ಸಿಬ್ಬಂದಿಗಳು, ಸ್ವಯಂಸೇವಕರು, ಅನೇಕ ದಾನಿಗಳು, ಸಹಕಾರಿ ಸಂಸ್ಥೆಗಳು, ದೇವಾಲಯಗಳ ಆಡಳಿತ ಮಂಡಳಿಗಳು ಜೊತೆಗಿದ್ದು ಸಹಕರಿಸಿದ್ದು ಶ್ಲಾಘನೀಯ. ಅದಕ್ಕೆ ಪೂರಕವಾಗಿ ಮಾಹೆಯವರ ಬಿ. ಎಡ್. ಕಾಲೇಜೂ ಸಿಕ್ಕಿತು. ಎಂ. ಜಿ. ಎಂ. ಕಾಲೇಜಿಗೂ ಇದು ಹತ್ತಿರವಾಯಿತು. ಉತ್ತಮ ಜಾಗ ಮತ್ತು ಎಲ್ಲಾ ಸೌಕರ್ಯಗಳಿರುವ ಜಾಗವೂ ಹೌದು. ಅತ್ಯಲ್ಪ ಅವಧಿಯ ಸಿದ್ಧತೆ. 100 ಅಂಗಡಿ ಮುಗ್ಗಟ್ಟುಗಳು, ದ್ವಾರಗಳು ಮತ್ತು ಅಂಗಣಗಳಿಗೆ ಬೇರೆ ಬೇರೆ ಹೆಸರುಗಳು, ಅಲ್ಲಿಯೇ ತಾಳ, ಸಾಮಗ್ರಿ, ಶಿಲ್ಪ ತಯಾರು ಮಾಡುವುದು, ಇದೆಲ್ಲಾ ಸಾಧ್ಯತೆಗಳನ್ನು ತೋರಿಸುತ್ತದೆ. ತೀರಾ ಹಳೆಯ ಕ್ರಮದ ರಂಗಸ್ಥಳ, ಮಡಲಿನಿಂದ ಕಟ್ಟಿದ ಚೌಕಿ, ಮೂರು ವೇದಿಕೆಗಳಲ್ಲಿ ನಿರಂತರ ಪ್ರದರ್ಶನ, ಪ್ರಧಾನ ವೇದಿಕೆಯಲ್ಲಿ ಉದ್ಘಾಟನೆ, ಅಧ್ಯಕ್ಷರ ಭಾಷಣ, ಸಂವಾದಗಳು, ಸನ್ಮಾನ, ಸಮಾರೋಪ ಇತ್ಯಾದಿ. ಸಮಾನಾಂತರದಲ್ಲಿರುವ ಉಳಿದೆರಡು ವೇದಿಕೆಗಳಲ್ಲಿ ತಾಳ ಮದ್ದಳೆ ನಡೆಯುತ್ತಿತ್ತು. ತೆಂಕು ಬಡಗು ತಿಟ್ಟುಗಳ ಪ್ರದರ್ಶನ ಉತ್ತಮವಾಗಿ ಮೂಡಿ ಬರುತ್ತಿತ್ತು. ಉತ್ತಮ ರೀತಿಯಲ್ಲಿ ಸನ್ಮಾನ, ರೂ.10000/- ಕೊಡುಗೆ ಮತ್ತು ಉಪಸ್ಥಿತರಿದ್ದ ಬೇರೆ ಬೇರೆ ಮೇಳಗಳಿಂದ ಬಂದ ಎಲ್ಲಾ ಕಲಾವಿದರಿಗೂ ಒಂದು ಗಿಫ್ಟ್ ಕೊಟ್ಟಿದ್ದಾರೆ. ಏನು ನೆನೆಸಿದ್ದಾರೋ ಅದರ ಬಹು ಭಾಗ ಕೈಗೂಡಿದೆ. ಅಸಮಾಧಾನ ಅತೃಪ್ತಿಗಳು ಉಳಿದಿರಬಹುದು. ಒಂದೇ ಭಾರಿಗೆ ಎಲ್ಲವನ್ನೂ ನಿಭಾಯಿಸಲಾಗುವುದಿಲ್ಲ. ಪ್ರಾಶಸ್ತ್ಯ ಬೇರೆ ಬೇರೆಯವರು ಕೊಡುವಾಗ ಬೇರೆ ಬೇರೆ ಇರುತ್ತದೆ. ಅದಕ್ಕೆ ಅಂತ್ಯ ಎಂಬುದು ಇಲ್ಲ. ಈ ಸಮ್ಮೇಳನ ನಿರಂತರವಾಗಿ ನಡೆಯಬೇಕು. ಅಧ್ಯಕ್ಷ ಭಾಷಣದಲ್ಲಿ 30 ಬೇಡಿಕೆಗಳನ್ನು ಸರಕಾರದ ಮುಂದೆ ಇಟ್ಟಿದ್ದೇನೆ. ಅಂತರ್ ರಾಷ್ಟ್ರೀಯ ಮಟ್ಟದ ಪೂರ್ಣ ಸಂಗ್ರಹಾಲಯ, ಡೇಟಾಬೇಸ್, ಕಲಾವಿದರ ಹಿತರಕ್ಷಣೆ, ಮಾಸಾಶನ, ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ಪುರಸ್ಕಾರಗಳಲ್ಲಿ ಯಕ್ಷಗಾನಕ್ಕೆ ಸ್ಥಾನ, ಯಕ್ಷಗಾನ ಶಾಲೆಗಳನ್ನು ಮೇಲ್ದರ್ಜೆಗೇರಿಸಿ Modern School Of Arts ತರಹ ಮಾಡಬೇಕು ಎಂಬಿತ್ಯಾದಿ ಬೇಡಿಕೆ. ಎಷ್ಟು ಮಾಡಲು ಸಾಧ್ಯವಿದೆಯೋ ಗೊತ್ತಿಲ್ಲ. ಮುಂದಿನ 10 -15 ವರ್ಷಗಳಲ್ಲಿ ಮಾಡಬಹುದಾದ ಕೆಲಸಗಳ ಬಗ್ಗೆ ಮಾಹಿತಿ ನೀಡಿದ್ದೇನೆ. ತುಂಬಾ ಆತ್ಮೀಯವಾಗಿ ನಡೆಸಿಕೊಂಡಿದ್ದಾರೆ. ಅನೇಕ ಅರ್ಹರ ಮಧ್ಯೆ ನಾನೂ ಒಬ್ಬ. ನನಗೆ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಯಕ್ಷಗಾನ ಸಮ್ಮೇಳನದ ಅಧ್ಯಕ್ಷತೆ ಅದು ಒಬ್ಬ ಕಲಾವಿದನಿಗೆ ಹಾಗೂ ತಜ್ಞರಿಗೆ ಸಿಗಬಹುದಾದ ದೊಡ್ಡ ಮನ್ನಣೆ. ಸಮ್ಮೇಳನದ ಆರಂಭದ ಅಧ್ಯಕ್ಷನನ್ನಾಗಿ ನನ್ನನ್ನು ಮಾಡಿ ಗೌರವ ನೀಡಿದ್ದಕ್ಕೆ ಸಂಬಂಧ ಪಟ್ಟ ಎಲ್ಲರಿಗೂ ಕೃತಜ್ಞನಾಗಿದ್ದೇನೆ. ಇನ್ನು ಮುಂದೆ ಯಾರಾದರೂ ಖಾಸಗಿಯಾಗಲೀ, ಸರ್ಕಾರಿಯಾಗಲೀ ಯಕ್ಷಗಾನದ ಕೆಲಸ ಮಾಡುವುದಿದ್ದಲ್ಲಿ ನಾನು ಯಾವಾಗಲೂ ಸಹಾಯ ನೀಡಲು ಸಿದ್ಧ. ಬಹಳಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಅದಕ್ಕೆ ಸರಿಯಾಗಿ ಸಾರ್ವಜನಿಕ ಪ್ರತಿಕ್ರಿಯೆಯೂ ಚೆನ್ನಾಗಿ ಬಂದಿದೆ. ಈ ಕೆಲಸ ಮುಂದೆ ಸಾಗಬೇಕು.”

