ಬಂಟ್ವಾಳ : ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಸಮಿತಿಯ ಪದಗ್ರಹಣ ಸಮಾರಂಭದಲ್ಲಿ ಸಾಹಿತ್ಯ ಮತ್ತು ಪರಿಸರ ಕುರಿತು ಉಪನ್ಯಾಸ ಕಾರ್ಯಕ್ರಮವು ದಿನಾಂಕ 18-06-2024 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ಸಾಹಿತಿ ಗಣರಾಜ ಕುಂಬ್ಳೆ ಮಾತನಾಡಿ “ಪರಿಸರ ನಿತ್ಯನೂತನವಾಗಿದ್ದು ಪ್ರಕೃತಿಯೊಂದಿಗಿನ ಸಂವೇದನೆ ಕವಿಗಳಿಗೆ ಕವನ ರಚನೆಗೆ ಸ್ಪೂರ್ತಿಯಾಗುತ್ತದೆ.” ಎಂದು ಹೇಳಿದರು.
ಕಲ್ಲಡ್ಕ ಪ. ಪೂ. ಕಾಲೇಜಿನ ಪ್ರಾಚಾರ್ಯ ವಸಂತ ಬಲ್ಲಾಳ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉದ್ಯಮಿ ನಾಗೇಶ ಕಲ್ಲಡ್ಕ, ಪಿಂಗಾರ ಪತ್ರಿಕೆಯ ಸಂಪಾದಕ ರೇಮಂಡ್ ತಾಕೋಡೆ, ಶ್ರೀ ರಾಮ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಗೋಪಾಲ ಅಮ್ಟೂರು ಅತಿಥಿಗಳಾಗಿ ಭಾಗವಹಿಸಿದ್ದರು.
ಅಭಾಸಾಪ ಮಂಗಳೂರು ವಿಭಾಗ ಸಂಯೋಜಕ ಸುಂದರ ಇಳಂತಿಲ ಜವಾಬ್ದಾರಿ ಘೋಷಣೆ ಮಾಡಿದರು. ಬಂಟ್ವಾಳ ತಾಲೂಕು ಸಮಿತಿ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ ಅಭಿನಂದನೆ ಸಲ್ಲಿಸಿದರು. ನಿಕಟಪೂರ್ವ ಅಧ್ಯಕ್ಷ ಡಾ. ಸುರೇಶ ನೆಗಳಗುಳಿ ಮಾತನಾಡಿ ಹೊಸ ಪದಾಧಿಕಾರಿಗಳಿಗೆ ಶುಭಹಾರೈಸಿದರು. ಅಧ್ಯಕ್ಷರಾಗಿ ಪ್ರೊ. ರಾಜಮಣಿ ರಾಮಕುಂಜ, ಉಪಾಧ್ಯಕ್ಷರಾಗಿ ಈಶ್ವರ ಪ್ರಸಾದ ಕನ್ಯಾನ, ಕಾರ್ಯದರ್ಶಿಯಾಗಿ ಮಧುರ ಕಡ್ಯ ಕಲ್ಲಡ್ಕ, ಕೋಶಾಧಿಕಾರಿಯಾಗಿ ಸೀತಾ ಲಕ್ಷ್ಮೀ ವರ್ಮ ವಿಟ್ಲ, ಮಾಧ್ಯಮ ಪ್ರಮುಖರಾಗಿ ಚಿನ್ನಪ್ಪ ವೀರಕಂಬ ಜವಾಬ್ದಾರಿ ಸ್ವೀಕರಿಸಿದರು.
ವಿವಿಧ ಪದಾಧಿಕಾರಿಗಳಾಗಿ ರಮೇಶ ಬಾಯಾರ್, ಪಂಕಜಾ ಮುಡಿಪು, ಜಯಲಕ್ಷ್ಮೀ ಶೆಣೈ ಬಂಟ್ವಾಳ, ಜಯರಾಮ ಪಡ್ರೆ, ಹೇಮಾವತಿ ಸಾಲೆತ್ತೂರು, ವಿಶ್ವನಾಥ ಮಿತ್ತೂರು, ಅಶೋಕ ಕಲ್ಯಾಟೆ, ವಿನುತಾ ಮಾತಾಜಿ, ಪ್ರಶಾಂತ ಕಡ್ಯ ಇವರನ್ನು ನೇಮಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಸೀತಾಲಕ್ಷ್ಮೀ ಇವರ ಅಧ್ಯಕ್ಷತೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಪರಿಸರ ಗೀತೆಗಳ ಗಾಯನ, ಬಳಿಕ ರಾಜಮಣಿ ರಾಮಕುಂಜ ಇವರ ಅಧ್ಯಕ್ಷತೆಯಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಂದ ಸ್ವರಚಿತ ಪರಿಸರ ಜಾಗೃತಿ ಕವನ ವಾಚನ, ಆನಂತರ ಜಯಾನಂದ ಪೆರಾಜೆ ಅಧ್ಯಕ್ಷತೆಯಲ್ಲಿ ಹಿರಿಯ ಕವಿಗಳ ಕವನ ವಾಚನ ಕಾರ್ಯಕ್ರಮ ನೆರವೇರಿತು.
ಋತ್ವಿಕಾ ಮೊಳೆಯಾರ, ಸೋನಿತಾ ನೇರಳೆಕಟ್ಡೆ, ಕಾವ್ಯಾ ಕಲ್ಲಡ್ಕ, ಜಯರಾಮ ಪಡ್ರೆ, ಪಂಕಜಾ ಮುಡಿಪು, ಜಯಶ್ರೀ ಶೆಣೈ, ಹೇಮಾವತಿ ಸಾಲೆತ್ತೂರು, ಶಾಂತಾ ಪುತ್ತೂರು,ರೇಮಂಡ್ ಡಿ’ಕೂನ್ಹಾ ತಾಕೊಡೆ, ಡಾ ಸುರೇಶ ನೆಗಳಗುಳಿ ಇವರು ಸ್ವರಚಿತ ಪರಿಸರ ಸಂಬಂಧೀ ಕವನ ವಾಚಿಸಿದರು. ಕಾರ್ಯಕ್ರಮವು ಕುಮಾರಿ ದಾತ್ರಿಯವರ ಸರಸ್ವತಿ ಸ್ತುತಿಯೊಂದಿಗೆ ಆರಂಭಗೊಂಡಿತು. ಕಾರ್ಯಕ್ರಮವನ್ನು ಅಪೂರ್ವ ಕಾರಂತರವರು ನಿರೂಪಿಸಿ, ಮಧುರ ಕಡ್ಯ ಅವರ ಧನ್ಯವಾದ ಸಮರ್ಪಿಸಿದರು.