ಸಾಲಿಗ್ರಾಮ : ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರ ನಲವತ್ತನೆಯ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಹಾಗೂ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕೊಂಡದಕುಳಿ ಕುಂಭಾಶಿ ಇವರ ವತಿಯಿಂದ ‘ಯಕ್ಷ ಮುದ್ರಾ’ ಯಕ್ಷಗಾನದ ಅಭಿನಯದಲ್ಲಿ ಹಸ್ತ ಮುದ್ರೆಯ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ದಿನಾಂಕ 06-06-2024ರಂದು ಬೆಳಗ್ಗೆ 9-30 ಗಂಟೆಯಿಂದ ಗುಂಡ್ಮಿ ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ಆಯೋಜಿಸಲಾಗಿದೆ. ಯಕ್ಷಗಾನದ ಅಭಿನಯದಲ್ಲಿ ಅಗುತ್ತಿರುವ ನ್ಯೂನತೆಯನ್ನು ಕಡಿಮೆ ಮಾಡುವ ಉದ್ದೇಶದಲ್ಲಿ ಅಭಿನಯದಲ್ಲಿ ಬರುತ್ತಿರುವ ಮುದ್ರೆಗಳ ಬಗ್ಗೆ ಕಲಾವಿದರಿಗೆ ಉಪಯುಕ್ತ ಕಾರ್ಯಾಗಾರ ಇದಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿಯ ಅಧ್ಯಕ್ಷರಾದ ಶ್ರೀ ಆನಂದ ಸಿ. ಕುಂದರ್ ಇವರು ವಹಿಸಲಿದ್ದು, ಕುಂದಾಪುರದ ಮಾನ್ಯ ಶಾಸಕರಾದ ಶ್ರೀ ಕಿರಣ್ ಕುಮಾರ ಕೊಡ್ಗಿ, ಕೆ.ಇ.ಬಿ. ನಿವೃತ್ತ ಅಧಿಕಾರಿ ಶ್ರೀ ದಿನೇಶ ಉಪ್ಪೂರ ಮತ್ತು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿಯ ಪ್ರಾಚಾರ್ಯರಾದ ಶ್ರೀ ಸದಾನಂದ ಐತಾಳ ಇವರುಗಳು ಉದ್ಘಾಟಿಸಲಿರುವರು. ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆ ಮತ್ತು ಮಂಗಳೂರಿನ ನಾಟ್ಯಾರಾಧನಾ ಕಲಾಕೇಂದ್ರದ ನಿರ್ದೇಶಕಿಯಾದ ವಿದುಷಿ ಸುಮಂಗಲಾ ರತ್ನಾಕರ ರಾವ್ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.