ನವದೆಹಲಿ : ಭರತನಾಟ್ಯ ಮತ್ತು ಕೂಚುಪುಡಿಯ ಹೆಸರಾಂತ ನೃತ್ಯ ಕಲಾವಿದೆ ಯಾಮಿನಿ ಕೃಷ್ಣಮೂರ್ತಿ ಅವರು 03 ಆಗಸ್ಟ್ 2024ರ ಶನಿವಾರದಂದು ನಿಧನರಾದರು. ಅವರಿಗೆ 84ವರ್ಷ ವಯಸ್ಸಾಗಿತ್ತು. ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಏಳು ತಿಂಗಳಿಂದ ತೀವ್ರ ನಿಗಾ ಘಟಕದಲ್ಲಿ (ಐ. ಸಿ. ಯು.) ಚಿಕಿತ್ಸೆ ಪಡೆಯುತ್ತಿದ್ದರು. ಯಾಮಿನಿ ಅವರಿಗೆ ಇಬ್ಬರು ಸಹೋದರಿಯರಿದ್ದಾರೆ.
ಸಂಸ್ಕೃತ ವಿದ್ವಾಂಸ ಎಂ. ಕೃಷ್ಣಮೂರ್ತಿ ಇವರ ಮಗಳಾದ ಯಾಮಿನಿ ಕೃಷ್ಣಮೂರ್ತಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಯಲ್ಲಿ 1940ರ ಡಿಸೆಂಬರ್ 20ರಂದು ಜನಿಸಿದರು.
ತನ್ನ ಐದನೇ ವಯಸ್ಸಿನಿಂದಲೇ ಭರತನಾಟ್ಯ ಕಲಿಕೆಯನ್ನು ಪ್ರಾರಂಬಿಸಿದ ಇವರಿಗೆ ‘ಪದ್ಮಶ್ರೀ’, ‘ಪದ್ಮಭೂಷಣ’, ’ಪದ್ಮ ವಿಭೂಷಣ’, ‘ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ’ಗಳು ಸಂದಿವೆ.
Subscribe to Updates
Get the latest creative news from FooBar about art, design and business.
Related Posts
Comments are closed.