    • ಡಾ.ಎಂ.ಪ್ರಭಾಕರ ಜೋಷಿ, ಸಮ್ಮೇಳನಾಧ್ಯಕ್ಷ, ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ 2023

    ಪೂರ್ಣ ಸಮ್ಮೇಳನ ಅಧ್ಯಕ್ಷರ ಆಯ್ಕೆಯಿಂದ ಮೊದಲ್ಗೊಂಡು ಗೋಷ್ಟಿಯವರೆಗೂ ಯಶಸ್ಸನ್ನು ಕಂಡಿದೆ. ಇದು ಒಂದು ಸರಕಾರಿ ಸಮ್ಮೇಳನದ ಹಾಗಿರದೆ, ಬಹಳ ಕಾಳಜಿವಹಿಸಿ ಮಂತ್ರಿಗಳು ಶಾಸಕರೆಲ್ಲರೂ ಸೇರಿ ಶ್ರದ್ಧೆಯಿಂದ ಮೂರೂ ವೇದಿಕೆಗಳನ್ನು ಬಳಸಿಕೊಂಡು ಗರಿಷ್ಠ ಪ್ರಾತಿನಿಧ್ಯ ಕೊಟ್ಟು ಮಾಡಿದ್ದಾರೆ ಎಂಬುದು ಜನಮಾನಸದ ಅಭಿವ್ಯಕ್ತಿ.

    Share. Facebook Twitter Pinterest LinkedIn Tumblr WhatsApp Email
    Previous Articleಮನಸ್ಸಿಗೆ ಮುದ ನೀಡುವ ಕಲೆ ಯಕ್ಷಗಾನ – ಅರುಣ್ ಜಿ ಶೇಟ್
    Next Article ಮಂಗಳೂರು ವಿವಿ: ಕನಕ ಕೀರ್ತನ ಗಂಗೋತ್ರಿ ಉದ್ಘಾಟನೆ
    roovari

    Add Comment Cancel Reply


    Related Posts

    ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 25

    June 23, 2025

    ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ನಿಧನ

    June 23, 2025

    ಗೋವಾ ಪಣಜಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ದ್ವಿತೀಯ ವಾರ್ಷಿಕೋತ್ಸವ

    June 23, 2025

    ಪುತ್ತೂರಿನಲ್ಲಿ ಪೆರುವಡಿ ನಾರಾಯಣ ಭಟ್ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಮತ್ತು ತಾಳಮದ್ದಳೆ ಸಪ್ತಾಹ | ಜೂನ್ 30ರಿಂದ ಜುಲೈ 06

    June 21, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.