ಮಂಗಳೂರು : ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ವತಿಯಿಂದ ‘ಸ್ವಸ್ತಿಕ ಯಕ್ಷವಾಸ್ಯಂ’ ಇದರ ದ್ವಿತೀಯ ವಾರ್ಷಿಕೋತ್ಸವ ಪ್ರಯುಕ್ತ ‘ಸ್ವಸ್ತಿಕ ಯಕ್ಷಪರ್ಬ 2024’ ಅಂತರ್ ಕಾಲೇಜು ಯಕ್ಷಗಾನ ತಾಳಮದ್ದಳೆ ಸ್ಪರ್ಧೆಯು ದಿನಾಂಕ 09-06-2024ರಂದು ಬಂಟ್ಸ್ ಹಾಸ್ಟಲ್ ನ ಶ್ರೀಮತಿ ಗೀತಾ ಎಸ್.ಎಮ್. ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ.
ಬೆಳಿಗ್ಗೆ 8-30 ಗಂಟೆಗೆ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸ್ವಸ್ತಿಕ ಯಕ್ಷವಾಸ್ಯಂ ಇದರ ವಿದ್ಯಾರ್ಥಿಗಳಿಂದ ‘ಸುದರ್ಶನೋಪಖ್ಯಾನ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಮಧ್ಯಾಹ್ನ 1-00 ಗಂಟೆಗೆ ಅಂತರ್ ಕಾಲೇಜು ಯಕ್ಷಗಾನ ತಾಳಮದ್ದಳೆ ಸ್ಪರ್ಧೆ ನಡೆಯಲಿದೆ. ಸಂಜೆ 5-00 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮಂಗಳೂರಿನ ಶ್ರೀ ರಾಮಕೃಷ್ಣ ಶಾಲೆಯ ಶಿಕ್ಷಕರಾದ ಡಾ. ಹೇಮಲತಾ ಶೆಟ್ಟಿ ಇವರಿಗೆ ‘ಯಕ್ಷವಾಸ್ಯಂ ಕಲಾ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಚಿಂತಕರು, ಖ್ಯಾತ ನಿರೂಪಕ ನಿರ್ದೇಶಕರಾದ ಶ್ರೀ ಕದ್ರಿ ನವನೀತ್ ಶೆಟ್ಟಿ ಮತ್ತು ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ರಮೇಶ್ ಕುಲಶೇಖರ ಇವರುಗಳಿಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ.